AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಮೊದಲು: ಸಿಆರ್​ಪಿಎಫ್ ಐಜಿ ಶ್ರೇಣಿಗೆ ಮಹಿಳೆಯರು, ಮಹಿಳಾ ಸಮಾನತೆ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು

ಸಿಆರ್‌ಪಿಎಫ್ (CRPF) ನಲ್ಲಿ ಮೊದಲ ಮಹಿಳಾ ಬೆಟಾಲಿಯನ್ ಅನ್ನು ಸ್ಥಾಪಿಸಿದ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಇನ್ಸ್ಪೆಕ್ಟರ್ ಜನರಲ್ (IG) ದರ್ಜೆಗೆ ಬಡ್ತಿ ಪಡೆದಿದ್ದಾರೆ.

ಇದೇ ಮೊದಲು: ಸಿಆರ್​ಪಿಎಫ್ ಐಜಿ ಶ್ರೇಣಿಗೆ ಮಹಿಳೆಯರು, ಮಹಿಳಾ ಸಮಾನತೆ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು
ಅನ್ನಿ ಅಬ್ರಹಾಂ ಮತ್ತು ಸೀಮಾ ಧುಂಡಿಯಾ
TV9 Web
| Updated By: ಆಯೇಷಾ ಬಾನು

Updated on:Nov 03, 2022 | 8:20 AM

Share

ದೆಹಲಿ: ಯಾವ ಕ್ಷೇತ್ರವನ್ನೂ ಬಿಡದೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಹೆಸರನ್ನು ಮಾಡಿ ಮುನ್ನುಗ್ಗುತ್ತಿದ್ದಾರೆ. ಇದರ ಪೈಕಿ ದೇಶದ ಅತಿ ದೊಡ್ಡ ಅರೆ ಮಿಲಿಟರಿ ಪಡೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force – CRPF)ಯಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಇನ್‌ಸ್ಪೆಕ್ಟರ್ ಜನರಲ್ (Inspector General -IG) ಶ್ರೇಣಿಗೆ ಬಡ್ತಿ ನೀಡಲಾಗಿದೆ.

ಸಿಆರ್‌ಪಿಎಫ್ (CRPF) ನಲ್ಲಿ ಮೊದಲ ಮಹಿಳಾ ಬೆಟಾಲಿಯನ್ ಅನ್ನು ಸ್ಥಾಪಿಸಿದ 35 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅನ್ನಿ ಅಬ್ರಹಾಂ ಮತ್ತು ಸೀಮಾ ಧುಂಡಿಯಾ ಇಬ್ಬರು ಮಹಿಳಾ ಅಧಿಕಾರಿಗಳು ಇನ್ಸ್ಪೆಕ್ಟರ್ ಜನರಲ್ (IG) ದರ್ಜೆಗೆ ಬಡ್ತಿ ಪಡೆದಿದ್ದಾರೆ. ಉಭಯ ಅಧಿಕಾರಿಗಳು 1987ರಲ್ಲಿ ಸೇರ್ಪಡೆಯಾಗಿದ್ದರು. ಐಜಿ ಹುದ್ದೆಯ CRPFನ ಒಂದು ವಲಯದ ಮುಖ್ಯ ಅಧಿಕಾರಿ ಹುದ್ದೆಯಾಗಿರುತ್ತದೆ. CRPF ಪ್ರಧಾನ ಕಚೇರಿಯ ಆದೇಶದ ಪ್ರಕಾರ, ಅನ್ನಿ ಅಬ್ರಹಾಂ ಅವರನ್ನು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್)ನ ಐಜಿಯಾಗಿ ನೇಮಿಸಲಾಗಿದೆ. ಆದರೆ ಸೀಮಾ ಧುಂಡಿಯಾ ಅವರನ್ನು ಬಿಹಾರ ವಲಯದ ಐಜಿಯಾಗಿ ನಿಯೋಜಿಸಲಾಗಿದೆ. ಮಹಿಳೆಯೊಬ್ಬರು ಆರ್‌ಎಎಫ್‌ನ ಮುಖ್ಯಸ್ಥರಾಗುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಟ್ಟ ಮೊದಲು ಬಾರಿಗೆ ಸರ್ಕಾರದಿಂದ ತೃತೀಯ ಲಿಂಗಿಗಳ ಆಶ್ರಯ ಜಾಗ: ನಮ್ಮನೆ ಸುಮ್ಮನೆಗೆ ಭೂಮಿ ಪೂಜೆ ಮಾಡಿದ ಅಶೋಕ್

“ನಾವು 1986 ರಲ್ಲಿ CRPF ಗೆ ಸೇರಿದ್ದು, ಒಂದು ವರ್ಷದ ನಂತರ ನಿಯುಕ್ತರಾಗಿದ್ದೆವು. ಅಲ್ಲಿಂದ ಇಲ್ಲಿಯವರೆಗೆ ಹಲವು ಕಷ್ಟಕರ ಸನ್ನಿವೇಶಗಳನ್ನು ಕಂಡಿದ್ದೇವೆ’ ಎಂದು ಅಬ್ರಹ್ಮಾಂ ಎನ್‌ಡಿಟಿವಿ ಜತೆ ಮಾತನಾಡುವ ವೇಳೆ ವಿವರಿಸಿದರು. ತರಬೇತಿ ಬಳಿಕ ಅಯೋಧ್ಯೆಗೆ ನಿಯೋಜನೆಗೊಂಡಿದ್ದ ಅವರು, ಆಗಷ್ಟೇ ಚಕಮಕಿಗಳು ಆರಂಭವಾಗಿದ್ದವು. ಆದರೆ ನಾವು ಅದರಿಂದ ಸಾಕಷ್ಟು ಕಲಿತೆವು ಎಂದು ಹೇಳಿದರು. ಉಭಯ ಅಧಿಕಾರಿಗಳು ವಿಶ್ವಸಂಸ್ಥೆಯಲ್ಲಿ ಎಲ್ಲ ಮಹಿಳೆಯರನ್ನೇ ಹೊಂದಿರುವ ಭಾರತೀಯ ಪೊಲೀಸ್ ಪಡೆಯ ನೇತೃತ್ವವನ್ನೂ ವಹಿಸಿದ್ದರು. ಇವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪದಕ, ಉತ್ತಮ ಸೇವೆಗಾಗಿ ಪೊಲೀಸ್ ಪದಕ, ಅತಿ ಉತ್ಕೃಷ್ಟ ಸೇವಾ ಪದಕಗಳು ಲಭಿಸಿದ್ದವು ಎಂದು CRPF ವಕ್ತಾರರು ಹೇಳಿದ್ದಾರೆ. ಈ ಬಗ್ಗೆ ND Tv ವರದಿ ಮಾಡಿದೆ.

Published On - 8:20 am, Thu, 3 November 22

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಯ್ತು ‘ರಾಮಾಯಣ’ ಸಿನಿಮಾ ಮೊದಲ ಗ್ಲಿಂಪ್ಸ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್