40 ವರ್ಷದ ಮಹಿಳೆ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ, ಸಹಕರಿಸದಿದ್ದಾಗ ಕೊಲೆ
ಹದಿನಾಲ್ಕು ವರ್ಷದ ಬಾಲಕನೊಬ್ಬ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ, ಹಮೀರ್ಪುರದಲ್ಲಿ ನಡೆದಿದೆ. ಆಕೆ ಸಹಕರಿಸದಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನವೆಂಬರ್ 3 ರಂದು ಈ ಘಟನೆ ನಡೆದಿದೆ. ಹೊಲದಲ್ಲಿ ಹುಲ್ಲು ಕಡಿಯುತ್ತಿದ್ದಾಗ 9 ನೇ ತರಗತಿಯ ಬಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.

ಹಮೀರ್‌ಪುರ, ನವೆಂಬರ್ 08: ಹದಿನಾಲ್ಕು ವರ್ಷದ ಬಾಲಕನೊಬ್ಬ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ(Physical Abuse) ನಡೆಸಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ, ಹಮೀರ್ಪುರದಲ್ಲಿ ನಡೆದಿದೆ. ಆಕೆ ಸಹಕರಿಸದಿದ್ದಾಗ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನವೆಂಬರ್ 3 ರಂದು ಈ ಘಟನೆ ನಡೆದಿದೆ. ಹೊಲದಲ್ಲಿ ಹುಲ್ಲು ಕಡಿಯುತ್ತಿದ್ದಾಗ 9 ನೇ ತರಗತಿಯ ಬಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಆ ಬಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ ಆಕೆ ವಿರೋಧಿಸಿದ್ದಾಳೆ. ನಂತರ ಕತ್ತಿ ಮತ್ತು ಕೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಹೊಲದಲ್ಲಿ ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಗ್ರಾಮಸ್ಥರು ಕಂಡು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ನಂತರ ಆಕೆಯನ್ನು ಚಂಡೀಗಢದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಆಂಧ್ರದ ಶಾಲೆಯಲ್ಲಿ 22 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ; ಪ್ರಿನ್ಸಿಪಾಲ್ ಸೇರಿ ಮೂವರ ಬಂಧನ
ಅಪರಾಧ ಸ್ಥಳದಿಂದ ಪೊಲೀಸರು ಒಂದು ಕತ್ತಿ, ಕೋಲು, ಮುರಿದ ಮಾಪಕ ಮತ್ತು ಪೆನ್ನಿನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅಪ್ರಾಪ್ತ ಬಾಲಕ ತಾನೇ ದಾಳಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ತನ್ನ 17 ವರ್ಷದ ಅಂಗವಿಕಲ ಮಗನನ್ನು ಬೆಳೆಸುತ್ತಿದ್ದ ಆ ಮಹಿಳೆ, ಅವರ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದಳು.
ಅಪ್ರಾಪ್ತ ಆರೋಪಿ ಬಂಧನದಲ್ಲಿದ್ದಾನೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಮೀರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಉಪಾಧ್ಯಾಯ ದೃಢಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




