ಮಣಿಪುರದಲ್ಲಿ ನಡೆದ ಗಲಭೆಯಲ್ಲಿ 4 ಉಗ್ರರ ಸಾವು; ಪ್ರಾಣಭಯದಿಂದ ಊರು ತೊರೆದ ಗ್ರಾಮಸ್ಥರು

ಮಣಿಪುರದಲ್ಲಿ ಎದುರಾಳಿ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪುಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಹಾಗೂ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಭದ್ರತಾ ಪಡೆಗಳಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ. ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಮರಳಿ ಶಾಂತಿ ಸ್ಥಾಪಿಸಲು ಭದ್ರತಾ ಪಡೆಗಳು ಸತತ ಶ್ರಮಿಸುತ್ತಿರುವ ಬೆನ್ನಲ್ಲೇ ಈ ಕಾದಾಟ ನಡೆದಿದೆ. ಎರಡೂ ಗುಂಪುಗಳ ನಡುವೆ ನಡೆದ ಸತತ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಮಣಿಪುರದಲ್ಲಿ ನಡೆದ ಗಲಭೆಯಲ್ಲಿ 4 ಉಗ್ರರ ಸಾವು; ಪ್ರಾಣಭಯದಿಂದ ಊರು ತೊರೆದ ಗ್ರಾಮಸ್ಥರು
Militants

Updated on: Nov 04, 2026 | 8:52 PM

ಇಂಫಾಲ್, ನವೆಂಬರ್ 4: ಮಣಿಪುರದ ನೋನಿ ಜಿಲ್ಲೆಯ ಗ್ರಾಮವೊಂದರಲ್ಲಿ 2 ಎದುರಾಳಿ ನಾಗಾ ಉಗ್ರಗಾಮಿ ಗುಂಪುಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಉಗ್ರರ ನಡುವಿನ ಈ ರಕ್ತಸಿಕ್ತ ಕಾಳಗದಿಂದ ಭೀತಿಗೊಂಡ ನೂರಾರು ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ. ಇಂದು ನೋನಿ ಜಿಲ್ಲೆಯ ತಾವೊಡೈಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಸಾವನ್ನಪ್ಪಿದ ನಾಲ್ವರಲ್ಲಿ ಮೂವರು ಉಗ್ರರು ‘ಜೆಲಿಯಾಂಗ್ರೊಂಗ್ ಯುನೈಟೆಡ್ ಫ್ರಂಟ್ (ಜೆಂಚುಯಿ ಬಣ)’ ಅಥವಾ ಜೆಯುಎಫ್​​ಜೆಗೆ ಸೇರಿದವರಾಗಿದ್ದು, ಮತ್ತೊಬ್ಬ ಉಗ್ರ ‘ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್’ ಸಂಘಟನೆಗೆ ಸೇರಿದವನಾಗಿದ್ದಾನೆ.

ಸ್ಥಳೀಯರಲ್ಲಿ ಭೀತಿ ಮತ್ತು ಸ್ಥಳಾಂತರ:

Loading...

ಉಗ್ರರ ಕಾದಾಟದ ನಡುವೆ ಸಿಲುಕಿಕೊಳ್ಳುವ ಭಯದಿಂದ ತಾವೊಡೈಸಿಂಗ್ ಗ್ರಾಮಸ್ಥರು ತಮ್ಮ ಮನೆ ತೊರೆದು ಬೇರೆಡೆ ತೆರಳಿದ್ದಾರೆ. ಘಟನೆಯ ವೇಳೆ ಗ್ರಾಮಸ್ಥರು ಲೌಡ್​ ಸ್ಪೀಕರ್ ಬಳಸಿ ಪರಸ್ಪರ ಎಚ್ಚರಿಕೆ ನೀಡಿ, ತಕ್ಷಣವೇ ಊರು ಖಾಲಿ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಈ ಗ್ರಾಮದಲ್ಲಿ ದೀರ್ಘಕಾಲದವರೆಗೆ ನಿರಂತರ ಭಾರಿ ಗುಂಡಿನ ಸದ್ದು ಕೇಳಿಬಂದಿತ್ತು.

ಇದನ್ನೂ ಓದಿ: ಉಗ್ರರ ಚಟುವಟಿಕೆಗೆ ಹಣ, ಸ್ಮಾರ್ಟ್‌ಫೋನ್ ಪೂರೈಕೆ: ಕಾಶ್ಮೀರ ಪೊಲೀಸರ ಕಾರ್ಯಾಚರಣೆ, 10 ಮಂದಿ ಅರೆಸ್ಟ್​

ತಾವೊಡೈಸಿಂಗ್ ಗ್ರಾಮವು ಖೌಪುಮ್ ಕಡೆಗೆ ಹೋಗುವ ಓಲ್ಡ್ ಕಚಾರ್ ರಸ್ತೆಯ ನುಂಗ್ಬಾ ಸಬ್-ಡಿವಿಷನ್‌ಗೆ ಸೇರಿದ್ದು, ರೆಂಗ್‌ಪಾಂಗ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಪ್ರದೇಶದ ಮೇಲಿನ ನಿಯಂತ್ರಣ ಮತ್ತು ಪ್ರಭಾವ ಸ್ಥಾಪಿಸುವ ವೈಷಮ್ಯವೇ ಈ ರಕ್ತಸಿಕ್ತ ಕಾದಾಟಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ.

ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ, ‘ರಾಂಗ್‌ಮೈ ನಾಗಾ ಲುಫುವಾಮ್ (ನುಂಗ್ಬಾ ವಲಯ)’ ಸಂಸ್ಥೆಯು ಶಸ್ತ್ರಸಜ್ಜಿತ ಉಗ್ರ ಗುಂಪುಗಳಿಗೆ ಹಿಂಸಾಚಾರವನ್ನು ತಕ್ಷಣವೇ ಸ್ಥಗಿತಗೊಳಿಸಿ, ಪ್ರದೇಶದಲ್ಲಿ ಶಾಂತಿಗೆ ಅವಕಾಶ ನೀಡಬೇಕೆಂದು ಆಕ್ರೋಶದ ಮನವಿ ಮಾಡಿದೆ. ಈ ಘಟನೆ ನಡೆದ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದ್ದು, ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us