ಮಧ್ಯಪ್ರದೇಶದಲ್ಲಿ ಅಂಗಡಿ ಮಾಲೀಕರ ಅನುಮತಿಯಿಲ್ಲದೆ ಸಮೋಸಾ ತಿಂದ ವ್ಯಕ್ತಿಯ ಹತ್ಯೆ
"ಅಹಿರ್ವಾರ್ ಅಂಗಡಿಯೊಂದಕ್ಕೆ ನುಗ್ಗಿ, ಸಮೋಸವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಾರಂಭಿಸಿದಾಗ ಅದರ ಮಾಲೀಕರು ಅವನನ್ನು ಗದರಿಸಿ ನಂತರ ದೊಣ್ಣೆಯಿಂದ ತಲೆಗೆ ಹೊಡೆದರು
ಭೋಪಾಲ್: ಮದ್ಯದ ಅಮಲಿನಲ್ಲಿ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನ ಅನುಮತಿಯಿಲ್ಲದೆ ಸಮೋಸಾ (Samosa) ತಿಂದ 40 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ (MadhyaPradesh) ಭೋಪಾಲ್‌ನಲ್ಲಿ ನಡೆದಿದೆ. ಭಾನುವಾರ ಸಂಜೆ ರಾಜಧಾನಿಯ ಚೋಲಾ ಪ್ರದೇಶದ (Chhola area) ಶಂಕರ್ ನಗರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ವಿನೋದ್ ಅಹಿರ್ವಾರ್ ಎಂದು ಗುರುತಿಸಲಾಗಿದೆ ಎಂದು ಛೋಲಾ ಮಂದಿರ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಸಿಂಗ್ ಮೌರ್ಯ ತಿಳಿಸಿದ್ದಾರೆ. “ಅಹಿರ್ವಾರ್ ಅಂಗಡಿಯೊಂದಕ್ಕೆ ನುಗ್ಗಿ, ಸಮೋಸವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಾರಂಭಿಸಿದಾಗ ಅದರ ಮಾಲೀಕರು ಅವನನ್ನು ಗದರಿಸಿ ನಂತರ ದೊಣ್ಣೆಯಿಂದ ತಲೆಗೆ ಹೊಡೆದರು.ಹೊಡೆತದಿಂದಾಗಿ ಅಹಿರ್ವಾರ್ ಸಾವನ್ನಪ್ಪಿದರು.ಕೊಲೆ ಪ್ರಕರಣದಲ್ಲಿ ಅಂಗಡಿ ಮಾಲೀಕ ಹರಿ ಸಿಂಗ್ ಅಹಿರ್ವಾರ್ ಮತ್ತು ಅವರ 20 ವರ್ಷದ ಮಗನನ್ನು ಬಂಧಿಸಲಾಗಿದೆ ಮೌರ್ಯ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಹಸುವಿಗೆ ಬೈಕ್ ಡಿಕ್ಕಿ ಹೊಡೆದು ಭೀಮ್ ಆರ್ಮಿ ಮುಖ್ಯಸ್ಥರ ಬೆಂಗಾವಲು ವಾಹನದಲ್ಲಿದ್ದ 18 ವರ್ಷದ ಯುವಕ ಸಾವು
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಮೋಟಾರ್ ಸೈಕಲ್‌ಗೆ ಹಸು ಡಿಕ್ಕಿ ಹೊಡೆದು ನಂತರ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು 18 ವರ್ಷದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ವಿಡಿಯೊದಲ್ಲಿ ಸೆರೆಯಾಗಿರುವ ಘಟನೆಯು ಸಾಗರ್-ಭೋಪಾಲ್ ರಸ್ತೆಯ ರಟೋನಾ ಗ್ರಾಮದ ಬಳಿ ಭಾನುವಾರ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಸೇಮಧಾನ ಗ್ರಾಮದ ನಿವಾಸಿ ಶೈಲೇಂದ್ರ ಅಹಿರ್ವಾರ್ (18) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
“ಅಹಿರ್ವಾರ್ ಅವರ ಮೋಟಾರ್‌ಸೈಕಲ್‌ಗೆ ಮೊದಲು ಹಸು ಮತ್ತು ನಂತರ ಬೆಂಗಾವಲು ವಾಹನದಲ್ಲಿ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದರು” ಎಂದು ಮೋತಿನಗರ ಪೊಲೀಸ್ ಠಾಣೆ ಪ್ರಭಾರಿ ನವಲ್ ಆರ್ಯ ತಿಳಿಸಿದ್ದಾರೆ.
ಅಪಘಾತದಲ್ಲಿ ಮೂವರು ಕಾರ್ಮಿಕರು ಸಾವು
ಸತ್ತೂರ್ (ತಮಿಳುನಾಡು) : ಸೋಮವಾರ ಇಲ್ಲಿಗೆ ಸಮೀಪದ ಮೀನಾಕ್ಷಿಪುರಂ ಜಂಕ್ಷನ್ ಬಳಿ ಮಧುರೈ-ತಿರುನೆಲ್ವೇಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರನ್ನು ಎ.ಸೆಲ್ವಪಾಂಡಿ, 34, ವಿ.ಕರುಪ್ಪಸಾಮಿ, 32, ಮತ್ತು ಪಿ.ರಾಮ್‌ಕುಮಾರ್, 23 ಎಂದು ಗುರುತಿಸಿರುವ ಪೊಲೀಸರು, ಕಾರು ಚಾಲಕ ಕೋವಿಲ್‌ಪಟ್ಟಿ ಮೂಲದ ಕೆ.ಗುರುಸಾಮಿ (55) ಅವರ ತಲೆಗೆ ಪೆಟ್ಟು ಬಿದ್ದಿದ್ದು, ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಗೆ.ಅವರನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮೃತರು ರಸ್ತೆ ನಿರ್ವಹಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ವಾಹನಗಳನ್ನು ಕೆಲಸ ಸ್ಥಳದಿಂದ ಬೇರೆಡೆಗೆ ತಿರುಗಿಸಲು ಪ್ಲಾಸ್ಟಿಕ್ ಕೋನ್‌ಗಳನ್ನು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಗುರುಸಾಮಿ ಎಂಬ ಮಾಜಿ ಸೈನಿಕರು ವೇಗದಿಂದ ಬಂದಿದ್ದು ಕಾರು ನಿಯಂತ್ರಣ ತಪ್ಪಿ ಮೂವರು ಕಾರ್ಮಿಕರ ಮೇಲೆ ಹರಿದಿದೆ.. ಅವರೆಲ್ಲರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ಕಾರು ರಸ್ತೆ ಬದಿಗೆ ಬಿದ್ದಿದೆ.
ತಿರುವಿರುತ್ತನ್‌ಪಟ್ಟಿಯ ಸೆಲ್ವಪಾಂಡಿ ಸ್ಥಳದಲ್ಲೇ ಮೃತಪಟ್ಟರೆ, ವಜವಂದಲಪುರಂನ ಕರುಪ್ಪಸ್ವಾಮಿ ಕೋವಿಲ್‌ಪಟ್ಟಿ ಜಿಎಚ್‌ನಲ್ಲಿ ಮೃತಪಟ್ಟಿದ್ದಾರೆ. ಶಿವಂತಿಪಟ್ಟಿಯ ರಾಮಕುಮಾರ್ ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಸತ್ತೂರು ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.