ಫಾಸ್ಟ್ ಟ್ರ್ಯಾಕ್ ಕೋರ್ಟ್, ಸಂಬಳ ಸಹಿತ ಹೆರಿಗೆ ರಜೆ, ತ್ರಿವಳಿ ತಲಾಖ್ ಕಾನೂನು: ಮಹಿಳಾ ಸಬಲೀಕರಣದ ಸಾಧನೆ ಪಟ್ಟಿ ಮಾಡಿದ ಮೋದಿ

Narendra Modi ನಾವು ಟ್ರಾನ್ಸ್​​ಜೆಂಡರ್ ಸಮುದಾಯದ ಸದಸ್ಯರಿಗೆ ಹಕ್ಕುಗಳನ್ನು ನೀಡುತ್ತಿದ್ದೇವೆ ಮತ್ತು ಅವರಿಗೆ ಸಮಾನ ಹಕ್ಕುಗಳನ್ನು ನೀಡಲು ನಾವು ಕಾನೂನುಗಳನ್ನು ತಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಫಾಸ್ಟ್ ಟ್ರ್ಯಾಕ್ ಕೋರ್ಟ್, ಸಂಬಳ ಸಹಿತ ಹೆರಿಗೆ ರಜೆ, ತ್ರಿವಳಿ ತಲಾಖ್ ಕಾನೂನು: ಮಹಿಳಾ ಸಬಲೀಕರಣದ ಸಾಧನೆ ಪಟ್ಟಿ ಮಾಡಿದ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 12, 2021 | 6:14 PM

ದೆಹಲಿ: ಮಹಿಳಾ ಹಕ್ಕುಗಳ ಬಗ್ಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ನೆರವು, ಪೊಲೀಸ್ ನೆರವು, ಮಾನಸಿಕ ಆರೋಗ್ಯ ಸಮಾಲೋಚನೆ, ಕಾನೂನು ಸಹಾಯ ಮತ್ತು ತಾತ್ಕಾಲಿಕ ಆಶ್ರಯ ಪಡೆಯಬಹುದು ಎಂದು ಹೇಳಿದರು. 28 ನೇ ಎನ್‌ಎಚ್‌ಆರ್‌ಸಿ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು. ಮಹಿಳೆಯರಿಗೆ ಹಕ್ಕುಗಳನ್ನು ನೀಡಲು ಭಾರತದಲ್ಲಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಕಾಯ್ದೆ ಇತ್ಯಾದಿಗಳನ್ನು ತಂದಿದೆ ಎಂದು ಅವರು ಹೇಳಿದರು. “ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ 650 ಕ್ಕೂ ಹೆಚ್ಚು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಅತ್ಯಾಚಾರದಂತಹ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ” ಎಂದು ಅವರು ಹೇಳಿದರು.

ನಾವು ಟ್ರಾನ್ಸ್​​ಜೆಂಡರ್ ಸಮುದಾಯದ ಸದಸ್ಯರಿಗೆ ಹಕ್ಕುಗಳನ್ನು ನೀಡುತ್ತಿದ್ದೇವೆ ಮತ್ತು ಅವರಿಗೆ ಸಮಾನ ಹಕ್ಕುಗಳನ್ನು ನೀಡಲು ನಾವು ಕಾನೂನುಗಳನ್ನು ತಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸುರಕ್ಷತೆ ಮತ್ತು ಭದ್ರತೆಯನ್ನು 24X7 ಖಾತ್ರಿಪಡಿಸಲಾಗಿದೆ. “ಇಂದು, ಭಾರತವು ಕೆಲಸ ಮಾಡುವ ಮಹಿಳೆಯರಿಗೆ 26 ವಾರಗಳ ಸಂಬಳದ ಹೆರಿಗೆ ರಜೆಯನ್ನು ನೀಡುತ್ತಿದೆ. ಇದು ನವಜಾತ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ. ಅನೇಕ ದೊಡ್ಡ ರಾಷ್ಟ್ರಗಳು ಮಹಿಳೆಯರಿಗೆ ಇಂತಹ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ತ್ವರಿತ ತ್ರಿವಳಿ ತಲಾಖ್ ರದ್ದತಿಯ ಕುರಿತು ಮಾತನಾಡಿದ ಅವರು, “ದಶಕಗಳಿಂದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಅನ್ನು ತೊಡೆದುಹಾಕಲು ಬಯಸಿದ್ದರು. ಅಭ್ಯಾಸದ ವಿರುದ್ಧ ಕಾನೂನು ತರುವ ಮೂಲಕ ನಾವು ಅವರಿಗೆ ಅವರ ಹಕ್ಕುಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದರು.ಮಹಿಳೆಯರಿಗೆ ವೈದ್ಯಕೀಯ ನೆರವು, ಪೋಲಿಸ್ ನೆರವು, ಕಾನೂನು ಸಹಾಯ ಮತ್ತು ತಾತ್ಕಾಲಿಕ ಆಶ್ರಯವನ್ನು ಪಡೆಯುವ 700 ಒನ್ ಸ್ಟಾಪ್ ಕೇಂದ್ರಗಳ ಬಗ್ಗೆಯೂ ಮೋದಿ ಮಾತನಾಡಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಸಂಕಷ್ಟದ ಆತಂಕದ ನಡುವೆ ಅಗತ್ಯ ಪ್ರಮಾಣದ ಪೂರೈಕೆಯ ಭರವಸೆ ನೀಡಿದ ಪ್ರಲ್ಹಾದ ಜೋಶಿ