ದೆಹಲಿ: ಟ್ವಿಟರ್ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ತನ್ನ ಮೊದಲ ಕುಂದುಕೊರತೆ ಪರಿಹಾರ ವರದಿಯನ್ನು ಸಲ್ಲಿಸಿದೆ. ಗೌಪ್ಯತೆ ಉಲ್ಲಂಘಿಸಿದ ಕಾರಣದಿಂದ 133 ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದು, 18,000 ಕ್ಕೂ ಹೆಚ್ಚು ಖಾತೆಗಳನ್ನು ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಾರಣಗಳಿಗಾಗಿ ಅಮಾನತುಗೊಳಿಸಿದೆ. ಅತ್ಯಂತ ಮುಖ್ಯವಾಗಿ ಭಯೋತ್ಪಾದನೆಯನ್ನು ಉತ್ತೇಜನೆ ನೀಡಿದ ಕಾರಣಕ್ಕೆ ಒಟ್ಟು 4,179 ಖಾತೆಗಳನ್ನು ರದ್ದುಗೊಳಿಸಲಾಗಿದೆ.
ಇಷ್ಟೇ ಅಲ್ಲದೇ ಇನ್ನೂ 56 ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸುವಂತೆ ಕುಂದುಕೊರತೆ ಅಧಿಕಾರಿಗೆ ದೂರು ಬಂದಿತ್ತು. ಆ ಎಲ್ಲಾ ದೂರುಗಳನ್ನೂ ಪರಿಹರಿಸಲಾಗಿದ್ದು, ದೂರು ಸಲ್ಲಿಸಿದವರಿಗೆ ಪ್ರತಿಕ್ರಿಯೆ ನೀಡಲಾಗಿದೆ. ಆದರೆ ಈ ಪೈಕಿ 7 ಅಮಾನತುಗಳಿಸಲಾದ ಟ್ವಿಟರ್ ಅಕೌಂಟ್ಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ. ಮೇ 25ರಿಂದ ಜೂನ್ 26ರವರೆಗೆ ಈ ಹೊಸ ಐಟಿ ನಿಯಮಗಳಿಗೆ ಅನುಸಾರಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಟರ್ ತಿಳಿಸಿದೆ.
ಟ್ವಿಟರ್ (Twitter) ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್ರನ್ನು ಭಾನುವಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮ (IT Rules)ಗಳ ಪ್ರಕಾರ ಟ್ವಿಟರ್ ಭಾರತದಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡೆಲ್ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಲೇಬೇಕಾಗಿದೆ. ಕೇವಲ ಟ್ವಿಟರ್‌ಗೆ ಮಾತ್ರವಲ್ಲ, ಭಾರತದಲ್ಲಿ 50 ಲಕ್ಷ ಬಳಕೆದಾರರನ್ನು ಹೊಂದಿರುವ ಯಾವುದೇ ಸಾಮಾಜಿಕ ಜಾಲತಾಣ ಈ ಮೂರು ರೀತಿಯ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಕ ಮಾಡಬೇಕಾಗಿದೆ. ಆದರೆ ಈ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದ್ದು ಹೈಕೋರ್ಟ್ ಮೆಟ್ಟಿಲನ್ನೂ ಏರಿದೆ.
ಇನ್ನು ಐಟಿ ನಿಯಮ ಪಾಲನೆ ಮಾಡುವಲ್ಲಿ ಟ್ವಿಟರ್ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದ್ದ ಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಟ್ವಿಟರ್, ನಮಗೆ ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಲು ಇನ್ನೂ 8 ವಾರಗಳ ಕಾಲಾವಕಾಶ ಬೇಕು ಎಂದು ಹೇಳಿತ್ತು. ಭಾರತದಲ್ಲಿ ನಾವು ಸಂಪರ್ಕ ಕಚೇರಿ ನಿರ್ಮಾಣದ ಪ್ರಕ್ರಿಯೆ ನಡೆಸುತ್ತಿದ್ದೇವೆ. ಅದಾದ ಬಳಿಕ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿತ್ತು.
ಇದನ್ನೂ ಓದಿ:
(133 posts actioned, 18k accounts suspended: Twitter’s first compliance report under new rules)