Viral News: ಮಾತು ಬಿಟ್ಟಿದ್ದಕ್ಕೆ ಪ್ರಿಯಕರನನ್ನೇ ಕೊಂದ ಯುವತಿ!

ಯುವಕನೊಬ್ಬ ಇತ್ತೀಚೆಗೆ ತನ್ನ ಪ್ರೇಯಸಿಯ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದ. ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಹೀಗಾಗಿ, ಕೋಪಗೊಂಂಡ 22 ವರ್ಷದ ಯುವತಿ ಆತನ ಪ್ರಾಣವನ್ನೇ ತೆಗೆದಿದ್ದಾಳೆ. ಆ ಯುವತಿ ಆ ಯುವಕನ ಮನೆಗೆ ಹೋಗಿ ಜಗಳವಾಡಿದ್ದಾಳೆ. ತನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಕಾರಣ ಕೇಳಿದ್ದಾಳೆ. ಆದರೂ ಆತ ಉತ್ತರ ನೀಡದಿದ್ದಾಗ ಚಾಕುವಿನಿಂದ ಚುಚ್ಚಿ ಆತನನ್ನು ಕೊಲೆ ಮಾಡಿದ್ದಾಳೆ.

Viral News: ಮಾತು ಬಿಟ್ಟಿದ್ದಕ್ಕೆ ಪ್ರಿಯಕರನನ್ನೇ ಕೊಂದ ಯುವತಿ!
Couple Image
Image Credit source: iStock

Updated on: Feb 04, 2026 | 9:40 PM

ಬಿಲಾಸ್ಪುರ, ಫೆಬ್ರವರಿ 4: ಅವರಿಬ್ಬರೂ ಕೆಲವು ವರ್ಷಗಳಿಂದ ಪ್ರೀತಿ (Love) ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಏನು ಸಮಸ್ಯೆಯಾಗಿತ್ತೋ ಗೊತ್ತಿಲ್ಲ; ಯುವಕ ತನ್ನ ಪ್ರೇಯಸಿಯ ನಂಬರ್ ಬ್ಲಾಕ್ ಮಾಡಿದ್ದ. ಆಕೆ ಯಾವ ನಂಬರ್​​ನಿಂದ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ತಾನು ಪ್ರೀತಿಸುವ ಹುಡುಗ ತನ್ನೊಂದಿಗೆ ಮಾತು ಬಿಟ್ಟಿದ್ದರಿಂದ ತೀವ್ರ ಕೋಪಗೊಂಡಿದ್ದ 22 ವರ್ಷದ ಯುವತಿ ಆತನ ಜೀವವನ್ನೇ ತೆಗೆದಿದ್ದಾಳೆ. ಛತ್ತೀಸ್‌ಗಢದ ಬಿಲಾಸ್ಪುರ ನಗರದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ಬೆಳಿಗ್ಗೆ 25 ವರ್ಷದ ಪ್ರಸಾದ್ ಸೂರ್ಯವಂಶಿ ಎಂಬುವವರ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಯುವತಿಯನ್ನು ಜಿಲ್ಲೆಯ ಸಿಪತ್ ಪ್ರದೇಶದ ಝಲ್ಮಲಾ ಗ್ರಾಮದ ರೋಶ್ನಿ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ರತನ್‌ಪುರ ಪ್ರದೇಶದ ಕರ್ರಾ ಗ್ರಾಮದ ನಿವಾಸಿಯಾದ ಪ್ರಸಾದ್ ಇಲ್ಲಿನ ಮಂಗ್ಲಾ ಚೌಕ್ ಬಳಿಯ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ಶುಭಂ ವಿಹಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ಇತರ ಇಬ್ಬರೊಂದಿಗೆ ವಾಸಿಸುತ್ತಿದ್ದ.

ಇದನ್ನೂ ಓದಿ: ಒಬ್ಬಳ ಮೇಲೆ ಇಬ್ಬರಿಗೆ ಲವ್​: ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ!

ಕೆಲವು ಸಮಯದ ಹಿಂದೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಶ್ನಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ್ದ. ಇಬ್ಬರೂ ಆಗಾಗ ಭೇಟಿಯಾಗಲು ಪ್ರಾರಂಭಿಸಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆದರೆ ಕೆಲವು ದಿನಗಳ ಹಿಂದೆ, ಪ್ರಸಾದ್ ರೋಶ್ನಿಯ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಆಕೆಯ ಮೆಸೇಜ್​ಗೆ ಉತ್ತರ ನೀಡುತ್ತಿರಲಿಲ್ಲ.

ಇದನ್ನೂ ಓದಿ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ!

ಅವನು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ರೋಶ್ನಿ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವನ ಮನೆಗೆ ಹೋದಳು. ನನ್ನ ನಂಬರ್ ಏಕೆ ಬ್ಲಾಕ್ ಮಾಡಿದ್ದೀಯ? ಎಂದು ಕೇಳಿದಾಗ ಇಬ್ಬರ ನಡುವೆ ಜಗಳವಾಯಿತು. ಈ ವೇಳೆ ಗಲಾಟೆ ನಡೆದಿದ್ದು, ತರಕಾರಿ ಕತ್ತರಿಸುವ ಚಾಕುವನ್ನು ತೆಗೆದುಕೊಂಡ ರೋಶ್ನಿ ಆತನ ಎದೆಗೆ ಇರಿದಿದ್ದಾಳೆ.

ಈ ಘಟನೆ ನಡೆದಾಗ ಪ್ರಸಾದ್ ಜೊತೆಗಿದ್ದ ರೂಮ್‌ಮೇಟ್‌ಗಳು ಕೂಡ ಅಲ್ಲಿದ್ದರು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಆತ ಮೃತಪಟ್ಟಿದ್ದ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ರೋಶ್ನಿಯನ್ನು ಬಂಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ