Rajasthan: ರಾಜಸ್ಥಾನದಲ್ಲಿ ಭೀಕರ ಅಪಘಾತ; ಬೆಂಕಿ ಹೊತ್ತಿ ಉರಿದ ಬಸ್​​ನಲ್ಲಿದ್ದ 12 ಮಂದಿ ಸಜೀವ ದಹನ

ಬಸ್​​ ಬಲೋತ್ರಾದಿಂದ ಬೆಳಗ್ಗೆ 9.55ಕ್ಕೆ ಹೊರಟಿತ್ತು. ಟ್ಯಾಂಕರ್​ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್​ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Rajasthan: ರಾಜಸ್ಥಾನದಲ್ಲಿ ಭೀಕರ ಅಪಘಾತ; ಬೆಂಕಿ ಹೊತ್ತಿ ಉರಿದ ಬಸ್​​ನಲ್ಲಿದ್ದ 12 ಮಂದಿ ಸಜೀವ ದಹನ
ಖಾಸಗಿ ಬಸ್​ಗೆ ಬೆಂಕಿ
Follow us
TV9 Web
| Updated By: Digi Tech Desk

Updated on:Nov 10, 2021 | 2:09 PM

ಖಾಸಗಿ ಬಸ್​ ಮತ್ತು ಟ್ಯಾಂಕರ್​ ಡಿಕ್ಕಿಯಾದ ಪರಿಣಾಮ ಬಸ್​​ಗೆ ಬೆಂಕಿ ಹೊತ್ತಿಕೊಂಡು ಸುಮಾರು 12 ಮಂದಿ ಸಜೀವ ದಹನವಾದ ದುರ್ಘಟನೆ ರಾಜಸ್ಥಾನದ ಬಾರ್ಮರ್​-ಜೋಧ್​ಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಖಾಸಗಿ ಬಸ್​​ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ 10 ಮೃತದೇಹಗಳನ್ನು ಬಸ್​​ನಿಂದ ಹೊರತೆಗೆದಿದ್ದಾರೆ. ಈ ಬಸ್​​ ಬಲೋತ್ರಾದಿಂದ ಬೆಳಗ್ಗೆ 9.55ಕ್ಕೆ ಹೊರಟಿತ್ತು. ಟ್ಯಾಂಕರ್​ ಎದುರಿನಿಂದ ಬಂದು ಡಿಕ್ಕಿಹೊಡೆದಿದೆ. ಇದರಲ್ಲಿ ಟ್ಯಾಂಕರ್​ ಚಾಲಕ ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಂಕರ್​ ಡಿಕ್ಕಿಯಾಗುತ್ತಿದ್ದಂತೆ ಒಮ್ಮೆಲೇ ಬಸ್​​ಗೆ ಬೆಂಕಿ ತಗುಲಿದೆ. ಈ ಹೆದ್ದಾರಿಯಲ್ಲಿ ಸಿಕ್ಕಾಪಟೆ ಟ್ರಾಫಿಕ್​ ಜಾಮ್​ ಆಗಿದೆ. ಸ್ಥಳದಲ್ಲಿ ಅನೇಕ ಪೊಲೀಸ್​ ಸಿಬ್ಬಂದಿಯಿದ್ದು, ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಪಚ್ಪದ್ರ ಶಾಸಕ ಮದನ್ ಪ್ರಜಾಪತ್, ಉಸ್ತುವಾರಿ ಸಚಿವ ಸುಖರಾಮ್ ವಿಷ್ಣೋಯ್ ಇನ್ನಿತರ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಂತಾಪ ಖಾಸಗಿ ಬಸ್​ ಮತ್ತು ಟ್ಯಾಂಕರ್​ ನಡುವಿನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಸಂತಾಪ ಸೂಚಿಸಿದ್ದಾರೆ. ಬಾರ್ಮರ್​ ಜಿಲ್ಲಾಧಿಕಾರಿಯೊಟ್ಟಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ಕುರಿತಾಗಿ ಅವರಿಗೆ ನಿರ್ದೇಶನ ನೀಡಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನ ಕುರಿತು ಎನ್ಎಸ್ಎ ಮಟ್ಟದ ಶೃಂಗಸಭೆ ಆಯೋಜಿಸಿದ ಭಾರತ; 7 ರಾಷ್ಟ್ರಗಳು ಹಾಜರು

Published On - 12:42 pm, Wed, 10 November 21