ಅಮರಕಂಟಕ್ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯಡಿ ಸಿಲುಕಿದ ಭಕ್ತ, ರಕ್ಷಣೆಯ ವಿಡಿಯೋ ವೈರಲ್

ಅಮರಕಂಟಕ್ ನರ್ಮದಾ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯ ಕೆಳಗೆ ಹೋಗುವ ಆಚರಣೆ ವೇಳೆ ಭಕ್ತರೊಬ್ಬರು ಸಿಲುಕಿಕೊಂಡ ಘಟನೆ ವೈರಲ್ ಆಗಿದೆ. ಇಷ್ಟಾರ್ಥ ಸಿದ್ಧಿಗಾಗಿ ಅಥವಾ ಪಾಪ ವಿಮೋಚನೆಗಾಗಿ ಈ ಕಿರಿದಾದ ಜಾಗ ದಾಟಲು ಯತ್ನಿಸಿದ ಭಕ್ತನನ್ನು ಇತರರು ಸೇರಿ ಸುರಕ್ಷಿತವಾಗಿ ಹೊರತಂದರು. ಸ್ಥಳೀಯ ನಂಬಿಕೆಗಳ ಸುತ್ತಲಿನ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಮರಕಂಟಕ್ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯಡಿ ಸಿಲುಕಿದ ಭಕ್ತ, ರಕ್ಷಣೆಯ ವಿಡಿಯೋ ವೈರಲ್
ಭಕ್ತ

Updated on: Nov 23, 2026 | 3:22 PM

ಅಮರಕಂಟಕ್, ನವೆಂಬರ್ 23: ಮಧ್ಯಪ್ರದೇಶದ ಅಮರಕಂಟಕ್‌ನ ನರ್ಮದಾ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಯೊಂದರಲ್ಲಿ ಭಾಗವಹಿಸಿದ್ದ ಭಕ್ತರೊಬ್ಬರು ಆನೆಯ ಕಲ್ಲಿನ ಪ್ರತಿಮೆಯ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ಸಿಲುಕಿಕೊಂಡಿದ್ದರು.ಅವರನ್ನು ಹೊರಗೆ ತರಲು ಇತರ ಭಕ್ತರು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಎಲ್ಲರೂ ಸೇರಿ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಸ್ಥಳೀಯ ನಂಬಿಕೆಯ ಪ್ರಕಾರ, ದೇವಸ್ಥಾನದ ಆವರಣದಲ್ಲಿರುವ ಆನೆಯ ಪ್ರತಿಮೆಯ ಕಾಲುಗಳ ನಡುವಿನ ಜಾಗವನ್ನು ದಾಟಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಕೆಲವರು ಇದನ್ನು ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಪರೀಕ್ಷೆ ಎಂದೂ ಭಾವಿಸುತ್ತಾರೆ. ಇದೇ ನಂಬಿಕೆಯಂತೆ ವ್ಯಕ್ತಿಯೊಬ್ಬರು ಆನೆಯ ಪ್ರತಿಮೆಯ ಕೆಳಗಿರುವ ಕಿರಿದಾದ ಜಾಗದ ಮೂಲಕ ತೆವಳುತ್ತಾ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಮಧ್ಯದಲ್ಲೇ ಸಿಲುಕಿಕೊಂಡು ಹೊರಬರಲು ಸಾಧ್ಯವಾಗದೆ ಪರದಾಡಿದ್ದಾರೆ.

Loading...

ಅಚರನ್ನು ಹೊರತೆಗೆಯಲು ಕೆಲವರು ಹಿಂದಿನಿಂದ ತಳ್ಳಿದರೆ, ಇನ್ನು ಕೆಲವರು ಮುಂದೆ ಎಳೆದು ಸಹಾಯ ಮಾಡಿದ್ದಾರೆ. ಸಾಕಷ್ಟು ಪ್ರಯತ್ನದ ಬಳಿಕ ಭಕ್ತನನ್ನು ಹೊರಗೆ ತರಲಾಗಿದೆ. ಈ ವೇಳೆ ದೇವಸ್ಥಾನದಲ್ಲಿದ್ದವರು ಆತಂಕಗೊಂಡಿದ್ದರು. ವ್ಯಕ್ತಿ ಸುರಕ್ಷಿತವಾಗಿ ಹೊರಬಂದ ಬಳಿಕ ಇತರ ಭಕ್ತರೂ ಇದೇ ಆಚರಣೆಯಲ್ಲಿ ಭಾಗವಹಿಸಿರುವುದಾಗಿ ವರದಿಯಾಗಿದೆ.

ಆನೆಯ ಪ್ರತಿಮೆಯ ಕೆಳಗೆ ಹಾದುಹೋಗುವ ಆಚರಣೆ ಏಕೆ?
ಅಮರಕಂಟಕ್‌ನ ನರ್ಮದಾ ದೇವಸ್ಥಾನದಲ್ಲಿ ಆನೆಯ ಪ್ರತಿಮೆಯ ಕೆಳಗಿನಿಂದ ಹಾದುಹೋಗುವ ಸ್ಥಳೀಯ ಆಚರಣೆಯಿದೆ. ಈ ಜಾಗವನ್ನು ದಾಟಿದರೆ ಪಾಪಗಳಿಂದ ಮುಕ್ತಿ ಸಿಗುತ್ತದೆ ಅಥವಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಕೆಲವು ಭಕ್ತರಲ್ಲಿದೆ. ಆದರೆ ಇದು ಧಾರ್ಮಿಕ ನಂಬಿಕೆಯೇ ಹೊರತು, ವೈಜ್ಞಾನಿಕವಾಗಿ ಸಾಬೀತಾದ ಸಂಗತಿಯಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us