Amit Shah: ಗಡಿ ನಿರ್ಣಯ, ಚುನಾವಣೆ ಬಳಿಕ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ವಾಪಾಸ್; ಅಮಿತ್ ಶಾ ಭರವಸೆ

ಮುಂದಿನ ವರ್ಷದ ವೇಳೆಗೆ ಜಮ್ಮು ಕಾಶ್ಮೀರದ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಗಡಿಗಳನ್ನು ಪುನಃ ರಚಿಸುವ ಸಾಧ್ಯತೆಯಿದೆ. ಇದಾದ ಬಳಿಕ ಚುನಾವಣೆ ನಡೆದು, ಜಮ್ಮು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನನ್ನು ಪುನರ್ ಸ್ಥಾಪಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.

Amit Shah: ಗಡಿ ನಿರ್ಣಯ, ಚುನಾವಣೆ ಬಳಿಕ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ವಾಪಾಸ್; ಅಮಿತ್ ಶಾ ಭರವಸೆ
ಶ್ರೀನಗರದಲ್ಲಿ ಮಾತನಾಡಿದ ಅಮಿತ್ ಶಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಗಡಿ ನಿರ್ಧಾರವಾಗಲಿದ್ದು, ಚುನಾವಣೆ ಮುಗಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸಲಾಗುತ್ತದೆ. ನಾನು ಕಾಶ್ಮೀರಿ ಯುವಕರೊಂದಿಗೆ ಸ್ನೇಹದಿಂದ ಇರಲು ಬಯಸುತ್ತೇನೆ. ಗಡಿ ನಿರ್ಧಾರದ ಪ್ರಕ್ರಿಯೆ ಮುಗಿದು ಚುನಾವಣೆ ಆದ ಬಳಿಕ ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವವನ್ನು ವಾಪಾಸ್ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

3 ದಿನಗಳ ಕಾಲ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರದಲ್ಲಿ ಇಂದು ಶ್ರೀನಗರ- ಶಾರ್ಜಾ ನೇರ ವಿಮಾನಸೇವೆಯನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ಅಡಿಯ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಲಾಗಿತ್ತು. ಆ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ತೆರೆಬಿದ್ದಿತು. ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಜಮ್ಮು ಕಾಶ್ಮೀರದ ಯುವಕರು ಕೈಜೋಡಿಸಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

ಮುಂದಿನ ವರ್ಷದ ವೇಳೆಗೆ ಜಮ್ಮು ಕಾಶ್ಮೀರದ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಗಡಿಗಳನ್ನು ಪುನಃ ರಚಿಸುವ ಸಾಧ್ಯತೆಯಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಜನಸಂಖ್ಯಾ ಬದಲಾವಣೆಗಳನ್ನು ಪ್ರತಿಬಿಂಬಿಸಲು ಇದನ್ನು ಮಾಡಲಾಗುತ್ತದೆ. ಇದಾದ ಬಳಿಕ ಚುನಾವಣೆ ನಡೆದು, ಜಮ್ಮು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನನ್ನು ಪುನರ್ ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಭಯೋತ್ಪಾದನೆ ಕಡಿಮೆಯಾಗಿದೆ, ಕಲ್ಲು ತೂರಾಟ ಕಾಣುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಹಾಳು ಮಾಡಲು ಬಯಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಇಲ್ಲಿನ ಅಭಿವೃದ್ಧಿಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ. ನಾನು ಸುಮಾರು ಎರಡೂವರೆ ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದೇನೆ. ಇದು ನನಗೆ ತುಂಬಾ ಸಂತೋಷದ ಕ್ಷಣ ಎಂದು ಅಮಿತ್ ಶಾ ಹೇಳಿದ್ದಾರೆ.

ನಾನು ಬರುವಾಗ ಜಮ್ಮು ಕಾಶ್ಮೀರದಲ್ಲಿ ವಿಧಿಸಲಾಗಿರುವ ಕರ್ಫ್ಯೂ, ಅಂತರ್ಜಾಲ ಸ್ಥಗಿತಕ್ಕೆ ಜನರು ಕಾರಣಗಳನ್ನು ಕೇಳುತ್ತಿದ್ದಾರೆ. ಕರ್ಫ್ಯೂ ಇಲ್ಲದಿದ್ದರೆ ಎಷ್ಟು ಜೀವಗಳು ಕಳೆದು ಹೋಗುತ್ತಿದ್ದವು ಎಂದು ನನಗೆ ಗೊತ್ತಿಲ್ಲ. ಕರ್ಫ್ಯೂ ಮತ್ತು ಇಂಟರ್ನೆಟ್ ಸ್ಥಗಿತದಿಂದಾಗಿ ಕಾಶ್ಮೀರಿ ಯುವಕರು ಉಳಿದುಕೊಂಡಿದ್ದಾರೆ. ಉಳಿಸಲಾಗಿದೆ” ಎಂದು ಅಮಿತ್ ಶಾ ಹೇಳಿದರು.

ಈ ಮೊದಲು ಜಮ್ಮು ಕಾಶ್ಮೀರದ ಯುವಕರು ತಾವು ಕೂಡ ಮುಖ್ಯಮಂತ್ರಿಯಾಗಬಹುದು ಎಂಬುದನ್ನು ಊಹೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕೇವಲ 3 ಕುಟುಂಬಗಳು 70 ವರ್ಷಗಳ ಕಾಲ ಆಳ್ವಿಕೆ ಮಾಡಿದರು. ಆದರೂ ಯಾಕೆ 40,000 ಜನರು ಸಾವನ್ನಪ್ಪಿದರು? ಪ್ರಧಾನಿ ನರೇಂದ್ರ ಮೋದಿ ಈ ದೇಶದಲ್ಲಿ ಜನಸಾಮಾನ್ಯ ಕೂಡ ಶಾಸಕ, ಸಂಸದ, ಸಿಎಂ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿ: Amit Shah: ಶ್ರೀನಗರ- ಶಾರ್ಜಾ ನೇರ ವಿಮಾನ ಸೇವೆಗೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ

ಗೃಹ ಸಚಿವ ಅಮಿತ್ ಶಾ ಇಂದಿನಿಂದ ಜಮ್ಮು-ಕಾಶ್ಮೀರ ಪ್ರವಾಸ; 2 ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ

Click on your DTH Provider to Add TV9 Kannada