AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಹಾಗೂ ಸಹೋದರನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ

ವ್ಯಕ್ತಿಯೊಬ್ಬ ತಾಯಿ ಹಾಗೂ ಸಹೋದರನನ್ನು ಕೊಂದು ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಭೀಮಾವರಂನಲ್ಲಿ ನಡೆದಿದೆ. ಭೀಮಾವರಂ ಒನ್ ಟೌನ್ ಪೊಲೀಸ್ ವ್ಯಾಪ್ತಿಯ ಸುಂಕರ ಪದ್ದಯ್ಯ ಬೀದಿಯಲ್ಲಿ ಬೆಳಗಿನ ಜಾವ 1 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ. ಆರೋಪಿಯನ್ನು ಗುಣುಪುಡಿ ಶ್ರೀನಿವಾಸ್ (37) ಎಂದು ಗುರುತಿಸಲಾಗಿದ್ದು, ಆತನ ತಾಯಿ ಮಹಾಲಕ್ಷ್ಮಿ (60) ಮತ್ತು ಸಹೋದರ ರವಿತೇಜ (33) ಅವರ ಮೇಲೆ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ತಾಯಿ ಹಾಗೂ ಸಹೋದರನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ
ಕ್ರೈಂ
ನಯನಾ ರಾಜೀವ್
|

Updated on: Nov 10, 2025 | 2:22 PM

Share

ಭೀಮಾವರಂ, ನವೆಂಬರ್ 10: ವ್ಯಕ್ತಿಯೊಬ್ಬ ತಾಯಿ ಹಾಗೂ ಸಹೋದರನನ್ನು ಕೊಲೆ(Murder) ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಭೀಮಾವರಂನಲ್ಲಿ ನಡೆದಿದೆ. ಭೀಮಾವರಂ ಒನ್ ಟೌನ್ ಪೊಲೀಸ್ ವ್ಯಾಪ್ತಿಯ ಸುಂಕರ ಪದ್ದಯ್ಯ ಬೀದಿಯಲ್ಲಿ ಬೆಳಗಿನ ಜಾವ 1 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ. ಆರೋಪಿಯನ್ನು ಗುಣುಪುಡಿ ಶ್ರೀನಿವಾಸ್ (37) ಎಂದು ಗುರುತಿಸಲಾಗಿದ್ದು, ಆತನ ತಾಯಿ ಮಹಾಲಕ್ಷ್ಮಿ (60) ಮತ್ತು ಸಹೋದರ ರವಿತೇಜ (33) ಅವರ ಮೇಲೆ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ಬೆಳಗಿನ ಜಾವ 4.30 ರ ಸುಮಾರಿಗೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ, ಕೊಲೆಗಳನ್ನು ಒಪ್ಪಿಕೊಂಡು ಶರಣಾಗುವ ಬಗ್ಗೆ ಹೇಳಿದ್ದ. ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದರು. ಕೋವಿಡ್ -19 ಅವಧಿಯಲ್ಲಿ ಅವರ ತಂದೆ ನಿಧನರಾದಾಗಿನಿಂದ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಅವರು ವೈದ್ಯಕೀಯ ಮೌಲ್ಯಮಾಪನಕ್ಕೆ ಒಳಗಾಗುತ್ತಿದ್ದಾರೆ.

ಪಶ್ಚಿಮ ಗೋದಾವರಿ ಎಸ್‌ಪಿ ಅದ್ನಾನ್ ನಯೀಮ್ ಅಸ್ಮಿ, ಡಿಎಸ್‌ಪಿ ಜೈ ಸೂರ್ಯ ಮತ್ತು ಒನ್ ಟೌನ್ ಸಿಐ ನಾಗರಾಜು ಅವರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದರು. ಎಸ್‌ಪಿ ಸುಳಿವು ತಂಡ ಮತ್ತು ಶ್ವಾನ ದಳದೊಂದಿಗೆ ಮನೆಯನ್ನು ಪರಿಶೀಲಿಸಿದರು ಮತ್ತು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮತ್ತಷ್ಟ ಓದಿ: 40 ವರ್ಷದ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ, ಸಹಕರಿಸದಿದ್ದಾಗ ಕೊಲೆ

ಬೆಂಗಳೂರಿನಲ್ಲಿ ವಾಸಿಸುವ ಶ್ರೀನಿವಾಸ್ ಅವರ ಸಹೋದರಿ ಭೀಮಾವರಂಗೆ ತೆರಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗುವುದು ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ