ಆರ್‌ಜೆಡಿ ಮಕ್ಕಳಿಗೆ ಪಿಸ್ತೂಲು ನೀಡಿದರೆ ನಾವು ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದ್ದೇವೆ; ಪ್ರಧಾನಿ ಮೋದಿ ವಾಗ್ದಾಳಿ
ಆರ್‌ಜೆಡಿ ಬಿಹಾರದ ಮಕ್ಕಳು ಸುಲಿಗೆಕೋರರಾಗಬೇಕೆಂದು ಬಯಸುತ್ತದೆ. ಆದರೆ ಎನ್‌ಡಿಎ ಅವರ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ. ಎನ್‌ಡಿಎ ಮಕ್ಕಳಿಗೆ ಶಿಕ್ಷಣ, ತಂತ್ರಜ್ಞಾನ ಮತ್ತು ಅವಕಾಶಗಳನ್ನು ನೀಡುತ್ತಿದೆ. ಆರ್‌ಜೆಡಿ ಬಿಹಾರ ರಾಜ್ಯದ ಯುವಕರನ್ನು ಗೂಂಡಾಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಹಾರದ ಸೀತಾಮರ್ಹಿಯಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಪಾಟ್ನಾ, ನವೆಂಬರ್ 8: ಆರ್‌ಜೆಡಿ (RJD) ಮಕ್ಕಳ ಮನಸ್ಸನ್ನು ವಿಷಪೂರಿತಗೊಳಿಸುತ್ತಿದೆ. ಅವರು ಬಿಹಾರದ ಯುವಕರನ್ನು ಗೂಂಡಾಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎನ್‌ಡಿಎ (NDA) ಯುವ ಪೀಳಿಗೆಗೆ ಕಂಪ್ಯೂಟರ್‌ಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸುತ್ತಿದ್ದರೆ, ಆರ್‌ಜೆಡಿ ಅವರಿಗೆ ಪಿಸ್ತೂಲ್ ನೀಡುವ ಬಗ್ಗೆ ಮಾತನಾಡುತ್ತಿದೆ ಎಂದು ವರದಿಯಾಗಿದೆ ಎಂದು ಪ್ರಧಾನಿ ಮೋದಿ (PM Narendra Modi) ಆಕ್ರೋಶ ಹೊರಹಾಕಿದ್ದಾರೆ.
“ಬಿಹಾರದ ಮಕ್ಕಳಿಗಾಗಿ ಆರ್‌ಜೆಡಿ ಏನು ಮಾಡಲು ಬಯಸುತ್ತದೆ ಎಂಬುದು ಅವರ ಚುನಾವಣಾ ಪ್ರಚಾರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ‘ಜಂಗಲ್ ರಾಜ್’ ಜನರ ಘೋಷಣೆಗಳನ್ನು ಕೇಳಿ. ಆರ್‌ಜೆಡಿ ತನ್ನ ವೇದಿಕೆಗಳಲ್ಲಿ ಮುಗ್ಧ ಮಕ್ಕಳು ಸುಲಿಗೆಕೋರರಾಗಲು ಬಯಸುತ್ತೇವೆ ಎಂದು ಹೇಳುತ್ತಿದೆ. ಬಿಹಾರದ ಮಗು ದರೋಡೆಕೋರ ಆಗಬೇಕೇ ಅಥವಾ ವೈದ್ಯನಾಗಬೇಕೇ?” ಎಂದು ಪ್ರಧಾನಿ ಮೋದಿ ಆರ್‌ಜೆಡಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Video: ವಾರಾಣಸಿಯಲ್ಲಿ ನಾಲ್ಕು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
#WATCH | Bihar | Addressing a public rally in Sitamarhi, PM Modi says, “Bade bade log bhi yahan ki macchli dekhne aa rahe hain. Paani mein dubki laga rahe hain… Bihar ke election mein doobne ki practice kar rahe hain…” pic.twitter.com/qRmC3DWM04
— ANI (@ANI) November 8, 2025
“ಬಿಹಾರದ ಮಕ್ಕಳು ಈಗ ಸ್ಟಾರ್ಟ್ಅಪ್ಗಳ ಕನಸು ಕಾಣಬೇಕೇ ಹೊರತು “ಹ್ಯಾಂಡ್ಸ್ ಅಪ್” ನಾಯಕರ ಕನಸಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸ್ಟಾರ್ಟ್ಅಪ್ಗಳ ಕನಸು ಕಾಣುವ ಮಕ್ಕಳು ನಮಗೆ ಬೇಕು. ನಾವು ನಮ್ಮ ಮಕ್ಕಳಿಗೆ ಪುಸ್ತಕಗಳು, ಕಂಪ್ಯೂಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




