ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು; ಅಪಾಯದಿಂದ ಪಾರು

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಚೇಳು ಕಚ್ಚಿರುವ ಘಟನೆ ಏಪ್ರಿಲ್ 23 ರಂದು ನಡೆದಿದ್ದು, ಇದೀಗ ಏರ್ ಇಂಡಿಯಾ ದೃಢಪಡಿಸಿದೆ. ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದೆ.

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು; ಅಪಾಯದಿಂದ ಪಾರು
ಏರ್​ ಇಂಡಿಯಾ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 06, 2023 | 12:04 PM

ಏಪ್ರಿಲ್ 23 ರಂದು ನಾಗ್ಪುರದಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ(Air India) ವಿಮಾನ AI 630 ನಲ್ಲಿ ಚೇಳೊಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಕಚ್ಚಿರುವ ಘಟನೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ANI ಗೆ ತಿಳಿಸಿದ್ದಾರೆ. ಈ ಹಿಂದೆ ವಿಮಾನದಲ್ಲಿ ಜೀವಂತ ಪಕ್ಷಿಗಳು ಮತ್ತು ಇಲಿಗಳು ಕಂಡುಬಂದ ನಿದರ್ಶನಗಳಿದ್ದರೂ, ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಚೇಳು ಕಚ್ಚಿದ್ದು, ಇದು ಅಪರೂಪದ ನಿದರ್ಶನವಾಗಿದೆ.

ಇನ್ನು ಚೇಳು ಕಚ್ಚಿದ ಕೂಡಲೇ ಮಹಿಳಾ ಪ್ರಯಾಣಿಕರಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ನೀಡಿದ್ದು, ಮತ್ತು ವಿಮಾನ ಲ್ಯಾಂಡ್ ಆದ ಕೂಡಲೇ ನಮ್ಮ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಿದರು.ಇನ್ನು ಅವರನ್ನು ಡಿಸ್ಚಾರ್ಜ್ ಮಾಡುವವರೆಗೂ ಪ್ರಯಾಣಿಕರಿಗೆ ಎಲ್ಲಾ ಬೆಂಬಲವನ್ನು ನೀಡಿದ್ದೇವೆ ಎಂದು AI ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ

ಇನ್ನು ಘಟನೆಯ ಮಾಹಿತಿ ಪಡೆದ ಏರ್ ಇಂಡಿಯಾದ ಇಂಜಿನಿಯರಿಂಗ್ ತಂಡವು ವಿಮಾನವನ್ನ ಸಂಪೂರ್ಣ ತಪಾಸಣೆ ನಡೆಸಿತು. ಚೇಳನ್ನು ಪತ್ತೆಹಚ್ಚಿದ ನಂತರ ವಿಮಾನವನ್ನ ಸಂಪೂರ್ಣವಾಗಿ ಹೊಗೆ(Smoke) ಹಾಕುವ ಪ್ರಕ್ರಿಯೆ ನಡೆಸಲಾಯಿತು. ಪ್ರಯಾಣಿಕರಿಗೆ ಉಂಟಾದ ಸಂಕಟ ಮತ್ತು ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ” ಎಂದು ಏರ್ ಇಂಡಿಯಾ ಹೇಳಿದೆ.

ಇನ್ನಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ