Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ ಭರವಸೆ ನೀಡಿದ ಕೆಲವು ಫೀಚರ್​ಗಳಿಲ್ಲ, ಆದರೆ…

ಓಲಾದಿಂದ ಡಿಸೆಂಬರ್ 15ನೇ ತಾರೀಕಿನಿಂದ ಎಲೆಕ್ಟ್ರಿಕ್ ಸ್ಕೂಟರ್​ಗಳ ಡೆಲಿವರಿ ಆರಂಭಿಸಲಾಗಿದೆ. ಆದರೆ ಕಂಪೆನಿಯಿಂದ ಭರವಸೆ ನೀಡಿದ ಕೆಲವು ಫೀಚರ್​ಗಳನ್ನು ಒಳಗೊಂಡಿಲ್ಲ ಎಂಬುದು ಗ್ರಾಹಕರ ಅಭಿಪ್ರಾಯ. ಇದಕ್ಕೆ ಕಂಪೆನಿ ಉತ್ತರ ಏನು ಗೊತ್ತಾ?

Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ ಭರವಸೆ ನೀಡಿದ ಕೆಲವು ಫೀಚರ್​ಗಳಿಲ್ಲ, ಆದರೆ...
ಓಲಾ ಎಲೆಕ್ಟ್ರಿಕ್ ಸ್ಕೂಟರ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Srinivas Mata

Updated on: Dec 16, 2021 | 11:17 AM

ಬೆಂಗಳೂರು ಹಾಗೂ ಚೆನ್ನೈನಲ್ಲಿ ಮೊದಲ 100 ಗ್ರಾಹಕರಿಗೆ ಓಲಾ ಎಸ್1 ಸ್ಕೂಟರ್‌ಗಳನ್ನು ವಿತರಿಸಿರುವುದಾಗಿ ಓಲಾ ಎಲೆಕ್ಟ್ರಿಕ್ ಬುಧವಾರ ಮಾಹಿತಿ ನೀಡಿದೆ. ಸ್ಕೂಟರ್ ವಿತರಣೆಯ ಆರಂಭವನ್ನು ಆಚರಿಸುವ ಸಲುವಾಗಿ ಕಂಪೆನಿಯು ಬೆಂಗಳೂರಿನಲ್ಲಿ ಇರುವ ಓಲಾ ಪ್ರಧಾನ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಕಂಪೆನಿಯ ಸಂಸ್ಥಾಪಕರಾದ ಭವಿಶ್ ಅಗರ್​ವಾಲ್ ಹಾಜರಿದ್ದರು. ಸ್ಥಳದಲ್ಲಿ ಸುಮಾರು 40 ಗ್ರಾಹಕರು ಹಾಜರಿರುವಾಗ, ಈ ಪೈಕಿ ಮೂವರು ಮಾಧ್ಯಮದ ಜತೆ ಮಾತನಾಡಿ, ಮೊದಲಿಗೆ ಭರವಸೆ ನೀಡಿದಂತೆ ಕೆಲವು ವೈಶಿಷ್ಟ್ಯಗಳು – ಮೊಬೈಲ್ ಅಪ್ಲಿಕೇಷನ್, ಹಿಲ್ ಹೋಲ್ಡ್, ಕ್ರೂಸ್ ಕಂಟ್ರೋಲ್, ವಾಯ್ಸ್ ಕಮಾಂಡ್‌ಗಳು ಮತ್ತು ಬ್ಲೂಟೂತ್ ಇನ್ನೂ ಎನೇಬಲ್ ಆಗಿಲ್ಲ ಎಂದಿದ್ದಾರೆ. ಓವರ್-ದ-ಏರ್ ಸಾಫ್ಟ್​ವೇರ್ ಅಪ್​ಡೇಟ್ ಮೂಲಕ ಈ ವೈಶಿಷ್ಟ್ಯಗಳು ಎನೇಬಲ್ ಆಗುವುದಕ್ಕೆ ಒಂದು ತಿಂಗಳು ಆಗುತ್ತದೆ ಎಂದು ಕಂಪೆನಿಯಿಂದ ಗ್ರಾಹಕರಿಗೆ ತಿಳಿಸಲಾಗಿದೆ ಎಂಬುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಓಲಾ ಎಲೆಕ್ಟ್ರಿಕ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವರುಣ್ ದುಬೆ ಮಾತನಾಡಿ, ಕೆಲವು ಫೀಚರ್​ಗಳನ್ನು ಓವರ್​ ದ ಏರ್ ಅಪ್‌ಡೇಟ್‌ಗಳ ಮೂಲಕ ಮಾತ್ರ ಎನೇಬಲ್ ಮಾಡಬಹುದು ಎಂದು ಕಂಪೆನಿಯು ಈಗಾಗಲೇ ಘೋಷಿಸಿದೆ ಎಂದು ತಿಳಿಸಿದ್ದಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆ ತಡ ಆಗಿದ್ದಕ್ಕಾಗಿ ಗ್ರಾಹಕರಿಂದ ಒತ್ತಡಕ್ಕೆ ಒಳಗಾಗ ಬೇಕಾಯಿತು. ಅಕ್ಟೋಬರ್‌ನಲ್ಲಿ ಡೆಲಿವರಿ ಪ್ರಾರಂಭ ಆಗಲಿದೆ ಎಂದು ಕಂಪೆನಿ ಭರವಸೆ ನೀಡಿತ್ತು.

ಓಲಾ ಕಂಪೆನಿಯು ತಮಿಳುನಾಡಿನಲ್ಲಿ ವಿಶ್ವದ ಅತಿದೊಡ್ಡ ಸ್ಕೂಟರ್ ಕಾರ್ಖಾನೆ ಎಂದು ಹೇಳಿಕೊಳ್ಳುವಲ್ಲಿ ದ್ವಿಚಕ್ರ ವಾಹನಗಳನ್ನು ನಿರ್ಮಿಸುತ್ತಿದೆ. ಇದು ಅಂತಿಮವಾಗಿ ವರ್ಷಕ್ಕೆ 10 ಮಿಲಿಯನ್ (1 ಕೋಟಿ ಯೂನಿಟ್) ಸ್ಕೂಟರ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ. ಅಕ್ಟೋಬರ್‌ನಲ್ಲಿ ಓಲಾ ಎಲೆಕ್ಟ್ರಿಕ್ 3 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಫಾಲ್ಕನ್ ಎಡ್ಜ್ ಮತ್ತು ಸಾಫ್ಟ್‌ಬ್ಯಾಂಕ್ ನೇತೃತ್ವದಲ್ಲಿ 200 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಿದೆ ಎಂದು ಕಂಪೆನಿ ಹೇಳಿದೆ.

ಸಾಂಪ್ರದಾಯಿಕವಾಗಿ ವಾಹನ ಕಂಪೆನಿಗಳು ಅನುಸರಿಸುವಂತೆ ಅಲ್ಲದೆ ಓಲಾ ಎಲೆಕ್ಟ್ರಿಕ್​ನಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಸ್ಕೂಟರ್‌ಗಳನ್ನು ತಲುಪಿಸಲಾಗುತ್ತದೆ. ಕಂಪೆನಿಯು ಕಳೆದ ತಿಂಗಳು ಭಾರತದಾದ್ಯಂತ ಗ್ರಾಹಕರಿಗೆ ಟೆಸ್ಟ್​ ರೈಡ್​ಗಳನ್ನು ನೀಡಿತ್ತು.

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಡಿಸೆಂಬರ್​ 15ರಿಂದ ಆರಂಭ