AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ.

ಕಂಠಪೂರ್ತಿ ಕುಡಿದು, ಕಣ್ತುಂಬ ನಿದ್ದೆ ಮಾಡಿದ ರೈಲ್ವೆ ಸ್ಟೇಶನ್​ ಸಹಾಯಕ ಮಾಸ್ಟರ್​ಗೆ ನೀರು ಬಿದ್ದಾಗಲೇ ಎಚ್ಚರವಾಯ್ತು; ಗ್ರಹಚಾರ ಕಾದುಕುಳಿತಿತ್ತು..!
ರೈಲ್ವೆ ಸ್ಟೇಶನ್​ ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 17, 2021 | 3:45 PM

Share

ರೈಲು ಹೊರಡಲು ಎರಡು ತಾಸು ತಡ ಮಾಡಿದ ರೈಲ್ವೆ ಸ್ಟೇಶನ್​​ನ ಸಹಾಯಕ ಮಾಸ್ಟರ್​​​ನ್ನು ಅಮಾನತು ಮಾಡಲಾಗಿದೆ. ಉತ್ತರಪ್ರದೇಶದ ಕಂಚೌಸಿ ರೈಲ್ವೆಸ್ಟೇಶನ್​ನಲ್ಲಿ ಘಟನೆ ನಡೆದಿದ್ದು, ಈ ಸಹಾಯಕ ಸ್ಟೇಶನ್​ ಮಾಸ್ಟರ್​ ಕಂಠಪೂರ್ತಿ ಕುಡಿದು, ಗಡದ್ದಾಗಿ ನಿದ್ದೆಹೋದ ಕಾರಣಕ್ಕೆ ಕೆಲವು ರೈಲುಗಳು, ನಿಗದಿತ ಸಮಯಕ್ಕಿಂತಲೂ ಎರಡು ಗಂಟೆ ತಡವಾಗಿ ಹೊರಟಿವೆ. ಕರ್ತವ್ಯದಲ್ಲಿದ್ದಾಗಲೇ ನಿದ್ದೆ ಮಾಡಿ, ರೈಲ್ವೆ ಸಂಚಾರದಲ್ಲಿ ಅಡಚಣೆ ಉಂಟು ಮಾಡಿದ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿದೆ.

ಔರಾಯಿಯಾ ಜಿಲ್ಲೆಯ ಕಂಚೌಸಿ ರೈಲ್ವೆ ಸ್ಟೇಶನ್​ನ ಈ ಸ್ಟೇಶನ್ ಮಾಸ್ಟರ್​ ಹೆಸರು ಅನಿರುದ್​ ಕುಮಾರ್​. ಗುರುವಾರ ಮಧ್ಯರಾತ್ರಿ 12ಗಂಟೆಯಿಂದ ಬೆಳಗ್ಗೆ 8ಗಂಟೆವರೆಗೆ ಅವರ ಶಿಫ್ಟ್ ಇತ್ತು. ಬಂದವರೇ ಕಂಠಪೂರ್ತಿ ಕುಡಿದು ಮಲಗಿಬಿಟ್ಟಿದ್ದರು. ಸ್ಟೇಶನ್​ಗೆ ಬರುವ ರೈಲುಗಳು ಮುಂದೆ ಹೋಗಬೇಕು ಎಂದರೆ ತಾವೇ, ಗ್ರೀನ್​ ಸಿಗ್ನಲ್​ ಕೊಡಬೇಕು ಎಂಬುದನ್ನು ಮರೆತೇ ಬಿಟ್ಟಿದ್ದ ಅವರು ನಿದ್ದೆ ಮಾಡಿದ್ದೇಬಂತು. ಸ್ಟೇಶನ್​ ಮಾಸ್ಟರ್​ ಹಸಿರು ಬಾವುಟ ಹಾರಿಸದೆ ಯಾವುದೇ ರೈಲು ಮುಂದೆ ಹೋಗುವುದಿಲ್ಲ. ಹಾಗೇ ಇಲ್ಲಿನ ರೈಲುಗಳ ಚಾಲಕರೂ ಬರೋಬ್ಬರಿ ಎರಡು ತಾಸು ಕಾದಿದ್ದಾರೆ. ಕೊನೆಗೂ ಅನಿರುದ್​ ಕುಮಾರ್​ಗೆ ಎಚ್ಚರವಾಗಲೇ ಇಲ್ಲ. ಅಷ್ಟರಲ್ಲಿ ರೈಲುಗಳು ವಿಳಂಬವಾಗಿದ್ದನ್ನು ಗಮನಿಸಿದ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆ ಕೂಡಲೇ ರೈಲ್ವೆ ಸ್ಟೇಶನ್​ಗೆ ಬಂದು, ಮಲಗಿದ್ದ ಅನಿರುದ್ಧ್​ ಕುಮಾರ್ ಮುಖದ ಮೇಲೆ ನೀರು ಸಿಂಪಡಿಸಿದ್ದಾರೆ. ಆಗಲೇ ಅನಿರುದ್ಧ್​ಗೆ ಎಚ್ಚರವಾಗಿದೆ.

ಈ ಸ್ಟೇಶನ್​ನಲ್ಲಿ ದೆಹಲಿ-ಹೌರಾಹ್​ ಮಾರ್ಗದ ವೈಶಾಲಿ ಎಕ್ಸ್​ಪ್ರೆಸ್​, ಸಂಗಮ್​ ಎಕ್ಸ್​ಪ್ರೆಸ್​, ಮಗಧ್​ ಎಕ್ಸ್​ಪ್ರೆಸ್​ ಹಾಗೂ ಹಲವು ಸರಕು ರೈಲುಗಳು ಸುಮಾರು ಎರಡು ತಾಸುಗಳಿಗೂ ಅಧಿಕ ಕಾಲ ಕಾದಿವೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗಿದೆ. ಬಳಿಕ ಹತ್ತಿರದ ಫಫುಂಡ್​ ರೈಲ್ವೆ ಸ್ಟೇಶನ್​ ಮತ್ತು ಜಿಂಝಾಕ್​ ರೈಲ್ವೆ ಸ್ಟೇಶನ್​​ ಮಾಸ್ಟರ್​ಗಳು ಈ ಕಂಚೌಸಿ ರೈಲ್ವೆ ಸ್ಟೇಶನ್​​ನ ಕಂಟ್ರೋಲ್​ ರೂಂಗೆ ಫೋನ್​ ಮಾಡಿ, ರೈಲುಗಳೇಕೆ ಬರುತ್ತಿಲ್ಲ ಎಂದು ಕೇಳಿದ ಬಳಿಕವಷ್ಟೇ ಅಧೀಕ್ಷಕನ ಗಮನಕ್ಕೆ ಇದು ಬಂದಿದೆ. ಅಲ್ಲಿಯವರೆಗೂ ಸ್ಟೇಶನ್​ ಅಧೀಕ್ಷಕ ವಿಶಂಭರ್​ ದಯಾಳ್​ ಪಾಂಡೆಗೂ ಈ ವಿಚಾರ ಗೊತ್ತಿರಲಿಲ್ಲ.

ನಂತರ ಅನಿರುದ್ಧ್​ರನ್ನು ಪ್ರಯಾಗ್​ರಾಜ್​ನ ಹಿರಿಯ ವಿಭಾಗೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ಎಸ್​.ಕೆ.ಶುಕ್ಲಾ ಅಮಾನತು ಮಾಡಿದ್ದಾರೆ. ಅದಕ್ಕೂ ಮೊದಲು ಅವರನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಪರೀಕ್ಷೆ ಕೂಡ ನಡೆಸಲಾಯಿತು. ಮದ್ಯ ಸೇವಿಸಿದ್ದು ಟೆಸ್ಟ್​​ನಲ್ಲಿ ದೃಢಪಟ್ಟ ತಕ್ಷಣ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: Ragging in Mangalore: ಮಂಗಳೂರಿನಲ್ಲಿ ಮತ್ತೆ ರ್ಯಾಗಿಂಗ್ ಪಿಡುಗು; ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳು ಅರೆಸ್ಟ್

An assistant station master was suspended after got drunk during duty hours and slept In Uttar Pradesh

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ