Delhi Chalo | ಸರ್ಕಾರ-ರೈತರ ನಡುವಿನ 7ನೇ ಸುತ್ತಿನ ಸಭೆಯಲ್ಲಿ ನಡೆದ 5 ಮುಖ್ಯ ಬೆಳವಣಿಗೆಗಳು
ವಿಫಲಗೊಂಡ 7ನೇ ಸುತ್ತಿನ ಸಭೆಯಲ್ಲಿ ನಡೆದ 5 ಪ್ರಮುಖ ಅಂಶಗಳನ್ನು ಟಿವಿ9 ಕನ್ನಡ ಡಿಜಿಟಲ್ ತೆರೆದಿಟ್ಟಿದೆ.
ಕೇಂದ್ರ ಸರ್ಕಾರ ಜೊತೆಗಿನ 7ನೇ ಸುತ್ತಿನ ರೈತ ನಾಯಕರ ಸಭೆ ವಿಫಲಗೊಂಡಿದೆ. ರೈತರು ಎಂದಿನಂತೆ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಬೇಡಿಕೆ ಮಂಡಿಸಿದರೆ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೃಷಿ ಕಾಯ್ದೆಗಳ ಪರ ವಾದಿಸಿದರು. ಸಭೆಯಲ್ಲಿ ನಡೆದ ಐದು ಮುಖ್ಯ ಬೆಳವಣಿಗೆಳ ಮಾಹಿತಿ ಇಲ್ಲಿದೆ.
1. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳು ರೈತರ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ವಿವರಿಸಿದರು.
2. ಕೃಷಿ ಕಾಯ್ದೆಗಳಿಗೆ ರೈತರು ಸೂಚಿಸುವ ತಿದ್ದುಪಡಿ ಮಾಡುವುದಾಗಿ ತಿಳಿಸಿದರು. ರೈತರು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.
3. ಚಳವಳಿಯಲ್ಲಿ ಮೃತಪಟ್ಟ ರೈತರಿಗೆ ಎರಡು ನಿಮಿಷ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸಭೆ ಆರಂಭವಾಯಿತು.
4. ಕೇಂದ್ರ ಸರ್ಕಾರ ಭೋಜನದ ವ್ಯವಸ್ಥೆ ಮಾಡಿದ್ದರೂ, ರೈತರು ಸರ್ಕಾರಿ ಭೋಜನವನ್ನು ತಿರಸ್ಕರಿಸಿದರು. ‘ನಿಮ್ಮ ಊಟ ನಿಮಗೆ, ನಮ್ಮ ಊಟ ನಮಗೆ’ ಎಂಬ ನಿರ್ಧಾರ ತಳೆದರು.
5. ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ರೈತರು ಬುದ್ಧಿವಂತಿಕೆಯಿಂದ ಕೃಷಿ ಕಾಯ್ದೆಗಳ ಕುರಿತು ಯೋಚಿಸಬೇಕು’ ಎಂದು ಮನವಿ ಮಾಡಿದರು.
Delhi Chalo ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಸಭೆ ಮತ್ತೆ ವಿಫಲ, ವಾರಾಂತ್ಯ ಮತ್ತೊಂದು ಸುತ್ತು