Train Accident: ಆಂಧ್ರಪ್ರದೇಶದಲ್ಲಿ 2023ರಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕಾರಣ ಕೊಟ್ಟ ಸಚಿವ ಅಶ್ವಿನಿ ವೈಷ್ಣವ್
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ ಕಳೆದ ವರ್ಷ ಅಕ್ಟೋಬರ್ 29ರಂದು ಸಂಜೆ 7 ಗಂಟೆಗೆ ರಾಯಗಡ ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ ಪಲಾಸ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಈ ಅಪಘಾತಕ್ಕೆ ಪೈಲಟ್ ಹಾಗೂ ಲೋಕೋಪೈಲಟ್ ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದೇ ಕಾರಣ ಎಂಬುದು ತಿಳಿದುಬಂದಿದೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 2023ರಲ್ಲಿ ಸಂಭವಿಸಿದ್ದ ಎರಡು ರೈಲುಗಳ ಮಧ್ಯೆ ಸಂಭವಿಸಿದ್ದ ಡಿಕ್ಕಿಗೆ ಕಾರಣವೇನೆಂಬುದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 14 ಜನರ ಸಾವಿಗೆ ಕಾರಣವಾದ ಅಪಘಾತದ ನಿಜವಾದ ಸತ್ಯ ಬೆಳಕಿಗೆ ಬಂದಿದೆ. ಅಪಘಾತದ ಕಾರಣದ ಬಗ್ಗೆ ಸ್ವತಃ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnav) ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 29, 2023 ರಂದು ಆಂಧ್ರಪ್ರದೇಶದ ಕಂಟಕಪ್ಪಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿತ್ತು.
ರಾಯಗಡ ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ ಪಲಾಸ ರೈಲಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ರಾಯಗಢ ಪ್ಯಾಸೆಂಜರ್ ರೈಲಿನ ಪೈಲಟ್ ಮತ್ತು ಸಹ ಪೈಲಟ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಸಿದಾಗ, ಅಪಘಾತಕ್ಕೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಕಾರಣ ಎಂದು ತಿಳಿದುಬಂದಿದೆ.
ಇಬ್ಬರೂ ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು, ಇದರಿಂದಾಗಿ ಅವರ ಗಮನ ಬೇರೆಡೆಗೆ ತಿರುಗಿತು. ಹೀಗಾಗಿ ಅಪಘಾತಕ್ಕೆ ಇಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಇಬ್ಬರೂ ಮ್ಯಾಚ್ ನೋಡುವುದರಲ್ಲಿ ಮಗ್ನರಾಗಿದ್ದರೆಂದರೆ 2 ರೆಡ್ ಸಿಗ್ನಲ್ ಗಳನ್ನು ದಾಟಿದ್ದರು.
ಮತ್ತಷ್ಟು ಓದಿ:ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು: ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟವರು ಪೊಲೀಸ್ ವಶಕ್ಕೆ
ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ, ಆದರೆ ವಿಶಾಖಪಟ್ಟಣಂ ಪಲಾಸಾ ರೈಲಿನ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ರೈಲುಗಳಲ್ಲಿ ಕವಚ ವ್ಯವಸ್ಥೆಯನ್ನು ಸಹ ಅಳವಡಿಸಲಾಗುವುದು, ಇದು ಸ್ವಯಂಚಾಲಿತ ರೈಲು ರಕ್ಷಣೆ ತಂತ್ರಜ್ಞಾನವಾಗಿದೆ. ಅಕಸ್ಮಾತ್ ಒಂದೇ ಹಳಿಯಲ್ಲಿ ಎರಡು ರೈಲುಗಳು ಬಂದರೂ ಡಿಕ್ಕಿಯಾಗುವ ಮುನ್ನ ಸ್ವಯಂಚಾಲಿತವಾಗಿ ಬ್ರೇಕ್ ಹಾಕಲಾಗುತ್ತದೆ.
ಮಾನವ ತಪ್ಪಿನಿಂದ ರೈಲು ಅಪಘಾತ ಸಂಭವಿಸಿದೆ ಅಕ್ಟೋಬರ್ 2023 ರಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಅಪಘಾತವು ಮಾನವ ದೋಷವೇ ಕಾರಣ ಎಂದು ಪೂರ್ವ ಕರಾವಳಿ ರೈಲ್ವೆಯ ಸಿಪಿಆರ್ಒ ಬಿಸ್ವಜಿತ್ ಸಾಹು ಬಹಿರಂಗಪಡಿಸಿದ್ದಾರೆ. ಅಪಘಾತದ ನಂತರ, ಮಾರ್ಗದಲ್ಲಿ ಚಲಿಸುವ 33 ರೈಲುಗಳನ್ನು ರದ್ದುಗೊಳಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Sun, 3 March 24