
ಪಾಟ್ನಾ: ದೇಶದ ಪ್ರತಿಷ್ಠಿತ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅರ್ಹರನ್ನು ಗುರುತಿಸಿ ಅವರನ್ನು ಗೌರವಿಸುವ ತಮ್ಮ ನಿಸ್ವಾರ್ಥ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಬಾರಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 3 ಕಿ.ಮೀ ಉದ್ದದ ಕಾಲುವೆ ನಿರ್ಮಿಸಿದ ರೈತನಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ.
ತನ್ನ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು 30 ವರ್ಷಗಳ ಅವಧಿಯಲ್ಲಿ 3 ಕಿ.ಮೀ ಉದ್ದದ ಕಾಲುವೆಯನ್ನು ಒಂಟಿಯಾಗಿ ತೋಡಿದ್ದ ರೈತನಿಗೆ ಆನಂದ್ ಮಹೀಂದ್ರಾ ಮಾನ್ಯತೆಯ ಬಹುಮಾನವನ್ನು ನೀಡಿದ್ದಾರೆ.
ಬಿಹಾರದ ಗಯಾ ಜಿಲ್ಲೆಯ ರೈತ ಲೌಂಗಿ ಭುಯಾನ್ ತನ್ನ ಕೃಷಿಭೂಮಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಳೆದ 30 ವರ್ಷಗಳಲ್ಲಿ 3 ಕಿ.ಮೀ ಉದ್ದದ ಕಾಲುವೆಯನ್ನು ಒಂಟಿಯಾಗಿ ತೋಡಿದ್ದಾನೆ. ಲೌಂಗಿ ಭುಯಾನ್ರ ಈ ಕಾರ್ಯವನ್ನು ಕಂಡ ಆನಂದ್ ಮಹೀಂದ್ರಾ ಇದೀಗ, ರೈತನಿಗೆ ಒಂದು ಮಹೀಂದ್ರಾ ಟ್ರ್ಯಾಕ್ಟರ್ನ ಉಡುಗೊರೆಯಾಗಿ ನೀಡಿದ್ದಾರೆ.
ಮಹೀಂದ್ರಾ ಸಂಸ್ಥೆಯ ಪ್ರಾದೇಶಿಕ ವ್ಯಾಪಾರಿ ಸಿದ್ಧಿನಾಥ್ ವಿಶ್ವಕರ್ಮ ಲಾಂಗಿ ಭುಯಾನ್ಗೆ ಕಳೆದ ಶನಿವಾರ ಮಹೀಂದ್ರಾ ಟ್ರ್ಯಾಕ್ಟರ್ನ ಹಸ್ತಾಂತರಿಸಿದ್ದಾರೆ.
Published On - 11:28 am, Sun, 20 September 20