
ನವದೆಹಲಿ, ಮೇ 13: ಪ್ರಮುಖ ಡೈರಿ ಬ್ರಾಂಡ್ ಅಮುಲ್ (Amul) ತನ್ನ ಹಲವಾರು ಹಾಲಿನ ಉತ್ಪನ್ನಗಳಲ್ಲಿ ಪ್ರತಿ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಳವನ್ನು ಘೋಷಿಸಿದೆ. ಪರಿಷ್ಕೃತ ಬೆಲೆಗಳು ಮೇ 14ರಿಂದ (ನಾಳೆಯಿಂದ) ಜಾರಿಗೆ ಬರಲಿದೆ. ಮೇ 14ರಿಂದ ದೇಶಾದ್ಯಂತ ಅಮುಲ್ ಹಾಲು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಲಿದೆ. ದಿನನಿತ್ಯ ಬಳಸುವ ಹಾಲಿನ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಜನಸಾಮಾನ್ಯರ ಮೇಲೆ ಮತ್ತೆ ಹೊರೆಬೀಳುವುದು ಖಂಡಿತ.
ಮೇ 14ರಿಂದಲೇ ಲೀಟರ್‌ಗೆ 2 ರೂ. ಹೆಚ್ಚಳದ ನಿಯಮ ಜಾರಿಗೆ ಬಂದಿದೆ. ಇದರರ್ಥ ಮೇ 14ರಿಂದ ಗ್ರಾಹಕರು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳಲ್ಲಿ ಅಮುಲ್ ಹಾಲನ್ನು ಖರೀದಿಸಲು ಹೊಸ ದರಗಳ ಪ್ರಕಾರ ಪಾವತಿಸಬೇಕಾಗುತ್ತದೆ. ಹಸುಗಳ ಮೇವು ಮತ್ತು ಪ್ಯಾಕೇಜಿಂಗ್‌ನ ಹೆಚ್ಚುತ್ತಿರುವ ವೆಚ್ಚವು ಈ ಬೆಲೆ ಏರಿಕೆಗೆ ಕಾರಣವಾಗಿದೆ.
Gujarat Cooperative Milk Marketing Federation, which owns Anand Milk Union Limited (AMUL), has hiked the prices of various milk products, including 1 litre Amul Taaza by Rs 2 and 500 ml Amul Gold by Rs 1.
The new prices will be effective from May 15. pic.twitter.com/3Cn1XrllVM
— ANI (@ANI) May 13, 2026
ಇದನ್ನೂ ಓದಿ: ಸೆ. 22ರಿಂದ ಬೆಣ್ಣೆ, ಐಸ್ ಕ್ರೀಮ್, ತುಪ್ಪ ಸೇರಿ 700ಕ್ಕೂ ಹೆಚ್ಚು ಅಮುಲ್ ಉತ್ಪನ್ನಗಳ ಬೆಲೆ ಕಡಿತ
ಅಮುಲ್ ಕಂಪನಿಯ ಪ್ರಕಾರ, ಬೆಲೆ ಹೆಚ್ಚಳವು ಅಮುಲ್‌ನ ಅತ್ಯಂತ ಹೆಚ್ಚು ಸೇವಿಸುವ ಕೆಲವು ಹಾಲಿನ ಉತ್ಪನ್ನಗಳನ್ನು ಒಳಗೊಳ್ಳುತ್ತದೆ, ಅವುಗಳೆಂದರೆ, ಅಮುಲ್ ಗೋಲ್ಡ್, ಅಮುಲ್ ತಾಜಾ, ಅಮುಲ್ ಹಸು ಹಾಲು, ಅಮುಲ್ ಎಮ್ಮೆ ಹಾಲು, ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್, ಅಮುಲ್ ಸ್ಟ್ಯಾಂಡರ್ಡ್ ಮಿಲ್ಕ್, ಅಮುಲ್ ಟಿ-ಸ್ಪೆಷಲ್.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ