ಅಹಮದಾಬಾದ್​: ರಸ್ತೆಯಲ್ಲಿ ಮಹಿಳೆಗೆ ಕಾಪಾಳಮೋಕ್ಷ ಮಾಡಿ, ತಲೆಗೂದಲೆಳೆದು ಸ್ಪಾ ಮಾಲೀಕನಿಂದ ಅಮಾನುಷ ಹಲ್ಲೆ

ಸ್ಪಾ ಮಾಲೀಕನೊಬ್ಬ ರಸ್ತೆಯಲ್ಲಿ ಮಹಿಳೆಯ ತಲೆಗೂದಲು ಹಿಡಿದು ಅಮಾನುಷವಾಗಿ ಥಳಿಸಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಅಹಮದಾಬಾದ್‌ನ ಸಿಂಧು ಭವನ ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ 24 ವರ್ಷದ ಮಹಿಳೆಯ ಮೇಲೆ ಸ್ಪಾ ಮಾಲೀಕ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಿಸಿಟಿವಿಯಲ್ಲಿ ಸ್ಪಾ ಮಾಲೀಕ ಪದೇ ಪದೇ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ, ಆಕೆಯ ಕೂದಲು ಹಿಡಿದು, ಬಟ್ಟೆಗಳನ್ನು ಹರಿದು ಹಿಂಸೆ ಕೊಟ್ಟಿದ್ದಾನೆ. ಏನೇ ಮಾಡಿದರೂ ಆಕೆಗೆ ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ

ಅಹಮದಾಬಾದ್​: ರಸ್ತೆಯಲ್ಲಿ ಮಹಿಳೆಗೆ ಕಾಪಾಳಮೋಕ್ಷ ಮಾಡಿ, ತಲೆಗೂದಲೆಳೆದು  ಸ್ಪಾ ಮಾಲೀಕನಿಂದ ಅಮಾನುಷ ಹಲ್ಲೆ
ಸ್ಪಾ ಮಾಲೀಕ
Follow us
ನಯನಾ ರಾಜೀವ್
|

Updated on:Sep 28, 2023 | 11:28 AM

ಸ್ಪಾ ಮಾಲೀಕನೊಬ್ಬ ರಸ್ತೆಯಲ್ಲಿ ಮಹಿಳೆಯ ತಲೆಗೂದಲು ಹಿಡಿದು ಅಮಾನುಷವಾಗಿ ಥಳಿಸಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಅಹಮದಾಬಾದ್‌ನ ಸಿಂಧು ಭವನ ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ 24 ವರ್ಷದ ಮಹಿಳೆಯ ಮೇಲೆ ಸ್ಪಾ ಮಾಲೀಕ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಿಸಿಟಿವಿಯಲ್ಲಿ ಸ್ಪಾ ಮಾಲೀಕ ಪದೇ ಪದೇ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ, ಆಕೆಯ ಕೂದಲು ಹಿಡಿದು, ಬಟ್ಟೆಗಳನ್ನು ಹರಿದು ಹಿಂಸೆ ಕೊಟ್ಟಿದ್ದಾನೆ. ಏನೇ ಮಾಡಿದರೂ ಆಕೆಗೆ ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ಆಘಾತಕಾರಿ ವಿಡಿಯೋ ಅಹಮದಾಬಾದ್​ನಲ್ಲಿರುವ ಗ್ಯಾಲೆಕ್ಸಿ ಸ್ಪಾ ಬಳಿ ನಡೆದಿದೆ. ಆರೋಪಿಯನ್ನು ಮೊಹಸಿನ್ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಇಬ್ಬರು ಆ ದೃಶ್ಯವನ್ನು ನೋಡುತ್ತಿರುತ್ತಾರೆ, ಮೂರನೇ ವ್ಯಕ್ತಿ ತಡೆಯಲು ಪ್ರಯತ್ನಿಸುತ್ತಾನೆ, ಆಗ ಆ ವ್ಯಕ್ತಿಯನ್ನು ಸ್ಪಾ ಮಾಲೀಕ ತಳ್ಳುತ್ತಾನೆ. ನಂತರ ಮತ್ತೆ ಮಹಿಳೆಗೆ ಹೊಡೆಯುತ್ತಾನೆ. ಈ ಘಟನೆ ಸೆಪ್ಟೆಂಬರ್ 25ರಂದು ನಡೆದಿದೆ.

ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಮೊಹಸಿನ್ ವಿರುದ್ಧ ಸೆಕ್ಷನ್ 294(ಬಿ), 323 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ, ಕೌನ್ಸೆಲಿಂಗ್ ನಂತರ ಎಫ್​ಐಆರ್ ದಾಖಲಿಸಲು ಮಹಿಳೆಗೆ ಮನವರಿಕೆ ಮಾಡಿದರು. ಈ ಮಹಿಳೆ ಸ್ಪಾದಲ್ಲಿ ಮೊಹಸಿನ್​ ಪಾರ್ಟ್ನರ್​ ಆಗಿದ್ದಳು, ನಾಲ್ಕೈದು ಸಾವಿರ ರೂ.ಗಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಮಹಿಳೆ ಆರಂಭದಲ್ಲಿ ದೂರು ನೀಡಲು ಸಿದ್ಧವಿರಲಿಲ್ಲ.

ಮತ್ತಷ್ಟು ಓದಿ: ವರದಕ್ಷಿಣೆ ಕಿರುಕುಳದಿಂದಾಗಿ ಮನೆಬಿಟ್ಟು ಹೋಗಿದ್ದ ಪತ್ನಿಯ ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದುಕೊಂಡು ಬಂದ ಪತಿ

ಪೊಲೀಸರು ಆಕೆಗೆ ಕೌನ್ಸೆಲಿಂಗ್ ಮೂಲಕ ದೂರು ನೀಡುವಂತೆ ಮನವರಿಕೆ ಮಾಡಿದರು. ಬೆಂಬಲ ನೀಡಿದ ಪೊಲೀಸರು ಮತ್ತು ಮಾಧ್ಯಮಗಳಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದಾರೆ. ಇಬ್ಬರೂ ಒಟ್ಟಾಗಿ ಸಲೂನ್ ತೆರೆದಿದ್ದೆವು ಸಾಕಷ್ಟು ಕೋಟಿ ನಷ್ಟವಾಗಿತ್ತು, 5 ಸಾವಿರ ರೂ. ವಿಚಾರಕ್ಕಾಗಿ ಜಗಳವಾಗಿತ್ತು. ಹಣದ ವಿಚಾರವಾಗಿ ಓರ್ವ ಹುಡುಗಿಯನ್ನು ನಾನು ಗದರಿಸಿದ್ದೆ ಆದರೆ ಆ ಆಕೆಯ ಪರವಹಿಸಿ ಮಾತನಾಡಿದ್ದ, ನಾನು ಕೂಡ ಆ ಹುಡುಗಿ ಮತ್ತು ನಿನಗೆ ಸಂಬಂಧವೇನು ಎಂದು ಪ್ರಶ್ನಿಸಿದ್ದೆ ಅದಕ್ಕೆ ಕೋಪಗೊಂಡು ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ.

ತಕ್ಷಣ ನಾನು ಪೊಲೀಸರಿಗೆ ಕರೆ ಮಾಡಲು ಮೊಬೈಲ್ ತೆಗೆದುಕೊಂಡೆ ಆತ ಮೊಬೈಲ್ ಕಸಿದುಕೊಂಡ, ಕಡಿಮೆ ಬ್ಯಾಟರಿ ಇದ್ದ ಕಾರಣ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು.

ಮೊಹಸಿನ್ ಕ್ಷಮೆಯಾಚಿಸಿದ ನಾನು ಕೂಡ ಕ್ಷಮಿಸಿದ್ದೇನೆ ಹೀಗಾಗಿ ಪೊಲೀಸ್​ ಠಾಣೆಗೆ ಹೋಗಲಿಲ್ಲ, ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ವಿಷಯ ತಿಳಿಯಿತು. ನನಗೆ ನಿರಂತರ ಕರೆಗಳು ಬರುತ್ತಿವೆ, ನನಗೆ ಆದ ಹಾಗೆ ಇನ್ಯಾರಿಗೂ ಆಗಬಾರದು ಎನ್ನುವ ಕಾರಣಕ್ಕೆ ದೂರು ದಾಖಲಿಸಿದ್ದೇನೆ , ಪೊಲೀಸರು ಕೂಡ ಬೆನ್ನಿಗೆ ನಿಂತಿದ್ದಾರೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:27 am, Thu, 28 September 23