ಓಲಾ ಸ್ಕೂಟರ್ಗೆ ಕತ್ತೆಯನ್ನು ಕಟ್ಟಿ ನಗರದಲ್ಲಿ ಮೆರವಣಿಗೆ ಮಾಡಿದ ಮಹಾರಾಷ್ಟ್ರದ ವ್ಯಕ್ತಿ; ಇದಕ್ಕೂ ಇದೆ ಒಂದು ಕಾರಣ
ಭಾನುವಾರ ದ್ವಿಚಕ್ರ ವಾಹನವನ್ನು ಕತ್ತೆಗೆ ಕಟ್ಟಿ “ಈ ವಂಚನೆಯ ಕಂಪನಿ ಓಲಾ ಬಗ್ಗೆ ಎಚ್ಚರದಿಂದಿರಿ”, “ಓಲಾ ಕಂಪನಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬೇಡಿ” ಎಂಬ ಬ್ಯಾನರ್‌ಗಳೊಂದಿಗೆ ಮೆರವಣಿಗೆ ನಡೆಸಿದ ವ್ಯಕ್ತಿ.

ದೆಹಲಿ: ಖರೀದಿಸಿಕೊಂಡ ಕೆಲವೇ ದಿನಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ (electric scooter) ನಿಂತು ಹೋಯಿತು. ಇದಕ್ಕೆ ಓಲಾದಿಂದ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ (Maharashtra) ವ್ಯಕ್ತಿಯೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಬೀಡ್ ಜಿಲ್ಲೆಯ ಸಚಿನ್ ಗಿಟ್ಟೆ ಎಂಬುವರು ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಕತ್ತೆಯನ್ನು ಕಟ್ಟಿ, ಕಂಪನಿಯನ್ನು ನಂಬಬೇಡಿ ಎಂದು ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳೊಂದಿಗೆ ನಗರದಲ್ಲಿ ಮೆರವಣಿಗೆ ಮಾಡಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿ ಲೆಟ್ಸ್‌ಅಪ್ ಮರಾಠಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡ ಕ್ಲಿಪ್ ಕತ್ತೆ ದ್ವಿಚಕ್ರ ವಾಹನವನ್ನು ಎಳೆಯುವುದನ್ನು ತೋರಿಸುತ್ತದೆ. ಎಬಿಪಿ ನ್ಯೂಸ್‌ನಲ್ಲಿನ ವರದಿಯ ಪ್ರಕಾರ, ಗಿಟ್ಟೆ ಖರೀದಿಸಿದ ಆರು ದಿನಗಳ ನಂತರ ದ್ವಿಚಕ್ರ ವಾಹನವು ಕೆಲಸ ಮಾಡುವುದನ್ನು ನಿಲ್ಲಿಸಿತು. ಅವರು ಕಂಪನಿಯನ್ನು ಸಂಪರ್ಕಿಸಿದ ನಂತರ, ಓಲಾ ಮೆಕ್ಯಾನಿಕ್ ಅವರ ಸ್ಕೂಟರ್ ಅನ್ನು ಪರಿಶೀಲಿಸಿದರು. ಆದರೆ, ಅದನ್ನು ಸರಿಪಡಿಸಲು ಯಾರೂ ಮುಂದಾಗಿಲ್ಲ ಎಂದು ವರದಿ ತಿಳಿಸಿದೆ. ಗಿಟ್ಟೆ ಅವರು ಗ್ರಾಹಕ ಸೇವೆಗೆ ಅನೇಕ ಕರೆಗಳನ್ನು ಮಾಡಿದರು ಆದರೆ ಇದು ನಿರ್ದಿಷ್ಟ ಪರಿಹಾರದ ಬದಲಿಗೆ ಅಲ್ಲಿಂದ ಸರಿಯಾದ ಉತ್ತರವೂ ಸಿಗಲಿಲ್ಲ. ಹಾಗಾಗಿ ಅವರು ಭಾನುವಾರ ದ್ವಿಚಕ್ರ ವಾಹನವನ್ನು ಕತ್ತೆಗೆ ಕಟ್ಟಿ “ಈ ವಂಚನೆಯ ಕಂಪನಿ ಓಲಾ ಬಗ್ಗೆ ಎಚ್ಚರದಿಂದಿರಿ”, “ಓಲಾ ಕಂಪನಿಯ ದ್ವಿಚಕ್ರ ವಾಹನಗಳನ್ನು ಖರೀದಿಸಬೇಡಿ” ಎಂಬ ಬ್ಯಾನರ್‌ಗಳೊಂದಿಗೆ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯು ಪರ್ಲಿಯಲ್ಲಿ ಕೋಲಾಹಲವನ್ನು ಉಂಟುಮಾಡಿದ್ದು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
View this post on Instagram
ಗಿಟ್ಟೆ ಎಂಬ ವ್ಯಾಪಾರಿಯು ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದ್ದಾರೆ ಮತ್ತು ಬೈಕ್ ಅನ್ನು ರಿಪೇರಿ ಮಾಡಿಲ್ಲ ಅಥವಾ ಬದಲಾಯಿಸಿಲ್ಲ ಎಂದು ದೂರಿದ್ದಾರೆ. ಕಂಪನಿಯಿಂದ ಗ್ರಾಹಕರಿಗೆ ಯಾವುದೇ ಆರ್ಥಿಕ ರಕ್ಷಣೆ ಇಲ್ಲ ಎಂದು ಆರೋಪಿಸಿದ ಅವರು ಓಲಾ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದರು.
ಗಿಟ್ಟೆ ಅವರು ಸೆಪ್ಟೆಂಬರ್ 2021 ರಲ್ಲಿ ಸ್ಕೂಟರ್ ಅನ್ನು ಬುಕ್ ಮಾಡಿದ್ದರು. ಅದನ್ನು ಮಾರ್ಚ್ 24, 2022 ರಂದು ಅವರಿಗೆ ತಲುಪಿಸಲಾಯಿತು. ವಾಹನಗಳಿಗೆ ಬೆಂಕಿ ತಗುಲಿರುವ ವರದಿಗಳ ನಂತರ, ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ 1,441 ಘಟಕಗಳನ್ನು ಏಪ್ರಿಲ್ 24 ರಂದು ಹಿಂಪಡೆಯುವುದಾಗಿ ಘೋಷಿಸಿತು. ಈ ಸ್ಕೂಟರ್‌ಗಳನ್ನು ಕಂಪನಿಯ ಸೇವಾ ಎಂಜಿನಿಯರ್‌ಗಳು ಮೌಲ್ಯಮಾಪನ ಮಾಡುತ್ತಾರೆ. ಎಲ್ಲಾ ಬ್ಯಾಟರಿ ವ್ಯವಸ್ಥೆಗಳು, ಥರ್ಮಲ್ ಸಿಸ್ಟಮ್‌ಗಳು ಮತ್ತು ಸುರಕ್ಷಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ:ಹೆಚ್ಚುತ್ತಿರುವ ಬೆಂಕಿ ಅವಘಡ; 1441 ಸ್ಕೂಟರ್‌ಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ ಓಲಾ ಎಲೆಕ್ಟ್ರಿಕ್ ಕಂಪನಿ




