Breaking News: ದೆಹಲಿಯಲ್ಲಿ 3ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ: ದೇಶದಲ್ಲಿ ಮಂಕಿಪಾಕ್ಸ್ 8ಕ್ಕೆ ಏರಿಕೆ
ದೆಹಲಿಯಲ್ಲಿ ನೆಲೆಸಿರುವ ನೈಜೀರಿಯಾದ ಮತ್ತೊಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಇದು 3ನೇ ಮಂಕಿಪಾಕ್ಸ್ ಪ್ರಕರಣವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ದೆಹಲಿಯಲ್ಲಿ ನೆಲೆಸಿರುವ ನೈಜೀರಿಯಾದ ಮತ್ತೊಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಇದು 3ನೇ ಮಂಕಿಪಾಕ್ಸ್ ಪ್ರಕರಣವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದೀಗ ಭಾರತದಲ್ಲಿ ಪತ್ತೆಯಾಗಿರುವ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ 8ಕ್ಕೇರಿದೆ.ಯುಎಇಯಿಂದ ಕೇರಳಕ್ಕೆ ಬಂದಿದ್ದ 22ರ ಹರೆಯದ ವ್ಯಕ್ತಿಯೊಬ್ಬರು ಮಂಕಿಪಾಕ್ಸ್ ನಿಂದ ಶನಿವಾರ ಮೃಮ ಮೃತಪಟ್ಟಿದ್ದರು. ವಿದೇಶದಲ್ಲಿಯೇ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅವರು ಮೃತಪಟ್ಟನಂತರ ರೋಗಪತ್ತೆ ಪರೀಕ್ಷೆ ನಡೆಸಿದಾಗ ಮಂಕಿಪಾಕ್ಸ್ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ವೀಣಾ ಜಾರ್ಜ್ ಸೋಮವಾರ ಹೇಳಿದ್ದಾರೆ. ಇದೀಗ ದೆಹಲಿಯಲ್ಲಿ ನೆಲೆಸಿರುವ ನೈಜೀರಿಯಾದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಇದು ದೇಶದಲ್ಲಿ ಕಂಡುಬಂದ 8ನೇ ಪ್ರಕರಣವಾಗಿದೆ. ದಿನ ಹೋದದಂತೆ ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಮಂಕಿಪಾಕ್ಸ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
Another Nigerian man living in Delhi tests positive for #monkeypox. This is the 3rd monkeypox case in Delhi: Official Sources pic.twitter.com/COmfH3QUHX
— ANI (@ANI) August 2, 2022
Published On - 3:35 pm, Tue, 2 August 22