ರಾಜಸ್ಥಾನದ ಹಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ ‘ತಾಲಿಬಾನ್‘; ಆಯೋಜಕರು ಮಾಡಿದ್ದೇನು?
ಭನಿಯಾನಾ ಹಳ್ಳಿ ಪೋಖ್ರಾನ್ನಿಂದ 36 ಕಿಮೀ ದೂರದಲ್ಲಿದೆ. ಪೋಖ್ರಾನ್ ಸುತ್ತಮುತ್ತಲೂ ಅಲ್ಪಸಂಖ್ಯಾತರ ಸಮುದಾಯದವರೇ ಜಾಸ್ತಿ ಜನ ಇದ್ದಾರೆ.

ಸದ್ಯ ವಿಶ್ವದಾದ್ಯಂತ ಸುದ್ದಿಯಲ್ಲಿರುವುದು ತಾಲಿಬಾನ್. ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರು ವಿಶ್ವದ ಬಹುತೇಕ ರಾಷ್ಟ್ರಗಳ ಪಾಲಿಗೆ ವಿಲನ್ಗಳೇ ಆಗಿದ್ದಾರೆ. ಅವರನ್ನು ಉಗ್ರರು ಎಂದೇ ಕರೆಯಲಾಗುತ್ತಿದ್ದು, ತಾಲಿಬಾನಿಗಳ ಪರವಾಗಿ ಮಾತನಾಡುವುದೂ ಅಪರಾಧ ಎಂದೇ ಹೇಳಲಾಗುತ್ತಿದೆ. ಭಾರತದಲ್ಲೂ ಕೂಡ ಪರಿಸ್ಥಿತಿ ಹೀಗೇ ಇದೆ. ಈಗಾಗಲೇ ತಾಲಿಬಾನ್ ಪರ ವಹಿಸಿ ಮಾತನಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗಿದೆ. ಇಷ್ಟೆಲ್ಲ ಆದ ಮೇಲೆ ರಾಜಸ್ಥಾನದ ಕ್ರಿಕೆಟ್ ಟೂರ್ನಿಮೆಂಟ್ಗೆ ತಾಲಿಬಾನ್ ಬಂದರೆ ಹೇಗಾಗಬೇಡ !-ಇದೀಗ ದೊಡ್ಡ ವಿವಾದ ಸೃಷ್ಟಿಯಾಗಿದೆ.
ರಾಜಸ್ಥಾನದ ಭನಿಯಾನಾ ಎಂಬ ಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಅದರಲ್ಲಿ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಯಾವುದೇ ಪಂದ್ಯಾವಳಿ ಇರಲಿ ತಂಡಕ್ಕೊಂದು ಹೆಸರಿಟ್ಟುಕೊಂಡು ಪಾಲ್ಗೊಳ್ಳುವುದು ಸಹಜ. ಹಾಗೇ, ಭನಿಯಾನಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಪಾಲ್ಗೊಂಡ ಒಂದು ತಂಡ ತಾಲಿಬಾನ್ ಎಂದು ಹೆಸರಿಟ್ಟುಕೊಂಡಿತ್ತು. ಆದರೆ ಕ್ರಿಕೆಟ್ ತಂಡ ತಾಲಿಬಾನ್ ಎಂದು ಹೆಸರಿಟ್ಟುಕೊಂಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯ್ತು.
ಭನಿಯಾನಾ ಹಳ್ಳಿ ಪೋಖ್ರಾನ್ನಿಂದ 36 ಕಿಮೀ ದೂರದಲ್ಲಿದೆ. ಪೋಖ್ರಾನ್ ಸುತ್ತಮುತ್ತಲೂ ಅಲ್ಪಸಂಖ್ಯಾತರ ಸಮುದಾಯದವರೇ ಜಾಸ್ತಿ ಜನ ಇದ್ದಾರೆ. ಪೋಖ್ರಾನ್ ಫೈರಿಂಗ್ ವಲಯ ಕೂಡ ಸಮೀಪದಲ್ಲೇ ಇರುವುದರಿಂದ ಇದು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಭಾರತೀಯ ಸೇನಾ ಯೋಧರ ಚಲನವಲನ ಸಾಮಾನ್ಯವಾಗಿರುತ್ತದೆ.
ತಾಲಿಬಾನ್ ತಂಡ ಏನಾಯ್ತು? ತಾಲಿಬಾನ್ ಹೆಸರಿನ ತಂಡವನ್ನು ಕಣ್ತಪ್ಪಿನಿಂದ ಪಂದ್ಯಾವಳಿಗೆ ಸೇರಿಸಿಕೊಂಡಿದ್ದೆವು. ಆದರೆ ನಂತರ ಅವರನ್ನು ತೆಗೆದುಹಾಕಲಾಗಿದೆ. ಅವರಿಗೆ ಟೂರ್ನಮೆಂಟ್ನಲ್ಲಿ ಆಡಲು ಅವಕಾಶ ನಿರಾಕರಿಸಲಾಯಿತು ಎಂದು ಆಯೋಜಕರು ಹೇಳಿದ್ದಾರೆ. ಅದರಲ್ಲೂ ಮೊದಲ ಪಂದ್ಯ ಅವರು ಆಡಿದ್ದಾರೆ. ನಂತರ ಸಂಪೂರ್ಣವಾಗಿ ನಿಷೇಧ ಹೇರಲಾಯಿತು ಎಂದೂ ಮಾಹಿತಿ ನೀಡಿದ್ದಾರೆ. ತಾಲಿಬಾನ್ ಎಂದು ಹೆಸರಿಟ್ಟುಕೊಂಡ ಕ್ರಿಕೆಟ್ ತಂಡದವರೂ ಕೂಡ ನಂತರ ಕ್ಷಮೆಯಾಚಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
ದೆಹಲಿಯಲ್ಲಿ ಹೊಂಜು ಗೋಪುರ ಉದ್ಘಾಟಿಸಿದ ಅರವಿಂದ ಕೇಜ್ರಿವಾಲ್
ಅಫ್ಘಾನ್ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು
Published On - 6:40 pm, Mon, 23 August 21




