ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ

TV9 Digital Desk

| Edited By: Rashmi Kallakatta

Updated on:May 18, 2022 | 8:39 PM

ಸುಪ್ರೀಂಕೋರ್ಟ್ ಆದೇಶವು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಹೇಳುತ್ತದೆ, ಅಂದರೆ ನಾವು ಅಲ್ಲಿ 'ವುಜು' ಮಾಡಬಹುದು. ಅದೊಂದು ಕಾರಂಜಿ. ಇದೇ ರೀತಿ ನಡೆದರೆ ತಾಜ್‌ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ

ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಜ್ಞಾನವಾಪಿ ಮಸೀದಿ (Gyanvapi mosque) ಸಂಕೀರ್ಣದಲ್ಲಿ ಪತ್ತೆಯಾಗಿರುವುದು  ಶಿವಲಿಂಗ (shivling) ಅಲ್ಲ, ಅದು ‘ಕಾರಂಜಿ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಹೇಳಿದ್ದಾರೆ. ಅದೇ ವೇಳೆ ‘ತಾಜ್ ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕು’ ಎಂದಿದ್ದಾರೆ ಅವರು. ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಟೀಕಿಸಿದ ಅವರು ದಂಗೆಗಳು ನಡೆಯುತ್ತಿದ್ದ ಕಾಲಘಟ್ಟವಾದ 1990ಕ್ಕೆ ದೇಶವನ್ನು ಕೊಂಡೊಯ್ಯಲು ಬಿಜೆಪಿ ಬಯಸುತ್ತಿದೆ ಎಂದು ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಓವೈಸಿ, ‘ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ’ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಒತ್ತಿಹೇಳಿದ್ದಾರೆ. ಅಂದರೆ ಅವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲು ಶುದ್ಧೀಕರಣದ ಧಾರ್ಮಿಕ ಕ್ರಿಯೆಯಾದ ‘ವುಜು ಖಾನಾ’ ಮಾಡಬಹುದು. ಸುಪ್ರೀಂಕೋರ್ಟ್ ಆದೇಶವು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗೆ ಅವಕಾಶವಿದೆ ಎಂದು ಹೇಳುತ್ತದೆ, ಅಂದರೆ ನಾವು ಅಲ್ಲಿ ‘ವುಜು’ ಮಾಡಬಹುದು. ಅದೊಂದು ಕಾರಂಜಿ. ಇದೇ ರೀತಿ ನಡೆದರೆ ತಾಜ್‌ಮಹಲ್‌ನ ಎಲ್ಲಾ ಕಾರಂಜಿಗಳನ್ನು ಮುಚ್ಚಬೇಕಾಗುತ್ತದೆ. 1990ರ ದಶಕದಲ್ಲಿ ಗಲಭೆಗಳು ನಡೆಯುತ್ತಿದ್ದ ಕಾಲಕ್ಕೆ ದೇಶವನ್ನು ಕೊಂಡೊಯ್ಯಲು ಬಿಜೆಪಿ ಬಯಸುತ್ತಿದೆ ಎಂದು ಓವೈಸಿ ಹೇಳಿದ್ದಾರೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಹೊರಡಿಸಿದ ಆದೇಶದಲ್ಲಿ ‘ಶಿವಲಿಂಗ’ ಕಂಡುಬಂದ ನಂತರ ಕೊಳವನ್ನು ಮುಚ್ಚಲು ಹೇಳಿದ್ದು ಇದು ‘ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ರ ಉಲ್ಲಂಘನೆಯಾಗಿದೆ’ ಎಂದು ಓವೈಸಿ ಈ ಹಿಂದೆ ಹೇಳಿದ್ದರು.

ಕೇವಲ ಅರ್ಜಿದಾರರ ಹಕ್ಕನ್ನು ಆಧರಿಸಿ ಆದೇಶವನ್ನು ಹೊರಡಿಸಿದ್ದಕ್ಕಾಗಿ ಕೆಳ ನ್ಯಾಯಾಲಯವನ್ನು ಪ್ರಶ್ನಿಸಿದ ಓವೈಸಿ ನ್ಯಾಯಾಲಯ ನೇಮಿಸಿದ ಕಮಿಷನರ್ ಇನ್ನೂ ಸಮೀಕ್ಷೆಯ ವರದಿಯನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ವಾರಣಾಸಿ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ ‘ಶಿವಲಿಂಗ’ ಪತ್ತೆಯಾದ ನಂತರ ‘ಪ್ರದೇಶವನ್ನು (ಕೊಳ) ಮುಚ್ಚಲು ಮತ್ತು ಯಾವುದೇ ವ್ಯಕ್ತಿಯ ಪ್ರವೇಶವನ್ನು ನಿಷೇಧಿಸುವಂತೆ’ ಆದೇಶಿಸಿತ್ತು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ; ಭ್ರಷ್ಟ ಸರ್ಕಾರಿ‌ ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ, ಸೇರ್ಪಡೆಯಾಯ್ತು ಮತ್ತೊಂದು ಐಪಿಸಿ ಸೆಕ್ಷನ್! ಏನದು?

ಮಂಗಳವಾರ ಸುಪ್ರೀಂಕೋರ್ಟ್ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದೊಳಗಿನ ಪ್ರದೇಶದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತು ಮತ್ತು ‘ಸಂಕೀರ್ಣದಲ್ಲಿ ಮುಸ್ಲಿಮರು ನಮಾಜ್ ಮಾಡಲು ಯಾವುದೇ ನಿರ್ಬಂಧಗಳಿಲ್ಲ’ ಎಂದು ಹೇಳಿದರು. ಪ್ರಕರಣದ ವಿಚಾರಣೆ ಗುರುವಾರ ನಡೆಯಲಿದೆ. ಸಿವಿಲ್ ಕೋರ್ಟ್ ಮೇ 17 ರೊಳಗೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಆಯುಕ್ತರನ್ನು ನೇಮಿಸಿತ್ತು. ನಂತರ ಅದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮಸೀದಿ ಸಮಿತಿಯು ಏಪ್ರಿಲ್ 21 ರಂದು ಮೇಲ್ಮನವಿಯನ್ನು ವಜಾಗೊಳಿಸಿತು. ಬಿಗಿ ಭದ್ರತೆಯ ನಡುವೆ ಸೋಮವಾರ ಮೂರು ದಿನಗಳ ಸಮೀಕ್ಷೆಯನ್ನು ಮುಕ್ತಾಯಗೊಳಿಸಲಾಯಿತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada