AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಜನ್ಮಭೂಮಿ ಆಯ್ತು ಈಗ ಹನುಮಂತನ ಜನ್ಮಸ್ಥಳಕ್ಕಾಗಿ ಎರಡು ಧಾರ್ಮಿಕ ಟ್ರಸ್ಟ್​​ಗಳ ಜಟಾಪಟಿ

ಟಿಟಿಡಿ ಅಥವಾ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ, ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಮನವಮಿಯಂದು ಹನುಮಂತನ ಜನ್ಮಸ್ಥಳವಾಗಿ ಔಪಚಾರಿಕವಾಗಿ ಪವಿತ್ರವಾದ ತಿರುಮಲ ಬೆಟ್ಟಗಳಲ್ಲಿನ ದೇವಾಲಯ ಮತ್ತು ಯಾತ್ರಾಸ್ಥಳವಾದ ಅಂಜನಾದ್ರಿಯಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು...

ರಾಮ ಜನ್ಮಭೂಮಿ ಆಯ್ತು ಈಗ ಹನುಮಂತನ ಜನ್ಮಸ್ಥಳಕ್ಕಾಗಿ ಎರಡು ಧಾರ್ಮಿಕ ಟ್ರಸ್ಟ್​​ಗಳ  ಜಟಾಪಟಿ
ಆಂಧ್ರದಲ್ಲಿರುವ ಹನುಮಾನ್ ದೇವಾಲಯ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Feb 14, 2022 | 10:42 PM

Share

ಹೈದರಾಬಾದ್: ನವೆಂಬರ್ 2019 ರಲ್ಲಿ ರಾಮ ಜನ್ಮಭೂಮಿ (Ram Janmabhoomi) ವಿವಾದವನ್ನು ಸುಪ್ರೀಂಕೋರ್ಟ್ ಇತ್ಯರ್ಥಗೊಳಿಸಿದ ನಂತರ ಇದೀಗ ಹನುಮಾನ್ ಜನ್ಮಭೂಮಿಯ (Hanuman Janmabhoomi)ಬಗ್ಗೆ ಹೊಸತೊಂದು ವಿವಾದವೆಬ್ಬಿದೆ. ಆದಾಗ್ಯೂ, ಇದು ಎರಡು ಧರ್ಮಗಳ ನಡುವೆ ಅಲ್ಲ. ಈ ಜಟಾಪಟಿ ನಡೆಯುತ್ತಿರುವುದು ಎರಡು ಹಿಂದೂ ಟ್ರಸ್ಟ್‌ಗಳ ನಡುವೆ. ಒಂದು ಆಂಧ್ರಪ್ರದೇಶ ಮತ್ತು ಇನ್ನೊಂದು ಕರ್ನಾಟಕದಲ್ಲಿದ್ದು, ಎರಡೂ ಟ್ರಸ್ಟ್ ಗಳು ವಿಭಿನ್ನ ಸ್ಥಳಗಳನ್ನು ಹನುಮಂತನ ಜನ್ಮಸ್ಥಳವೆಂದು ಹೇಳಿಕೊಳ್ಳುತ್ತಿವೆ. ಟಿಟಿಡಿ (TTD) ಅಥವಾ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ, ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಮನವಮಿಯಂದು ಹನುಮಂತನ ಜನ್ಮಸ್ಥಳವಾಗಿ ಔಪಚಾರಿಕವಾಗಿ ಪವಿತ್ರವಾದ ತಿರುಮಲ ಬೆಟ್ಟಗಳಲ್ಲಿನ ದೇವಾಲಯ ಮತ್ತು ಯಾತ್ರಾಸ್ಥಳವಾದ ಅಂಜನಾದ್ರಿಯಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬುಧವಾರದಂದು ಸಮಾರಂಭವನ್ನು ಯೋಜಿಸಿದೆ. ಆದರೆ ಕರ್ನಾಟಕದ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದನ್ನು ಒಪ್ಪುವುದಿಲ್ಲ. ಟ್ರಸ್ಟ್‌ನ ಸಂಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ತಿರುಮಲಕ್ಕೆ ಬರುವ ನಿರೀಕ್ಷೆಯಿದೆ. ವಾಲ್ಮೀಕಿ ರಾಮಾಯಣವು ಹನುಮಂತನು ಕಿಷ್ಕಿಂಧೆಯ ಅಂಜನಹಳ್ಳಿಯಲ್ಲಿ ಜನಿಸಿದನೆಂದು ಹೇಳುತ್ತದೆ, ಇದು ಹಂಪಿ ಬಳಿಯ ತುಂಗಭದ್ರಾ ನದಿಯ ದಡದಲ್ಲಿದೆ ಎಂದು ನಂಬಲಾಗಿದೆ ಎನ್ನುತ್ತಿದೆ ಈ ಟ್ರಸ್ಟ್. ಕಳೆದ ವರ್ಷ ಮೇ ತಿಂಗಳಿನಲ್ಲಿ ಈ ವಿವಾದ ಬಗೆಹರಿಸಲು ಚರ್ಚೆ ನಡೆದರೂ ಯಾವುದೇ ಪರಿಹಾರ ಸಿಗಲಿಲ್ಲ.

ಕಳೆದ ತಿಂಗಳು ನಿಧನರಾದ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ವಿ ಮುರಳೀಧರ ಶರ್ಮಾ ಅವರ ನೇತೃತ್ವದ ಟಿಟಡಿ ಸಮಿತಿಯು ಪುರಾತನ ಗ್ರಂಥಗಳು ಮತ್ತು ತಾಮ್ರ-ಲೇಖನದಂತಹ ಪ್ರಾಚೀನ ಗ್ರಂಥಗಳು ಈಗ ತಿರುಮಲ ಎಂದು ಕರೆಯಲ್ಪಡುವ ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಳವೆಂದು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಎಂದಿದೆ.

ಏಪ್ರಿಲ್‌ನಲ್ಲಿ ಟಿಟಿಡಿ ಅಂಜನಾದ್ರಿಯೇ ಹನುಮ ಜನ್ಮಭೂಮಿ ಎಂದು ಸಾರುವ ಕಿರುಪುಸ್ತಕವನ್ನು ಪ್ರಕಟಿಸಿತು. ಈ ಕಿರುಪುಸ್ತಕವು ಡಿಸೆಂಬರ್ 2020 ರಲ್ಲಿ ರಚಿತವಾದ ಎಂಟು ಸದಸ್ಯರ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿದೆ.

ತೀರ್ಥ ಕ್ಷೇತ್ರ ಟ್ರಸ್ಟ್ ಟಿಟಿಡಿಗೆ ಆರು ಪುಟಗಳ ಪತ್ರ ಬರೆದು ಪ್ರತಿವಾದ ಮಾಡಿತು ಮತ್ತು ಚರ್ಚೆ ನಡೆಸಲಾಯಿತು. ಹಲವಾರು ವೈದಿಕ ಮತ್ತು ಪುರಾಣ ವಿದ್ವಾಂಸರು ಒಪ್ಪಿಕೊಂಡಿರುವ ಪೌರಾಣಿಕ, ಸಾಹಿತ್ಯಿಕ, ಪುರಾತತ್ವ ಮತ್ತು ಭೌಗೋಳಿಕ ಪುರಾವೆಗಳ ಮೇಲೆ ಟಿಟಿಡಿ ತನ್ನ ಹಕ್ಕನ್ನು ವಾದಿಸಿದ್ದು ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳುತ್ತದೆ.

“ಮಧ್ಯಪ್ರದೇಶದ ಚಿತ್ರಕೂಟದ ದೃಷ್ಟಿ ಇಲ್ಲದಿರುವ ಸ್ವಾಮೀಜಿಯೊಬ್ಬರು ಬುಧವಾರದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಟಿಟಿಡಿ ಸಿಇಒ ಜವಾಹರ್ ರೆಡ್ಡಿ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಬುಧವಾರದ ಸಮಾರಂಭದಲ್ಲಿ ಶಾರದಾ ಪೀಠಾಧಿಪತಿ ಸ್ವರೂಪನೇಂದ್ರ ಸರಸ್ವತಿ, ಚಿತ್ರಕೂಟದ ತುಳಸಿ ಪೀಠದ ರಾಮಭದ್ರಾಚಾರ್ಯ ಮಹಾರಾಜರು, ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸ್ವಾಮಿ ಗೋವಿಂದ್ ದೇವ್ ಗಿರಿ ಮತ್ತು ದೇಶದ ಇತರ ಭಾಗಗಳ ಪೂಜ್ಯ ಸ್ವಾಮೀಜಿಗಳು, ಟಿಟಿಡಿ ಅಧ್ಯಕ್ಷ ವೈಎಸ್‌ಎಸ್‌ ಸುಬ್ಬಾ ರೆಡ್ಡಿ ಮತ್ತು ಇತರರು ಇದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಹಿಜಾಬ್ ಸಮಸ್ಯೆಯಲ್ಲ,ನಾವು ರಾಜ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ: ನಿತೀಶ್ ಕುಮಾರ್

Published On - 10:36 pm, Mon, 14 February 22