ಯೋಗಿ ಆದಿತ್ಯನಾಥ ಮುಖ್ಯಮಂತ್ರಿಗಳಾದ ನಂತರ 139 ಅಪರಾಧಿಗಳನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿದೆ: ಮೂಲಗಳು

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕುಖ್ಯಾತ ಅಪರಾಧಿಗಳನ್ನು ಮಟ್ಟ ಹಾಕಲು ಮತ್ತು ಎಲ್ಲ ಬಗೆಯ ಮಾಫಿಯಾ ಮತ್ತು ಅವುಗಳ ಸಹಚರರನ್ನು ಸದೆಬಡಿಯಲು ಹಲವಾರು ವಿಧಾನಗಳನ್ನು ಜಾರಿಗೆ ತರಲಾಗಿದೆ ಎಂದು ಅವಸ್ಥಿ ಹೇಳಿದರು.

ಯೋಗಿ ಆದಿತ್ಯನಾಥ ಮುಖ್ಯಮಂತ್ರಿಗಳಾದ ನಂತರ 139 ಅಪರಾಧಿಗಳನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿದೆ: ಮೂಲಗಳು
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಸಾಂದರ್ಭಿಕ ಚಿತ್ರ)

ಲಖನೌ: ಯೋಗಿ ಆದಿತ್ಯನಾಥ್ ಅವರು ಮಾರ್ಚ್ 2017 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ 139 ಅಪರಾಧಿಗಳನ್ನು ಪೊಲೀಸ್ ಎನ್​ಕೌಂಟರ್​ಗಳಲ್ಲಿ ಕೊಂದು ಹಾಕಲಾಗಿದೆ ಎಂದು ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶ್ವಿನಿ ಕುಮಾರ್ ಅವಸ್ಥಿ ಅವರು ಮಂಗಳವಾರ ಹೇಳಿದರು. ಅಷ್ಟು ಮಾತ್ರವಲ್ಲದೆ; ಹೀನ ಅಪರಾಧಿ ಇತಿಹಾಸ ಹೊಂದಿರುವ 3,196 ದುಷ್ಕರ್ಮಿಗಳನ್ನು ಗಾಯಗೊಳಿಸಿಲಾಗಿದೆ ಎಂದು ತಿಳಿಸಿದ ಅವಸ್ಥಿ, ಈ ಎನ್​ಕೌಂಟರ್​ಗಳಲ್ಲಿ ಪೊಲೀಸ ಇಲಾಖೆಯ 13 ಸಿಬ್ಬಂದಿ ಪ್ರಾಣ ತೆತ್ತಿದ್ದಾರೆ ಮತ್ತು 1,122 ಜನ ಗಾಯಗೊಂಡಿದ್ದಾರೆ ಎಂದರು.

ಮುಂದುವರೆದು ಹೇಳಿದ ಹಿರಿಯ ಅಧಿಕಾರಿ ಅವಸ್ಥಿ, ಯೋಗಿ ಅವರ ಅಧಿಕಾರಾವಧಿಯಲ್ಲಿ ವ್ಯವಸ್ಥಿತ ಅಪರಾಧ ಚಟುವಟಿಕೆಗಳನ್ನು ನಿರ್ಮೂಲಮಾಡಲಾಗಿದೆ ಮತ್ತು ಈ ನಾಲ್ಕು ವರ್ಷಗಳ ಅವಧಿಯಲ್ಲಿ ರೂ 1,574 ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕುಖ್ಯಾತ ಅಪರಾಧಿಗಳನ್ನು ಮಟ್ಟ ಹಾಕಲು ಮತ್ತು ಎಲ್ಲ ಬಗೆಯ ಮಾಫಿಯಾ ಮತ್ತು ಅವುಗಳ ಸಹಚರರನ್ನು ಸದೆಬಡಿಯಲು ಹಲವಾರು ವಿಧಾನಗಳನ್ನು ಜಾರಿಗೆ ತರಲಾಗಿದೆ ಎಂದು ಅವಸ್ಥಿ ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಇದುವರೆಗೆ 13,700 ಪ್ರಕರಣಗಳನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ ಮತ್ತು 43,000 ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಅವಸ್ಥಿ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯರ ಲೋಕ ಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ರೂ. 202.20 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಗೂಂಡಾ ಕಾಯ್ದೆ ಅಡಿಯಲ್ಲಿ 420 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸುದ್ದಿಮೂಲಗಳಿಂದ ಗೊತ್ತಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿ, ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ ಕ್ರೇಗ್​ ಕೆಲ್ಲಿ