ಜಮ್ಮುವಿನಲ್ಲಿ ಸೇತುವೆಯಿಂದ ಉರುಳಿದ ಮಿನಿ ಬಸ್; ಇಬ್ಬರು ಸಾವು, ಹಲವರಿಗೆ ಗಾಯ

| Updated By: ಸುಷ್ಮಾ ಚಕ್ರೆ

Updated on: May 28, 2022 | 9:19 AM

ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಲಡಾಖ್​ನಲ್ಲಿ ಸೇನಾ ವಾಹನ ಶ್ಯೋಕ್ ನದಿಗೆ ಉರುಳಿದ ಪರಿಣಾಮ 7 ಮಂದಿ ಯೋಧರು ಸಾವನ್ನಪ್ಪಿದ್ದರು, ಹಲವು ಸೈನಿಕರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅದೇ ದಿನ ರಾತ್ರಿ ಜಮ್ಮುವಿನಲ್ಲಿ ಈ ಘಟನೆ ನಡೆದಿದೆ.

ಜಮ್ಮುವಿನಲ್ಲಿ ಸೇತುವೆಯಿಂದ ಉರುಳಿದ ಮಿನಿ ಬಸ್; ಇಬ್ಬರು ಸಾವು, ಹಲವರಿಗೆ ಗಾಯ
ಜಮ್ಮುವಿನಲ್ಲಿ ಅಪಘಾತ
Image Credit source: times now
Follow us on

ಜಮ್ಮು: ಶುಕ್ರವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ತಾವಿ ಸೇತುವೆಯಿಂದ ಮಿನಿ ಬಸ್​ (Mini Bus) ಕೆಳಗೆ ಉರುಳಿದ ಹಿನ್ನೆಲೆಯಲ್ಲಿ ಭಾರೀ ಅಪಘಾತ (Bus Accident) ಸಂಭವಿಸಿದೆ. ಮಿನಿ ಬಸ್​ ಸೇತುವೆಯಿಂದ ಕೆಳಗೆ ಬಿದ್ದುದರಿಂದ ಆ ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೆಟಾಡೋರ್ ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಆಯತಪ್ಪಿ ಬಸ್ ಕೆಳಗೆ ಬಿದ್ದಿದೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಜಮ್ಮು ಕಾಶ್ಮೀರದ ಲಡಾಖ್​ನಲ್ಲಿ ಸೇನಾ ವಾಹನ ಶ್ಯೋಕ್ ನದಿಗೆ ಉರುಳಿದ ಪರಿಣಾಮ 7 ಮಂದಿ ಯೋಧರು ಸಾವನ್ನಪ್ಪಿದ್ದರು, ಹಲವು ಸೈನಿಕರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅದೇ ದಿನ ರಾತ್ರಿ ಜಮ್ಮುವಿನಲ್ಲಿ ಈ ಘಟನೆ ನಡೆದಿದೆ. ಮಿನಿ ಬಸ್​ನಲ್ಲಿದ್ದವರ ಉಳಿದ ಪ್ರಯಾಣಿಕರ ಸ್ಥಿತಿ ಹೇಗಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಟಿಕ್ ಟಾಕ್ ಮತ್ತು ಟಿವಿ ತಾರೆ ಭಯೋತ್ಪಾದಕರ ಗುಂಡಿಗೆ ಬಲಿ. 10-ವರ್ಷದ ಸಂಬಂಧಿಗೆ ಗಾಯ

ಇದನ್ನೂ ಓದಿ
ಇನ್ನು ಈ 16 ಔಷಧಿ ಖರೀದಿಸಲು ಪ್ರಿಸ್ಕ್ರಿಪ್ಷನ್ ಬೇಕಾಗಿಲ್ಲ; ಶೀಘ್ರದಲ್ಲೇ ಪರಿಷ್ಕೃತ ನಿಯಮ ಜಾರಿ
NT Rama Rao Birth Anniversary: ಇವರಂಥ ಜನಪ್ರಿಯ ನಟ ಮತ್ತು ಜನಾನುರಾಗಿ ನಾಯಕ ಶತಮಾನಕ್ಕೊಬ್ಬರೇ
Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ
Monsoon 2022: ಕರ್ನಾಟಕದ ಕರಾವಳಿಯಲ್ಲಿ ಇಂದು ಮಳೆ; ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ಶುಕ್ರವಾರ ಕಾಶ್ಮೀರದ ಲಡಾಖ್​ನಲ್ಲಿ 26 ಮಂದಿ ಸೈನಿಕರು ಸೇನಾ ವಾಹನದಲ್ಲಿ ಸಾಗುತ್ತಿದ್ದ ವೇಳೆ ಸ್ಕಿಡ್ ಆಗಿ ವಾಹನ ಶ್ಯೋಕ್ ನದಿಗೆ ಬಿದ್ದಿತ್ತು. 26 ಮಂದಿ ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ಉಪ ವಲಯದ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿತ್ತು. ಇದರ ಪರಿಣಾಮವಾಗಿ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿತ್ತು ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ 26 ಸೈನಿಕರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೂ ಅವರಲ್ಲಿ ಏಳು ಮಂದಿ ಹುತಾತ್ಮರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:17 am, Sat, 28 May 22