ತಮಿಳುನಾಡು ಬಳಿಕ, ಆಂಧ್ರದಲ್ಲೂ ಆನ್​ಲೈನ್ ಗ್ಯಾಂಬ್ಲಿಂಗ್ ಬಂದ್​! ಕರ್ನಾಟಕದಲ್ಲಿ ಯಾವಾಗ?

ತಮಿಳುನಾಡು ಬಳಿಕ, ಆಂಧ್ರದಲ್ಲೂ ಆನ್​ಲೈನ್ ಗ್ಯಾಂಬ್ಲಿಂಗ್ ಬಂದ್​! ಕರ್ನಾಟಕದಲ್ಲಿ ಯಾವಾಗ?
ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ

ತಮಿಳುನಾಡು ಬಳಿಕ ಇದೀಗ ಆಂಧ್ರದಲ್ಲೂ ಆನ್​ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020 ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

TV9kannada Web Team

| Edited By: ganapathi bhat

Apr 07, 2022 | 5:44 PM

ತಮಿಳುನಾಡು ಸರ್ಕಾರದ ಬಳಿಕ ಇದೀಗ ಆಂಧ್ರ ಪ್ರದೇಶದಲ್ಲೂ ಆನ್​ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಯನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.

ಈ ಹಿಂದೆ ಆಂಧ್ರದಲ್ಲಿ, ಆನ್​ಲೈನ್ ಜೂಜಿನ ಸಾಲ ತೀರಿಸಲಾಗದೆ ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಗಳ ಬೆನ್ನಲ್ಲೇ ಸರ್ಕಾರ ಆನ್​ಲೈನ್ ಜೂಜಾಟಗಳಿಗೆ ನಿರ್ಬಂಧ ಹೇರುವ ಮನಮಾಡಿದೆ.

ಕರ್ನಾಟಕದಲ್ಲಿ ಯಾವಾಗ? ಆನ್​ಲೈನ್ ಜೂಜಾಟಗಳನ್ನು ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವು ಹೇಳಿಕೆ ನೀಡುತ್ತಲೇ ಬಂದಿದ್ದು, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೂಜಿನಲ್ಲಿ ಪಾಲ್ಗೊಳ್ಳುವ ಯುವಕರಿಂದ ಅವರ ಮನೆಯವರೂ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳುನಾಡು, ಆಂಧ್ರದ ಬಳಿಕ ಕರ್ನಾಟಕದಲ್ಲೂ ಆನ್​ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಮಸೂದೆ ರಚಿಸಬೇಕು ಎಂಬ ಕೂಗು ಜೋರಾಗುತ್ತಿದೆ.

ಇದನ್ನೂ ಓದಿ: ಆನ್​ಲೈನ್​ ಗ್ಯಾಂಬ್ಲಿಂಗ್​ ಚಟದಿಂದ ಹೊರಬರಲು ಇದು ಸಕಾಲ..

ಸರ್ಕಾರ ಪಾರದರ್ಶಿಕವಾಗಿ ವ್ಯವಹರಿಸಲಿದೆ ಮಸೂದೆಯ ಬಗ್ಗೆ ಮಾತನಾಡಿದ ಆಂಧ್ರ ಸಿಎಂ ವೈ.ಎಸ್. ಜಗನ್​ಮೋಹನ್ ರೆಡ್ಡಿ, ಆನ್​ಲೈನ್ ಜೂಜಿನಲ್ಲಿ ತೊಡಗಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರ ಸಾಮಾಜಿಕ ಸ್ಥಾನಮಾನಗಳನ್ನು ಬದಿಗಿರಿಸಿ ವ್ಯವಹರಿಸಲಾಗುವುದು. ಈ ವಿಚಾರದಲ್ಲಿ ಸರ್ಕಾರ ಪಾರದರ್ಶಿಕವಾಗಿ ವ್ಯವಹರಿಸಲಿದೆ ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಮಂತ್ರಿಯೊಬ್ಬರ ದೂರ ಸಂಬಂಧಿ ಆನ್​ಲೈನ್ ಜೂಜಿನಲ್ಲಿ ತೊಡಗಿಕೊಂಡಿದ್ದು ತಿಳಿದುಬಂದಿತ್ತು. ಅವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಆನ್​ಲೈನ್ ಆಟಗಳಿಂದಾಗಿ ವಂಚನೆ, ಕಳ್ಳತನ ಮುಂತಾದ ಅಪರಾಧ ಕೃತ್ಯಗಳೂ ಹೆಚ್ಚುತ್ತವೆ ಎಂದು ಆಂಧ್ರ ಗೃಹ ಸಚಿವೆ ಎಮ್. ಸುಚರಿತಾ ಅಭಿಪ್ರಾಯಪಟ್ಟಿದ್ದಾರೆ.

ಅಪರಾಧಿಗಳಿಗೆ ಏನು ಶಿಕ್ಷೆ ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ನಿಗಧಿಪಡಿಸಲಾಗಿದ್ದು, ಅಪರಾಧ ಮರುಕಳಿಸಿದರೆ ಅಂಥವರಿಗೆ 10 ಸಾವಿರ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಜಾಮೀನು ರಹಿತ ಶಿಕ್ಷೆ ಇದಾಗಿದೆ.

ಆನ್​ಲೈನ್​ ಗ್ಯಾಬ್ಲಿಂಗ್ ಜಾಹಿರಾತು: ನಟ ಸುದೀಪ್​ಗೆ ಮದ್ರಾಸ್ ಹೈಕೋರ್ಟ್​ನಿಂದ ನೋಟಿಸ್

ಇದನ್ನೂ ಓದಿ: OTT Platforms ‘ಮುಚ್ಚುಮರೆ ಇಲ್ಲದ’ ಆನ್​ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!

Follow us on

Most Read Stories

Click on your DTH Provider to Add TV9 Kannada