AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಊರಿನಲ್ಲಿ ದೇವಸ್ಥಾನ, ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಲು ನಿರ್ಧಾರ

ದೇವಸ್ಥಾನ ಮತ್ತು ಮಸೀದಿಯಲ್ಲಿ ದಶಕಗಳಿಂದ ಬಳಸುತ್ತಿದ್ದ ಧ್ವನಿವರ್ಧಕಗಳನ್ನು ಕೆಳಗಿಳಿಸಲು ಜಂಟಿಯಾಗಿ ನಿರ್ಧರಿಸಿದ್ದೇವೆ ಎಂದು ದೇವಾಲಯದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಇಮಾಮ್ ಹಫೀಜ್ ಮೊಹಮ್ಮದ್ ತಾಜ್ ಆಲಂ ಹೇಳಿದ್ದಾರೆ.

ಈ ಊರಿನಲ್ಲಿ ದೇವಸ್ಥಾನ, ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಲು ನಿರ್ಧಾರ
ಲೌಡ್ ಸ್ಪೀಕರ್
TV9 Web
| Updated By: ಸುಷ್ಮಾ ಚಕ್ರೆ|

Updated on: Apr 25, 2022 | 7:47 PM

Share

ವಾರಾಣಸಿ: ತಮ್ಮ ಊರಿನಲ್ಲಿ ಕೋಮು ಸೌಹಾರ್ದತೆಯ ಸಂದೇಶವನ್ನು ರವಾನಿಸಲು ನಿರ್ಧರಿಸಿದ ಉತ್ತರ ಪ್ರದೇಶದ (Uttar Pradesh) ಬಡಗಾಂವ್ ಪಟ್ಟಣದಲ್ಲಿರುವ ಅತಿದೊಡ್ಡ ದೇವಾಲಯ (Temple) ಮತ್ತು ಮಸೀದಿಯ (Masjid) ಧ್ವನಿವರ್ಧಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದಾರೆ. ಈ ಬಗ್ಗೆ ದೇವಾಲಯದ ಅರ್ಚಕ ಮತ್ತು ಮಸೀದಿಯ ಇಮಾಮ್ ಸಭೆಯನ್ನು ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ, ಇನ್ನುಮುಂದೆ ಬಡಗಾಂವ್​ ಎಂಬ ಈ ಊರಿನಲ್ಲಿ ಮಸೀದಿಯಲ್ಲಾಗಲಿ, ದೇವಸ್ಥಾನದಲ್ಲಾಗಲಿ ಲೌಡ್​ ಸ್ಪೀಕರ್​ಗಳನ್ನು ಬಳಸುವಂತಿಲ್ಲ.

ದೇವಸ್ಥಾನ ಮತ್ತು ಮಸೀದಿಯಲ್ಲಿ ದಶಕಗಳಿಂದ ಬಳಸುತ್ತಿದ್ದ ಧ್ವನಿವರ್ಧಕಗಳನ್ನು ಕೆಳಗಿಳಿಸಲು ಜಂಟಿಯಾಗಿ ನಿರ್ಧರಿಸಿದ್ದೇವೆ ಎಂದು ದೇವಾಲಯದ ಅರ್ಚಕ ಶಾಂತಿ ಮೋಹನ್ ದಾಸ್ ಮತ್ತು ಇಮಾಮ್ ಹಫೀಜ್ ಮೊಹಮ್ಮದ್ ತಾಜ್ ಆಲಂ ಹೇಳಿದ್ದಾರೆ.

ಝಾನ್ಸಿಯ ಅತ್ಯಂತ ಪ್ರಸಿದ್ಧ ಹಾಗೂ ಹಳೆಯ ದೇವಾಲಯಗಳಲ್ಲಿ ರಾಮ್ ಜಾಂಕಿ ದೇವಸ್ಥಾನವು ಒಂದಾಗಿದೆ. ಹಾಗೇ, ಸುನ್ನಿ ಜಮಾ ಮಸೀದಿಯು ಬಡಗಾಂವ್ ಪಟ್ಟಣದ ಗಾಂಧಿ ಚೌಕ್ ಪ್ರದೇಶದಲ್ಲಿದೆ. ಈ ಮಸೀದಿ ಮತ್ತು ದೇವಸ್ಥಾನಗಳೆರಡೂ ಪರಸ್ಪರ ಹತ್ತಿರದಲ್ಲಿದೆ. ಇಲ್ಲಿನ ದೇವಾಲಯವು ತನ್ನ ಧ್ವನಿವರ್ಧಕದಲ್ಲಿ ಬೆಳಗಿನ ಆರತಿಯ ವೇಳೆ ಶ್ಲೋಕಗಳನ್ನು ಪ್ರಸಾರ ಮಾಡುತ್ತಿದ್ದರೆ, ಮಸೀದಿಯು ದಿನಕ್ಕೆ ಐದು ಬಾರಿ ಆಜಾನ್ (ನಮಾಜ್)ಗಾಗಿ ತನ್ನ ಧ್ವನಿವರ್ಧಕಗಳನ್ನು ಬಳಸುತ್ತಿತ್ತು.

ಜನರಲ್ಲಿ ಪ್ರೀತಿ ಮತ್ತು ಸಹೋದರತ್ವದ ಬಲವಾದ ಸಂದೇಶವನ್ನು ರವಾನಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಶಾಂತಿ ಮೋಹನ್ ದಾಸ್ ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವಸ್ಥಾನದಲ್ಲಿ ಆರತಿಯನ್ನು ನಡೆಸಲಾಗುತ್ತದೆ ಹಾಗೂ ಭಜನೆಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಆದರೆ, ಈ ದೇವಸ್ಥಾನದಲ್ಲಿ ಇನ್ನು ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಫೀಜ್ ತಾಜ್ ಆಲಂ ಅವರು ಎರಡು ಧ್ವನಿವರ್ಧಕಗಳನ್ನು ಕೆಳಗಿಳಿಸುವುದು ಈ ಹಂತದ ಅಗತ್ಯವಾಗಿದೆ. ನಾವು ಸಾಮರಸ್ಯದಿಂದ ಬದುಕುತ್ತಿದ್ದೇವೆ. ನಮ್ಮ ಸಾಮರಸ್ಯದ ನಡುವೆ ಈ ಧ್ವನಿವರ್ಧಕಗಳನ್ನು ಬರಲು ಬಿಡುವುದಿಲ್ಲ. ದೇಶದಲ್ಲಿ ಸೌಹಾರ್ದತೆ ನೆಲೆಸಲಿ ಮತ್ತು ಜನರು ಶಾಂತಿಯಿಂದ ಬದುಕಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ದೇವಾಲಯಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಕುರಿತ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಧಾರ್ಮಿಕ ಮುಖಂಡರು ಈ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ಮಂದಿರ, ಮಸೀದಿಗಳಿಂದ ಧ್ವನಿವರ್ಧಕ ತೆರವು, ಹೈಕೋರ್ಟ್ ಆದೇಶ ಪಾಲನೆಗೆ ಸಿಎಂ ಬೊಮ್ಮಾಯಿ ಸೂಚನೆ

ಧ್ವನಿವರ್ಧಕದಲ್ಲಿ ಹನುಮಾನ್​ ಚಾಲೀಸಾ, ಭಕ್ತಿಗೀತೆಗಳನ್ನು ಹಾಕಿದ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರು; ಕೂಡಲೇ ಬಂದು ತಡೆದ ಪೊಲೀಸರು

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ
ಆರ್​ಟಿಒ ದಂಡ ವಿಧಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಟ್ರಕ್ ಚಾಲಕ