ನೂಪುರ್ ಶರ್ಮಾ ಶಿರಚ್ಛೇದನ ಮಾಡಿದವರಿಗೆ ಮನೆ, ಆಸ್ತಿ ಬಹುಮಾನ: ರಾಜಸ್ಥಾನದ ವ್ಯಕ್ತಿಯಿಂದ ಘೋಷಣೆ
ಈ ವಿಡಿಯೊ ಬಗ್ಗೆ ಪೊಲೀಸ್ ಜಾಗ್ರತವಾಗಿದ್ದಾರೆ. ವಿಡಿಯೊದಲ್ಲಿ ಸಲ್ಮಾನ್ ಚಿಶ್ತಿ ಅಮಲಿನಲ್ಲಿರುವಂತೆ ಕಾಣಿಸಿದೆ. ಈ ಬಗ್ಗೆ ಪೊಲೀಸರು ದರ್ಗಾ ಮತ್ತು ಅಂಜುಮಾನ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗುವುದನ್ನು ನಿಲ್ಲಿಸುವಂತೆ ಸೂಚಿಸಿದೆ.
ಅಜ್ಮೇರ್: ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಶಿರಚ್ಛೇದನ ಮಾಡಿವರಿಗೆ ತನ್ನ ಮನೆ ಮತ್ತು ಆಸ್ತಿಯನ್ನು ಬಹುಮಾನವಾಗಿ ನೀಡುತ್ತೇನೆ ಎಂದು ರಾಜಸ್ಥಾನದ (Rajasthan) ಅಜ್ಮೇರ್ನ ವ್ಯಕ್ತಿಯೊಬ್ಬರು ಘೋಷಿಸಿದ್ದಾರೆ. ಈ ವ್ಯಕ್ತಿಯನ್ನು ಸಲ್ಮಾನ್ ಚಿಶ್ತಿ ಎಂದು ಗುರುತಿಸಲಾಗಿದೆ. ನೂಪುರ್ ಶರ್ಮಾ ಅವರ ತಲೆಯನ್ನು ತೆಗೆದುಕೊಂಡು ಬಂದವರಿಗೆ ನಾನು ನನ್ನ ಮನೆ ಮತ್ತು ಆಸ್ತಿಯನ್ನು ಬರೆದುಕೊಡುತ್ತೇನೆ ಎಂದು ಚಿಶ್ತಿ ವಿಡಿಯೊದಲ್ಲಿ ಹೇಳಿದ್ದಾರೆ. ಬಿಜೆಪಿ ( BJP) ನೇತಾರೆ ಖ್ವಾಜಾ ಸಾಹೇಬ್ ಮತ್ತು ಮೊಹಮ್ಮದ್ ಸಾಹೇಬ್ ಅವರನ್ನು ಅವಮಾನಿಸಿದ್ದಾರೆ. ಇಂತಿರುವಾಗ ನೂಪುರ್ ಶರ್ಮಾ ಅವರ ತಲೆ ಕಡಿದು ತಂದವರಿಗೆ ನನ್ನ ಆಸ್ತಿ ಬರೆದುಕೊಡುತ್ತೇನೆ ಎಂದಿದ್ದಾರೆ. ದೇಶದಲ್ಲಿ ಮುಸ್ಲಿಮರನ್ನು ವಿಚಾರಣೆಗೊಳಪಡಿಸುತ್ತಿದ್ದು, ಸಾಯಿಸಲಾಗುತ್ತಿದೆ ಎಂದು ಚಿಶ್ತಿ ಆರೋಪಿಸಿದ್ದಾರೆ. ಈ ವಿಡಿಯೊ ವೈರಲ್ ಆದ ನಂತರ ಹೆಚ್ಚುವರಿ ಸುಪರಿಟೆಂಡೆಂಟ್ ಆಫ್ ಪೊಲೀಸ್ ವಿಕಾಸ್ ಸಂಘವನ್ ಕಾರ್ಯಪ್ರವೃತ್ತರಾಗಿದ್ದು, ವಾಟ್ಸಾಪ್ ಮೂಲಕ ನಮಗೆ ಈ ವಿಡಿಯೊ ಸಿಕ್ಕಿದೆ ಎಂದಿದ್ದಾರೆ.
ಈ ವಿಡಿಯೊ ಬಗ್ಗೆ ಪೊಲೀಸ್ ಜಾಗ್ರತವಾಗಿದ್ದಾರೆ. ವಿಡಿಯೊದಲ್ಲಿ ಸಲ್ಮಾನ್ ಚಿಶ್ತಿ ಅಮಲಿನಲ್ಲಿರುವಂತೆ ಕಾಣಿಸಿದೆ. ಈ ಬಗ್ಗೆ ಪೊಲೀಸರು ದರ್ಗಾ ಮತ್ತು ಅಂಜುಮಾನ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗುವುದನ್ನು ನಿಲ್ಲಿಸುವಂತೆ ಸೂಚಿಸಿದೆ.
“ಆರೋಪಿ ಸಲ್ಮಾನ್ ಚಿಶ್ತಿ ದರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಪೊಲೀಸರು ಸಲ್ಮಾನ್‌ಗಾಗಿ ಹುಡುಕುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ವಿಕಾಸ್ ಅವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ ಜೂನ್ 28 ರಂದು ಉದಯಪುರದ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಕನ್ಹಯ್ಯಾ ಲಾಲ್ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕೆ ಪ್ರತಿಕಾರವಾಗಿ ಈ ಕೊಲೆ ಮಾಡಲಾಗಿದೆ ಎಂದು ಹಂತಕರು ಹೇಳಿದ್ದರು.
Published On - 5:32 pm, Tue, 5 July 22