Amarnath Yatra: ಇಂದಿನಿಂದ ಅಮರನಾಥ ಯಾತ್ರೆ ಪುನರಾರಂಭ; ಕಳೆದ ವರ್ಷದ ಪ್ರವಾಹದ ಸ್ಥಳದಲ್ಲೇ ಮತ್ತೆ ಕ್ಯಾಂಪ್
ಕಳೆದ ವರ್ಷ ಯಾವ ಸ್ಥಳದಲ್ಲಿ ಪ್ರವಾಹ ಉಂಟಾಗಿತ್ತೋ ಅದೇ ಸ್ಥಳದಲ್ಲಿ ಈ ವರ್ಷ ಯಾತ್ರಿಕರಿಗೆ ಟೆಂಟ್ ನಿರ್ಮಿಸಲಾಗಿತ್ತು. ಈ ಜಾಗವನ್ನು ಡ್ರೈ ರಿವರ್ ಬೆಡ್ ಎಂದು ಕರೆಯಲಾಗುತ್ತದೆ.
ಅಮರನಾಥ: ಭಾರೀ ಪ್ರವಾಹದಿಂದ ಅಮರನಾಥ ಯಾತ್ರೆಯನ್ನು (Amarnath Yatra) ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ಜುಲೈನಲ್ಲಿ ಅಮರನಾಥ ಗುಹೆಯ ಬಳಿ ಹಠಾತ್ ಪ್ರವಾಹ ಉಂಟಾಗಿತ್ತು. ಮೇಘಸ್ಫೋಟದಿಂದ ಶುಕ್ರವಾರ ಭಾರೀ ಪ್ರವಾಹ (Amarnath Floods) ಉಂಟಾಗಿತ್ತು. ಈ ದುರಂತದಲ್ಲಿ 16 ಜನರು ಸಾವನ್ನಪ್ಪಿದ್ದರು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆ ವೇಳೆ ನಾಪತ್ತೆಯಾದ ಅನೇಕರು ಇನ್ನೂ ಪತ್ತೆಯಾಗಿಲ್ಲ. ಆದರೆ, ಇಂದಿನಿಂದ ಅಮರನಾಥ ಯಾತ್ರೆ ಪುನರ್ ಆರಂಭವಾಗಲಿದೆ.
ಕಳೆದ ವರ್ಷದ ಜುಲೈ 28ರ ಪ್ರವಾಹದಲ್ಲಿ ಯಾವುದೇ ಪ್ರಾಣಹಾನಿ ದಾಖಲಾಗಿರಲಿಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ಯಾವುದೇ ಯಾತ್ರೆಗೆ ಅವಕಾಶ ಇರಲಿಲ್ಲ. ಆದರೆ, ಕಳೆದ ವರ್ಷ ಯಾವ ಸ್ಥಳದಲ್ಲಿ ಪ್ರವಾಹ ಉಂಟಾಗಿತ್ತೋ ಅದೇ ಸ್ಥಳದಲ್ಲಿ ಈ ವರ್ಷ ಯಾತ್ರಿಕರಿಗೆ ಟೆಂಟ್ ನಿರ್ಮಿಸಲಾಗಿತ್ತು. ಈ ಜಾಗವನ್ನು ಡ್ರೈ ರಿವರ್ ಬೆಡ್ ಎಂದು ಕರೆಯಲಾಗುತ್ತದೆ. ಇದರಿಂದ ಮತ್ತಷ್ಟು ಆಪತ್ತು ಎದುರಾಗಿದೆ.
ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು ಬೆಳಿಗ್ಗೆ ನುನ್ವಾನ್-ಪಹಲ್ಗಾಮ್ ಕಡೆಯಿಂದ ಪುನರಾರಂಭಗೊಂಡಿದೆ ಎಂದು ಶ್ರೀ ಅಮರನಾಥ ಜಿ ಪುಣ್ಯಕ್ಷೇತ್ರ ಮಂಡಳಿ ತಿಳಿಸಿದೆ. ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಜಮ್ಮು ಬೇಸ್ ಕ್ಯಾಂಪ್ನಿಂದ ಪ್ರಯಾಣ ಪ್ರಾರಂಭಿಸಿದೆ. “ಬಾಬಾನ ದರ್ಶನವಿಲ್ಲದೆ ನಾವು ಹಿಂತಿರುಗುವುದಿಲ್ಲ. ಅಮರನಾಥ ಯಾತ್ರೆ ಪುನರಾರಂಭಗೊಂಡಿರುವುದರಿಂದ ನಮಗೆ ಸಂತೋಷವಾಗಿದೆ. ಸಿಆರ್‌ಪಿಎಫ್ ಮತ್ತು ಇತರ ಸಿಬ್ಬಂದಿ ಸುರಕ್ಷಿತವಾಗಿ ನಾವು ಸಾಗಲು ನಮಗೆ ಮಾರ್ಗದರ್ಶನ ನೀಡಿದ್ದಾರೆ” ಎಂದು ಯಾತ್ರಿಕರು ಹೇಳಿದ್ದಾರೆ.
ಇದನ್ನೂ ಓದಿ: Amarnath Yatra: ಮೇಘಸ್ಫೋಟದ ನಂತರ ಯಾತ್ರೆಯ ಪುನರಾರಂಭಕ್ಕೆ ಕಾಯುತ್ತಿರುವ ಅಮರನಾಥ ಯಾತ್ರಿಕರು
ಅಮರನಾಥ ಗುಹೆಯ ದೇಗುಲದ ಬಳಿ ಶುಕ್ರವಾರ ಸಂಭವಿಸಿದ ಮೇಘಸ್ಫೋಟದ ಪ್ರವಾಹದಿಂದಾಗಿ 16 ಜನರು ಸಾವನ್ನಪ್ಪಿದ್ದಾರೆ. ಸುಮಾರು ಮೂರು ಡಜನ್ ಜನರು ಕಾಣೆಯಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ಬದುಕುಳಿದವರನ್ನು ಪತ್ತೆಹಚ್ಚಲು ಭಾರತೀಯ ಸೇನೆಯು ಭಾನುವಾರ ರಾಡಾರ್‌ಗಳನ್ನು ಅಳವಡಿಸಿದೆ.
J-K: Amarnath Yatra to resume today from Nunwan Pahalgam side
Read @ANI story | https://t.co/LFDLSp5wfA#AmarnathYatra #AmarnathYatraResumed #AmarnathCaveCloudBurst pic.twitter.com/eqCDLf2kJv
— ANI Digital (@ani_digital) July 10, 2022
ಭಾನುವಾರ, ಲೆಫ್ಟಿನೆಂಟ್ ಗವರ್ನರ್ ಪಹಲ್ಗಾಮ್‌ನಲ್ಲಿರುವ ಬೇಸ್ ಕ್ಯಾಂಪ್‌ಗೆ ತೆರಳಿ, ಯಾತ್ರಾರ್ಥಿಗಳನ್ನು ಭೇಟಿ ಮಾಡಿದರು. ರಕ್ಷಣಾ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಸಮರ್ಥ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇವೆ. ಮಾರ್ಗ ದುರಸ್ತಿ ಜತೆಗೆ ಯಾತ್ರೆ ಪುನರಾರಂಭಿಸುವ ಪ್ರಯತ್ನ ನಡೆಯುತ್ತಿದೆ. ಯಾತ್ರಾರ್ಥಿಗಳು ಬರಬೇಕು, ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.
ಸಿಆರ್‌ಪಿಎಫ್‌ನ ಡಿಜಿ ಕುಲದೀಪ್ ಸಿಂಗ್, “ತೀವ್ರವಾಗಿ ಗಾಯಗೊಂಡವರನ್ನು ಶ್ರೀನಗರಕ್ಕೆ ವಿಮಾನದ ಮೂಲಕ ರವಾನಿಸಲಾಗಿದೆ. ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ 41 ಮಂದಿ ನಾಪತ್ತೆಯಾಗಿದ್ದಾರೆ. ಅದರಲ್ಲಿ ಕೆಲವರನ್ನು ರಕ್ಷಿಸಲಾಗಿದೆ” ಎಂದಿದ್ದಾರೆ.
ಶನಿವಾರದಂದು ಅಮರನಾಥ ದೇಗುಲದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಭಾರತೀಯ ವಾಯುಪಡೆಯ ನಾಲ್ಕು Mi-17V5 ಮತ್ತು ನಾಲ್ಕು ಚೀಟಲ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Amarnath Cloudburst: ಅಮರನಾಥ ಮೇಘಸ್ಫೋಟದಲ್ಲಿ 16 ಜನ ಸಾವು; ಜಮ್ಮು ಕಾಶ್ಮೀರ ಆಡಳಿತದಿಂದ ಸಹಾಯವಾಣಿ ಆರಂಭ
ಕೊರೋನಾ ಕಾರಣದಿಂದ ಕಳೆದ 2 ವರ್ಷ ಅಮರನಾಥ ಯಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಿದೆ. ಎರಡು ದಾರಿಗಳ ಮೂಲಕ ಅಮರನಾಥ ಯಾತ್ರೆ ನಡೆಯಲಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ನುವಾನ್‌ನಿದ 48 ಕಿಲೋಮೀಟರ್ ದೂರದ ಯಾತ್ರೆ ಹಾಗೂ ಕೇಂದ್ರ ಕಾಶ್ಮೀರದ ಗುಂದೆರ್ಬಾಲ್‌ನಿಂದ 14 ಕಿಲೋಮೀಟರ್ ದೂರದ ಯಾತ್ರೆ ಮತ್ತೊಂದು ದಾರಿಯಾಗಿದೆ. ಸಾಧುಗಳು ಸೇರಿದ ಮೊದಲ ತಂಡ ಕಾಶ್ಮೀರದ ಭಗವತಿ ನಗರ ಹಾಗೂ ಜಮ್ಮು ರಾಮಮಂದಿರದಿಂದ ತೆರಳಲಿದೆ. ಅಮರನಾಥ ಯಾತ್ರೆಗೆ 13 ವರ್ಷಕ್ಕಿಂತ ಕೆಳಗಿನವರು, 75 ವರ್ಷಕ್ಕಿಂತ ಮೇಲಿನವರು ಹಾಗೂ 6 ವಾರಕ್ಕಿಂತ ಹೆಚ್ಚಿನ ಗರ್ಭಿಣಿಯರಿಗೆ ನಿರ್ಬಂಧ ಹೇರಲಾಗಿದೆ. ಅಮರನಾಥನ ಗುಹೆಗೆ ಭೇಟಿ ನೀಡುವ ಯಾತ್ರಿಕರ ಕೊನೆಯ ಹೆಲಿಕಾಪ್ಟರ್ ನಿಲ್ದಾಣವಾದ ಪಂಚಕರ್ಣಿಗೆ ಶ್ರೀನಗರದಿಂದ ಹೊಸ ಹೆಲಿಕಾಪ್ಟರ್ ಸೇವೆ ಒದಗಿಸುತ್ತಿದೆ. ಆಗಸ್ಟ್ 11ರಂದು ರಕ್ಷಾ ಬಂಧನದಂದು ಅಮರನಾಥ ಯಾತ್ರೆ ಮುಕ್ತಾಯಗೊಳ್ಳಲಿದೆ.
Published On - 11:08 am, Mon, 11 July 22