AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ABVIMAS: 2 ತಿಂಗಳ ಬಳಿಕ ಹಿಮಾಚಲದಲ್ಲಿ ಬೆಂಗಳೂರು ಪರ್ವತಾರೋಹಿ ಶವ ಪತ್ತೆ

ಬೆಂಗಳೂರಿನ ಖಾಸಗಿ ಭದ್ರತಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಪರ್ವತಾರೋಹಿ ವೇದವ್ಯಾಸ್, ಜೂನ್‌ನಲ್ಲಿ 6,264-ಮೀಟರ್ CB-13 ಗೆ ಪಾದಯಾತ್ರೆಗೆ ತೆರಳಿದ್ದ ಐದು ಸದಸ್ಯರ ಟ್ರೆಕ್ಕಿಂಗ್ ತಂಡದ ಭಾಗವಾಗಿದ್ದರು.

ABVIMAS: 2 ತಿಂಗಳ ಬಳಿಕ ಹಿಮಾಚಲದಲ್ಲಿ ಬೆಂಗಳೂರು ಪರ್ವತಾರೋಹಿ ಶವ ಪತ್ತೆ
After 2 months, dead body of Bangalore mountaineer was found in HimachalImage Credit source: HT
ಅಕ್ಷಯ್​ ಪಲ್ಲಮಜಲು​​
|

Updated on:Aug 25, 2022 | 9:33 AM

Share

ಮನಾಲಿ:  ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ (ABVIMAS), ಮನಾಲಿ ಮತ್ತು ಲಾಹೌಲ್ ಮತ್ತು ಸ್ಪಿತಿ ಪೊಲೀಸರ ಜಂಟಿ ತಂಡವು 6,264 ಮೀಟರ್ ಪಾದಯಾತ್ರೆಯಲ್ಲಿದ್ದಾಗ ಆಳವಾದ ಬಿರುಕಿನಲ್ಲಿ ಬಿದ್ದ ಎರಡು ತಿಂಗಳ ನಂತರ ಬೆಂಗಳೂರಿನ ಪಾದಯಾತ್ರಿಕನ ಮೃತದೇಹವನ್ನು ಹೊರತೆಗೆಯಲಾಗಿದೆ.

ಬೆಂಗಳೂರಿನ ಖಾಸಗಿ ಸೆಕ್ಯುರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಪರ್ವತಾರೋಹಿ ವೇದವ್ಯಾಸ್ ಅವರು ಐವರು ಸದಸ್ಯರ ಟ್ರೆಕ್ಕಿಂಗ್ ತಂಡದ ಭಾಗವಾಗಿದ್ದರು. ತಂಡವು ಟ್ರೆಕ್ಕಿಂಗ್ ಕೈಗೊಳ್ಳುವ ಮೊದಲು ಭಾರತೀಯ ಪರ್ವತಾರೋಹಣ ಫೆಡರೇಶನ್‌ನಿಂದ ಅನುಮತಿಯನ್ನು ಕೋರಿತ್ತು, ಆದರೆ ಮುಂಚಿತವಾಗಿ ಸ್ಥಳೀಯ ಆಡಳಿತಕ್ಕೆ ತಿಳಿಸಲು ಸಾಧ್ಯವಾಗಿರಲಿಲ್ಲ.

ಜೂನ್ 16 ರಂದು 5,300 ಮೀಟರ್ ಎತ್ತರದ ಹಿಮನದಿಯನ್ನು ದಾಟುವಾಗ ಅವರು ಸಂದಿನ ಒಳಗೆ ಬಿದ್ದಿದ್ದಾರೆ. ಆರಂಭದಲ್ಲಿ, ಅವರ ಜೊತೆಗಿದ್ದ ಉಳಿದ ಪರ್ವತಾರೋಹಿಗಳು ವೇದವ್ಯಾಸ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೆ, ಆದರೆ ಅವರನ್ನು ಆ ಕಂದಕದಿಂದ ಮೇಲೆ ತರಲು ಸಾಧ್ಯವಾಗಿರಲಿಲ್ಲ, ನಂತರ ಅವರು ಸ್ಥಳೀಯ ಆಡಳಿತ ಮತ್ತು ಸೇನೆಗೆ ಮಾಹಿತಿ ನೀಡಿದ್ದಾರೆ.

ಲಹೌಲ್ ಮತ್ತು ಸ್ಪಿತಿ ಆಡಳಿತದಿಂದ ಕಳುಹಿಸಲಾದ ತುರ್ತು ತಂಡ ಮತ್ತು ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್‌ನ ಏಳು ಸದಸ್ಯರ ತಂಡವು ಅವರನ್ನು ರಕ್ಷಿಸಲು ಆಗಿರಲಿಲ್ಲ ಏಕೆಂದರೆ ಪ್ರತಿಕೂಲ ಹವಾಮಾನವು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಲಾಹೌಲ್ ಮತ್ತು ಸ್ಪಿತಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಮಾನವ್ ವರ್ಮಾ ಅವರು ಆಗಸ್ಟ್ 17 ರಂದು ಮತ್ತೊಮ್ಮೆ ಶೋಧ ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಎಬಿವಿಮಾಸ್ ಇನ್ಸ್‌ಪೆಕ್ಟರ್ ಜಿತೇಂದರ್ ನೇತೃತ್ವದ ತಂಡ ಆಗಸ್ಟ್ 23 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ದೇಹವನ್ನು ಹೊರತೆಗೆದಿದೆ ಎಂದು ವರ್ಮಾ ಹೇಳಿದರು.

ಮೃತರ ಪಾರ್ಥಿವ ಶರೀರವನ್ನು ಎಂಟು ಗಂಟೆ ಮತ್ತು 17 ಕಿಮೀ ಇಳಿದ ನಂತರ ಹತ್ತಿರದ ರಸ್ತೆಗೆ ತರಲಾಗಿದೆ. ದೇಹವನ್ನು ಕುಲುವಿನಲ್ಲಿ ಇರಿಸಲಾಗಿದೆ ಮತ್ತು ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಹೇಳಿದರು.

Published On - 9:33 am, Thu, 25 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ