12 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಂಧನ; ಮ್ಯಾಟ್ರಿಮೋನಿ ತಾಣದಲ್ಲೇ ಟಾರ್ಗೆಟ್ ಮಾಡ್ತಿದ್ದ
ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್ನಂಬರ್ ಬದಲಿಸುತ್ತಿದ್ದ. ಪ್ರತೀಸಲ ಊಬರ್, ಓಲಾ ಕ್ಯಾಬ್ಗಳನ್ನು ಬುಕ್ ಮಾಡುವಾಗಲೂ ಬೇರೆಬೇರೆ ಸಿಮ್ಗಳನ್ನೇ ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್ ಕಮೀಷನರ್ ಸುರೇಶ್ ಮೆಂಗಾಡೆ ತಿಳಿಸಿದ್ದಾರೆ.
ಸುಮಾರು 12 ಮಹಿಳೆಯರನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ 37 ವರ್ಷದ ವ್ಯಕ್ತಿಯನ್ನು ನವೀ ಮುಂಬೈ ಪೊಲೀಸರು ಮಲಾಡ್ ಎಂಬಲ್ಲಿ ಬಂಧಿಸಿದ್ದಾರೆ. ಈತನ ಹೆಸರು ಮಹೇಶ್ ಅಲಿಯಾಸ್ ಕರಣ್ ಗುಪ್ತಾ. ಇವನು ಮೆಕ್ಯಾನಿಕಲ್ ಇಂಜನಿಯರ್ ಆಗಿದ್ದು, ಹಲವು ಗೌರವಾನ್ವಿತ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾನೆ. ಮ್ಯಾಟ್ರಿಮೋನಿ ಮೂಲಕ ಮಹಿಳೆಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರಣ್ ಗುಪ್ತಾ ತುಂಬ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಹಲವು ನಕಲಿ ಖಾತೆಗಳನ್ನು ಹೊಂದಿದ್ದ. ಅದರ ಮೂಲಕ ಆತ ವಿದ್ಯಾವಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಧು-ವರರ ವೇದಿಕೆ ಮೂಲಕ ಅಂಥ ಯುವತಿಯರನ್ನು ಹುಡುಕಿ, ಅವರನ್ನು ಸಂಪರ್ಕ ಮಾಡುತ್ತಿದ್ದ. ಬಳಿಕ ಅವರಿಂದ ಫೋನ್ ನಂಬರ್ ಪಡೆಯುತ್ತಿದ್ದ. ಪಬ್, ರೆಸ್ಟೋರೆಂಟ್ಗಳಲ್ಲಿ ಭೇಟಿಯಾಗೋಣ ಎಂದು ಕರೆಯುತ್ತಿದ್ದ. ತನ್ನನ್ನು ತಾನು ಸಭ್ಯನಂತೆ ಬಿಂಬಿಸಿಕೊಳ್ಳುತ್ತಿದ್ದ. ಹೀಗೆ ಭೇಟಿಯಾದ ಸಂದರ್ಭದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿ ಪ್ರತಿಬಾರಿಯೂ ತನ್ನ ಫೋನ್ನಂಬರ್ ಬದಲಿಸುತ್ತಿದ್ದ. ಪ್ರತೀಸಲ ಊಬರ್, ಓಲಾ ಕ್ಯಾಬ್ಗಳನ್ನು ಬುಕ್ ಮಾಡುವಾಗಲೂ ಬೇರೆಬೇರೆ ಸಿಮ್ಗಳನ್ನೇ ಬಳಸುತ್ತಿದ್ದ. ಈ ವ್ಯಕ್ತಿಗೆ ಕಂಪ್ಯೂಟರ್ ಬಗ್ಗೆಯೂ ಅಪಾರ ತಿಳಿವಳಿಕೆ ಇದೆ. ಹ್ಯಾಕರ್ ಕೂಡ ಹೌದು ಎಂದು ಮುಂಬೈ ಡೆಪ್ಯೂಟಿ ಪೊಲೀಸ್ ಕಮೀಷನರ್ ಸುರೇಶ್ ಮೆಂಗಾಡೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಗುಪ್ತಾ 12 ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆದಿದ್ದಾನೆಂದು ಅನ್ನಿಸುತ್ತದೆ. ಆದರೆ ಆ ಸಂಖ್ಯೆ ದೊಡ್ಡದಿದೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್ ಆಯ್ತು ಪ್ರಶಾಂತ್ ನೀಲ್ ಫೋಟೋ; ಆದರೆ ಕಾರಣ ಬೇರೆ