ಲಕ್ನೋ: 100 ವರ್ಷಗಳ ಹಿಂದೆ ಕಾಶಿಯಿಂದ ಕಳುವಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹ ಕೊನೆಗೂ ಆ ದೇವಿಯ ತವರಾದ ವಾರಾಣಸಿಗೆ ವಾಪಾಸಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು ಒಂದು ಶತಮಾನದ ಹಿಂದೆ ಭಾರತದ ಕಾಶಿಯಿಂದ ಕಳವು ಮಾಡಲಾದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾದಿಂದ ಮರಳಿ ತರಲಾಗುತ್ತಿದೆ ಎಂದು ಘೋಷಿಸಿದ್ದರು. ಅದರಂತೆ ಇದೀಗ 18ನೇ ಶತಮಾನದ ಆ ವಿಗ್ರಹವನ್ನು ಕಾಶಿಗೆ ವಾಪಾಸ್ ತರಲಾಗುತ್ತಿದೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸರ್ಕಾರವು ವಿಗ್ರಹವನ್ನು ಸ್ವೀಕರಿಸಿದೆ ಮತ್ತು ಅದನ್ನು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡುತ್ತಿದೆ ಎಂದು ತಿಳಿಸಿದರು. 100 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಅದು ಬೇರೆಯವರ ಕೈಯಿಂದ ಕೊನೆಗೆ ಕೆನಡಾದ ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಇದೀಗ ಭಾರತ ಸರ್ಕಾರವು ಕೆನಡಾದ ವಿಶ್ವವಿದ್ಯಾನಿಲಯದಿಂದ ಆ ವಿಗ್ರಹವನ್ನು ವಾಪಾಸ್ ಪಡೆದಿದೆ. ಅದನ್ನು ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಲಾಗುತ್ತಿದೆ ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.
100 years ago an idol of Maa Annapurna was stolen from Kashi. It ended up at a university in Canada with the exchange of hands. Government of India has received that idol from the University, it is now being given to the Govt of Uttar Pradesh: UP CM Yogi Adityanath, in Lucknow pic.twitter.com/zcYVID48bG
— ANI UP (@ANINewsUP) November 3, 2021
ಹಾಗೇ, ವಿವಿಧ ದೇಶಗಳಿಂದ 55 ವಿಗ್ರಹಗಳು, ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ತರಲು ಪ್ರಧಾನಿ ಮೋದಿ ವ್ಯವಸ್ಥೆ ಮಾಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಇಂದು ಹೇಳಿದ್ದಾರೆ. 55 ಪುರಾತನ ವಸ್ತುಗಳ ಪೈಕಿ 42ನ್ನು 2014ರ ನಂತರ ಹಿಂತಿರುಗಿಸಲಾಗಿದ್ದು, ಅನ್ನಪೂರ್ಣ ದೇವಿ ಇದಕ್ಕೆ ಕೊನೆಯ ಸೇರ್ಪಡೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
100 ವರ್ಷಗಳ ಹಿಂದಿನ ಅನ್ನಪೂರ್ಣ ವಿಗ್ರಹವನ್ನು ನವೆಂಬರ್ 11 ರಂದು ಅಲಿಘರ್‌ಗೆ ಕೊಂಡೊಯ್ಯಲಾಗುತ್ತದೆ ಮತ್ತು ನವೆಂಬರ್ 14 ರಂದು ಅಯೋಧ್ಯೆಗೆ ತಲುಪುತ್ತದೆ. ಬಳಿಕ, ನವೆಂಬರ್ 15 ರಂದು ಆ ವಿಗ್ರಹ ವಾರಾಣಸಿಯನ್ನು ತಲುಪುತ್ತದೆ. ಅಲ್ಲಿ ಸೂಕ್ತ ಧಾರ್ಮಿಕ ಕ್ರಿಯೆಗಳ ನಂತರ ಕಾಶಿ ವಿಶ್ವನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಸುಮಾರು 100 ವರ್ಷಗಳ ಹಿಂದೆ ಕದ್ದು ಕೆನಡಾಕ್ಕೆ ಕೊಂಡೊಯ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಭಾರತಕ್ಕೆ ತರಲಾಗುತ್ತಿದ್ದು, ನವೆಂಬರ್ 14ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಆ ಪುರಾತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಈ ದೇವಿ ಒಂದು ಕೈಯಲ್ಲಿ ಖೀರ್ ಮತ್ತು ಇನ್ನೊಂದು ಕೈಯಲ್ಲಿ ಸೌಟನ್ನು ಹಿಡಿದಿದ್ದಾಳೆ. ವಿಭಿನ್ನವಾಗಿರುವ ಈ 100 ವರ್ಷಗಳ ಹಿಂದಿನ ವಿಗ್ರಹ ಕೊನೆಗೂ ಭಾರತಕ್ಕೆ ವಾಪಾಸ್ ಸಿಗುತ್ತಿದೆ.
Published On - 2:25 pm, Wed, 3 November 21