13 ಭಯೋತ್ಪಾದಕರಲ್ಲಿ ಇಬ್ಬರು ವಡೋದರಾ ಹೋಟೆಲ್‌ನಲ್ಲಿ ತಂಗಿದ್ದರು; ಎಟಿಎಸ್ ತನಿಖೆಯಲ್ಲಿ ಬಯಲು

ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ವಡೋದರಾದ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ. ಸಯಾಜಿಗುಂಜ್‌ನ ಅಂಬಾಸಿಡರ್ ಹೋಟೆಲ್‌ನಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ತಂಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಎಟಿಎಸ್ ಬಂಧಿಸಿದ 13 ಭಯೋತ್ಪಾದಕರಲ್ಲಿ ಇಬ್ಬರು ವಡೋದರಾದ ಹೋಟೆಲ್‌ನಲ್ಲಿ ತಂಗಿದ್ದರು. ಒಬ್ಬ ಭಯೋತ್ಪಾದಕ ಕಾಶ್ಮೀರದಿಂದ ವಡೋದರಾಕ್ಕೆ ಬಂದಿದ್ದ. ಭಯೋತ್ಪಾದಕರಾದ ಅಹ್ಮದ್ ಘಾಜಿವಾಲಾ ಮತ್ತು ಇಬ್ರಾಹಿಂ ಘಾಘಾ ವಡೋದರಾದಲ್ಲಿ ಭಯೋತ್ಪಾದಕರೊಂದಿಗೆ ಸಭೆ ನಡೆಸಿದ್ದರು. ಈ ಇಡೀ ಪ್ರಕರಣದಲ್ಲಿ ಪಾಲನ್‌ಪುರದ ಭಾಗಲ್ ಗ್ರಾಮದ ಸಂಪರ್ಕವು ವಡೋದರಾಗೆ ಸಂಬಂಧಿಸಿದೆ. ಈ ಇಡೀ ವಿಷಯದಲ್ಲಿ ಹೋಟೆಲ್ ಮಾಲೀಕರ ಪಾತ್ರದ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

13 ಭಯೋತ್ಪಾದಕರಲ್ಲಿ ಇಬ್ಬರು ವಡೋದರಾ ಹೋಟೆಲ್‌ನಲ್ಲಿ ತಂಗಿದ್ದರು; ಎಟಿಎಸ್ ತನಿಖೆಯಲ್ಲಿ ಬಯಲು
Vadodara Crime News
Image Credit source: TV9

Updated on: Jul 22, 2026 | 3:03 PM

ವಡೋದರಾ, ಜುಲೈ 22: ಗುಜರಾತ್‌ನಲ್ಲಿ ಉಗ್ರರ ಜಾಲವನ್ನು ಮಟ್ಟಹಾಕಲು ಗುಜರಾತ್ ಎಟಿಎಸ್ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬೀಳುತ್ತಿವೆ. ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣದಲ್ಲಿ ಎಟಿಎಸ್ ವಶಕ್ಕೆ ಪಡೆದಿರುವ ಒಟ್ಟು 13 ಉಗ್ರರಲ್ಲಿ ಇಬ್ಬರು ಉಗ್ರರು ವಡೋದರಾದ ಪ್ರಸಿದ್ಧ ಹೋಟೆಲ್‌ನಲ್ಲಿ ತಂಗಿದ್ದರು ಎಂಬ ವಿಷಯ ತನಿಖೆಯಿಂದ ಬಹಿರಂಗವಾಗಿದೆ.

ಎಟಿಎಸ್​ನಿಂದ ಬಂಧನಕ್ಕೊಳಗಾಗಿರುವ ಉಗ್ರರಾದ ಅಹಮದ್ ಗಾಜಿವಾಲಾ ಮತ್ತು ಇಬ್ರಾಹಿಂ ಘಘಾ ಎಂಬಿಬ್ಬರು ವಡೋದರಾದ ಸಯಾಜಿಗಂಜ್ ಪ್ರದೇಶದಲ್ಲಿರುವ ಅಂಬಾಸಿಡರ್ ಹೋಟೆಲ್​ನಲ್ಲಿ ತಂಗಿದ್ದರು ಎಂಬುದು ಖಚಿತಪಟ್ಟಿದೆ. ಈ ಇಬ್ಬರೂ ಉಗ್ರರು ಈ ಹೋಟೆಲ್‌ನಲ್ಲಿ ಉಳಿದುಕೊಂಡು, ಕಾಶ್ಮೀರದಿಂದ ಮತ್ತೊಬ್ಬ ಶಂಕಿತ ಉಗ್ರನನ್ನು ವಡೋದರಾಗೆ ಕರೆಸಿಕೊಂಡು ರಹಸ್ಯ ಸಭೆ ನಡೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ಈ ಆಘಾತಕಾರಿ ಸುದ್ದಿ ಹೊರಬಿದ್ದ ತಕ್ಷಣವೇ ಗುಜರಾತ್ ಎಟಿಎಸ್‌ನ ವಿಶೇಷ ತಂಡಗಳು ವಡೋದರಾದ ಸಯಾಜಿಗಂಜ್‌ಗೆ ಧಾವಿಸಿ ಹೋಟೆಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ಹೋಟೆಲ್‌ನ ಮಾಲೀಕರು ತಮ್ಮಲ್ಲಿ ತಂಗಿದ್ದವರು ಉಗ್ರರು ಎಂಬ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆದರೂ ಈ ವಿಷಯದಲ್ಲಿ ಹೋಟೆಲ್ ಮಾಲೀಕರ ಪಾತ್ರ ಅಥವಾ ನಿರ್ಲಕ್ಷ್ಯದ ಕುರಿತೂ ಎಟಿಎಸ್ ಅನುಮಾನ ವ್ಯಕ್ತಪಡಿಸಿದ್ದು, ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್​ಗೆ ಪಾಕಿಸ್ತಾನ ಬ್ಯಾಂಕ್​ ಲಿಂಕ್

ಕಾಶ್ಮೀರಿ ನಂಟು:

ವಡೋದರಾದಲ್ಲಿ ಇಬ್ಬರೂ ಉಗ್ರರು ಭೇಟಿಯಾದ ಕಾಶ್ಮೀರಿ ವ್ಯಕ್ತಿ ಯಾರು? ಆತನಿಗೆ ಈ ಉಗ್ರ ಮಾಡ್ಯೂಲ್ ಜೊತೆಗಿರುವ ಸಂಬಂಧವೇನು ಎಂಬ ದಿಕ್ಕಿನಲ್ಲಿ ಎಟಿಎಸ್ ತನಿಖೆ ನಡೆಸುತ್ತಿದೆ. ಗುಜರಾತ್‌ನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಜಾಲವನ್ನು ಭೇದಿಸಿರುವ ಎಟಿಎಸ್, ಜುಲೈ ಆರಂಭದಲ್ಲಿ 8 ಉಗ್ರರನ್ನು ಮತ್ತು ಇತ್ತೀಚೆಗೆ ಮತ್ತಷ್ಟು ವಿಚಾರಣೆಯ ನಂತರ 5 ಉಗ್ರರನ್ನು ಸೇರಿದಂತೆ ಒಟ್ಟು 13 ಶಂಕಿತ ಉಗ್ರರನ್ನು ಬಂಧಿಸಿದೆ.

ಇವರು ತರಬೇತಿ ಪಡೆದು ಕಚ್ಚಾ ಟೈಮ್ ಬಾಂಬ್ ಪ್ರಯೋಗಗಳನ್ನು ನಡೆಸಿ, ರಾಜ್ಯದಲ್ಲಿ ನೆಟ್‌ವರ್ಕ್ ವಿಸ್ತರಿಸಲು ಯತ್ನಿಸುತ್ತಿದ್ದರು ಎಂದು ಎಟಿಎಸ್ ತಿಳಿಸಿದೆ. ವಡೋದರಾದಲ್ಲಿ ನಡೆದಿರುವ ಈ ಹೊಸ ಸೀಕ್ರೆಟ್ ಮೀಟಿಂಗ್ ಸುಳಿವು ಈ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us