ಮದ್ಯ ಕುಡಿದು ಟೈಟ್ ಆಗಿ ಮಲಗಿದ 24 ಆನೆಗಳು, ಎಚ್ಚರಗೊಳಿಸಲು ಡೋಲು ಬಾರಿಸಿದ ಅರಣ್ಯಾಧಿಕಾರಿಗಳು
24ಕ್ಕೂ ಹೆಚ್ಚು ಆನೆಗಳು ಮದ್ಯವನ್ನು ಸೇವನೆ ಮಾಡಿ ಗಾಢ ನಿದ್ದೆಗೆ ಜಾರಿರುವ ಘಟನೆ ಒಡಿಶಾದ ಕಾಡಿನಲ್ಲಿದೆ ನಡೆದಿದೆ. ಹಳ್ಳಿಯೊಂದರ ಜನರು ಮದ್ಯ ತಯಾರಿಸಲು ಕಾಡಿನೊಳಗೆ ಹೋದಾಗ, ಆನೆಗಳ ಹಿಂಡು ಅವರು ಮಾಡಿದ ಮದ್ಯವನ್ನು ಸೇವನೆ ಮಾಡಿದೆ
ಒಡಿಶಾ: 24ಕ್ಕೂ ಹೆಚ್ಚು ಆನೆಗಳು ಮದ್ಯವನ್ನು ಸೇವನೆ ಮಾಡಿ ಗಾಢ ನಿದ್ದೆಗೆ ಜಾರಿರುವ ಘಟನೆ ಒಡಿಶಾದ ಕಾಡಿನಲ್ಲಿದೆ ನಡೆದಿದೆ. ಹಳ್ಳಿಯೊಂದರ ಜನರು ಮದ್ಯ ತಯಾರಿಸಲು ಕಾಡಿನೊಳಗೆ ಹೋದಾಗ, ಆನೆಗಳ ಹಿಂಡು ಅವರು ಮಾಡಿದ ಮದ್ಯವನ್ನು ಸೇವನೆ ಮಾಡಿದೆ. ಅಮಲೇರಿದ ಹೂವುಗಳಿಂದ ಮಾಡಲಾಗಿದ್ದ ಮಹುವಾ ಮದ್ಯವನ್ನು ಸೇವನೆ ಮಾಡಿದ ಆನೆಗಳು ಅಲ್ಲೇ ನಿದ್ರೆಯನ್ನು ಮಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕಿಯೋಂಜಾರ್ ಜಿಲ್ಲೆಯ ಶಿಲಿಪಾಡಾ ಗೋಡಂಬಿ ಅರಣ್ಯದ ಬಳಿ ವಾಸಿಸುವ ಗ್ರಾಮಸ್ಥರು ಮದ್ಯಪಾನ ಮಾಡಲು ಮಹುವಾ ಹೂವುಗಳನ್ನು ಹುದುಗುವಿಕೆಗಾಗಿ ದೊಡ್ಡ ಮಡಡಿಕೆಯಲ್ಲಿ ಇಡಲಾಗಿತ್ತು ಇದನ್ನು ನೋಡಿದ ಆನೆಗಳು ಅವುಗಳನ್ನು ಸೇವನೆ ಮಾಡಿದೆ.
ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು, ಆದರೆ ನಾವು ಈ ಮೊದಲು ಮಹುವಾ ಹೂವು ಇರಿಸಲಾಗಿದ್ದ ಮಡಕೆಗಳು ಒಡೆದು ಮತ್ತು ಹುದುಗಿಸಿದ ನೀರು ಕಾಣೆಯಾಗಿದೆ. ಪಕ್ಕದಲ್ಲೇ ಆನೆಗಳು ಮಲಗಿತ್ತು. ಅವು ಹುದುಗಿಸಿದ ನೀರನ್ನು ಸೇವಿಸಿ ಅಮಿಲಿನಲ್ಲಿ ಮಲಗಿತ್ತು ಎಂದು ನಾರಿಯಾ ಸೇಥಿ ಗ್ರಾಮಸ್ಥರೊಬ್ಬರು ಪಿಟಿಐಗೆ ತಿಳಿಸಿದರು. ಆ ಮದ್ಯವನ್ನು ಸಂಸ್ಕರಿಸಲಾಗಿಲ್ಲ, ಆನೆಗಳನ್ನು ಎಷ್ಟು ಎಚ್ಚರಗೊಳಿಸಲು ಪ್ರಯತ್ನಿಸಿದರು ಆದರೆ ಅದು ಅಮಿಲಿನಲ್ಲಿ ಎಚ್ಚರಗೊಳಲಿಲ್ಲ. ಈ ಬಗ್ಗೆ ನಂತರದಲ್ಲಿ ಅರಣ್ಯ ಇಲಾಖೆಗೆ ತಿಳಿಸಲಾಯಿತು ಎಂದು ಅವರು ಹೇಳಿದರು.
ಇದನ್ನು ಓದಿ: Elephant Video: ಬಿಸಿಲ ಬೇಗೆ ತಾಳಲಾರದೆ ನೀರಿನಲ್ಲಿ ಬಿದ್ದು ಆಟವಾಡಿದ ಆನೆ ಮರಿ
ಪಟನಾ ಅರಣ್ಯ ವ್ಯಾಪ್ತಿಯ ಕಾಡಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳನ್ನು ಎಬ್ಬಿಸಲು ಡೋಲು ಬಾರಿಸಬೇಕಾಯಿತು. ತಕ್ಷಣ ಆನೆಗಳು ಎದ್ದು ಕಾಡಿನೊಳಗೆ ಹೋದವು ಎಂದು ಅರಣ್ಯ ಸಂರಕ್ಷಣಾಧಿಕಾರಿ ಘಾಸಿರಾಮ್ ಪಾತ್ರ ತಿಳಿಸಿದ್ದಾರೆ. ಆದರೆ ಆನೆಗಳು ಹುದುಗಿಸಿದ ಮಹುವಾ ಕುಡಿದಿದೆ ಎಂದು ಅರಣ್ಯಾಧಿಕಾರಿಗೆ ಖಚಿತ ಪಡಿಸಿಲ್ಲ. ಬಹುಶಃ ಆನೆಗಳು ಅಲ್ಲಿ ವಿಶ್ರಾಂತಿ ಪಡೆಯುತ್ತಿತ್ತು ಎಂದು ಅವರು ಹೇಳಿದರು. ಆದರೆ ಗ್ರಾಮಸ್ಥರು ಆನೆಗಳು ನಾವು ಮಾಡಿದ್ದ ಮದ್ಯವನ್ನು ಸೇವನೆ ಮಾಡಿಯೋ ಮಲಗಿದೆ ಎಂದು ಹೇಳಿದ್ದಾರೆ.