ಅನಿಲ್ ದೇಶ್​ಮುಖ್ ಬಾರ್ ಮಾಲೀಕರಿಂದ ಕೋಟಿಗಟ್ಟಲೆ ಹಣ ಸ್ವೀಕರಿಸಿದ್ದಾರೆ: ನ್ಯಾಯಾಲಯದಲ್ಲಿ ಇಡಿ ಹೇಳಿಕೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 27, 2021 | 1:53 PM

Anil Deshmukh: ಏಪ್ರಿಲ್​ನಲ್ಲಿ ದೇಶ್​ಮುಖ್ ಅವರ ರಾಜೀನಾಮೆಗೆ ಕಾರಣವಾದ ಬಹುಕೋಟಿ ಲಂಚ-ಸುಲಿಗೆ ದಂಧೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಪಲಾಂಡೆ ಮತ್ತು ಶಿಂಧೆ ಅವರನ್ನು ಅಕ್ರಮ ಹಣ ವರ್ಗಾವಣೆತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಬ್ಬರನ್ನು ಜುಲೈ 1 ರವರೆಗೆ ಇಡಿ ಬಂಧನದಲ್ಲಿಡಲಾಗಿದೆ.

ಅನಿಲ್ ದೇಶ್​ಮುಖ್ ಬಾರ್ ಮಾಲೀಕರಿಂದ ಕೋಟಿಗಟ್ಟಲೆ ಹಣ ಸ್ವೀಕರಿಸಿದ್ದಾರೆ: ನ್ಯಾಯಾಲಯದಲ್ಲಿ ಇಡಿ ಹೇಳಿಕೆ
ಅನಿಲ್ ದೇಶ್​ಮುಖ್
Follow us on

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ಅವರು ಮುಂಬೈನ ಬಾರ್ ಮಾಲೀಕರಿಂದ ₹ 4 ಕೋಟಿ ಹಣವನ್ನು ಪಡೆದಿದ್ದರು ಮತ್ತು ಆ ಹಣವನ್ನು ವಿವಿಧ ಡಮ್ಮಿ ಕಂಪನಿಗಳ ಮೂಲಕ ದೇಣಿಗೆ ರೂಪದಲ್ಲಿ ಟ್ರಸ್ಟ್​ನಲ್ಲಿ ಇಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ನ್ಯಾಯಾಲಯಕ್ಕೆ ತಿಳಿಸಿದೆ. ದೇಶ್​ಮುಖ್ ಅವರ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಪಾಲಂಡೆ ಮತ್ತು ವೈಯಕ್ತಿಕ ಸಹಾಯಕ ಕುಂದನ್ ಶಿಂಧೆ ಅವರ ರಿಮಾಂಡ್ ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಈ ಹೇಳಿಕೆ ನೀಡಿದೆ.

ಏಪ್ರಿಲ್​ನಲ್ಲಿ ದೇಶ್​ಮುಖ್ ಅವರ ರಾಜೀನಾಮೆಗೆ ಕಾರಣವಾದ ಬಹುಕೋಟಿ ಲಂಚ-ಸುಲಿಗೆ ದಂಧೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಪಲಾಂಡೆ ಮತ್ತು ಶಿಂಧೆ ಅವರನ್ನು ಅಕ್ರಮ ಹಣ ವರ್ಗಾವಣೆತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಬ್ಬರನ್ನು ಜುಲೈ 1 ರವರೆಗೆ ಇಡಿ ಬಂಧನದಲ್ಲಿಡಲಾಗಿದೆ.

ಹಿಂದಿನ ದಿನ ಇಲ್ಲಿನ ಬಲ್ಲಾರ್ಡ್ ಎಸ್ಟೇಟ್ ಇಡಿ ಕಚೇರಿಯಲ್ಲಿ ತನಿಖಾಧಿಕಾರಿಯ ಮುಂದೆ ಬೆಳಿಗ್ಗೆ 11 ಗಂಟೆಯೊಳಗೆ ಹಾಜರಾಬೇಕು ಎಂದು ದೇಶ್​ಮುಖ್ ಅವರಿಗೆ ಹೇಳಲಾಗಿತ್ತು. ಆದಾಗ್ಯೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಕರೆಸಿಕೊಂಡ ಏಜೆನ್ಸಿಯ ಮುಂದೆ ಹಾಜರಾಗಲು ಹೊಸ ದಿನಾಂಕವನ್ನು ದೇಶ್​ಮುಖ್ ಕೋರಿದ್ದಾರೆ. ದೇಶ್​ಮುಖ್ ಅವರ ವಕೀಲರ ತಂಡವು ಇಡಿ ಕಚೇರಿಗೆ ಭೇಟಿ ನೀಡಿ ಹಾಜರಾಗಲು ಹೊಸ ದಿನಾಂಕವನ್ನು ಕೋರಿತು. ಅವರು ದೇಶ್​ಮುಖ್ ಬರೆದ ಪತ್ರವನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಅಕ್ರಮ ಹಣ ವರ್ಗಾವಣೆ ಮಾಡಲು ದೇಶ್​ಮುಖ್ ಅವರಿಗೆ ಸಹಾಯ ಮಾಡಲು ಪಲಾಂಡೆ ಮತ್ತು ಶಿಂಧೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಸಿಬಿಐ ಮೊದಲು ಪ್ರಾಥಮಿಕ ವಿಚಾರಣೆ (PE) ನಡೆಸಿದ ನಂತರ ದೇಶ್​ಮುಖ್ ಮತ್ತು ಇತರರ ವಿರುದ್ಧದ ಇಡಿ ಪ್ರಕರಣವನ್ನು ನೋಡಲಾಗುತ್ತದೆ. ನಂತರ ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ ನಿಯಮಿತ ಪ್ರಕರಣ ದಾಖಲಿಸಲಾಗುತ್ತದೆ.

ಇವರಿಬ್ಬರ ರಿಮಾಂಡ್ ಕೋರಿದ ಇಡಿ, ಕೆಲವು ಬಾರ್ ಮಾಲೀಕರು / ವ್ಯವಸ್ಥಾಪಕರು ತಮ್ಮ ಹೇಳಿಕೆಗಳಲ್ಲಿ ಆಗಿನ ಅಪರಾಧ ಗುಪ್ತಚರ ಘಟಕದ (ಸಿಟಿಯು) ಮುಖ್ಯಸ್ಥ ಸಚಿನ್ ವಾಜೆ ಅವರು ತಮ್ಮ ಕಚೇರಿಯಲ್ಲಿ ಬಾರ್ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಪ್ರದರ್ಶನ ಕಲಾವಿದರ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ನಿರ್ಬಂಧಿತ ಗಂಟೆಗಳ ನಂತರ ಅವರ ಆರ್ಕೆಸ್ಟ್ರಾ ಬಾರ್‌ಗಳ ಸುಗಮ ಕಾರ್ಯನಿರ್ವಹಣೆಗೆ ಹಣ ಸಂಗ್ರಹಣೆ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ಹೇಳಿದೆ.

ವಾಜೆ ಮುಂಬೈನಾದ್ಯಂತ ವಿವಿಧ ಆರ್ಕೆಸ್ಟ್ರಾ ಬಾರ್ ಮಾಲೀಕರಿಂದ ₹4.70 ಕೋಟಿ ಸಂಗ್ರಹಿಸಿದ್ದಾರೆ ಎಂದು ಈ ಹೇಳಿಕೆಗಳಿಂದ ಸಂಗ್ರಹಿಸಬಹುದು ಎಂದು ಇಡಿ ಹೇಳಿದೆ. ನಂತರ ವಾಜೆ ಅವರು ಹೇಳಿಕೆಯಲ್ಲಿ ಆಗಿನ ಗೃಹ ಸಚಿವರಿಂದ ಹಲವಾರು ಪೊಲೀಸ್ ತನಿಖೆಗಳಲ್ಲಿ ನೇರ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ವಾಜೆ ಅವರ ಪ್ರಕಾರ, ಆಗಿನ ಮಹಾರಾಷ್ಟ್ರ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಅವರಿಗೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಪಟ್ಟಿಯನ್ನು ನೀಡಲಾಯಿತು. ಪ್ರತಿ ಬಾರ್ ಮತ್ತು ರೆಸ್ಟೋರೆಂಟ್‌ನಿಂದ ತಿಂಗಳಿಗೆ 3 ಲಕ್ಷ ರೂ.ಗಳನ್ನು ಸಂಗ್ರಹಿಸಲು ಕೇಳಿಕೊಳ್ಳಲಾಗಿದೆ. ಆದ್ದರಿಂದ ವಿವಿಧ ಬಾರ್ ಮಾಲೀಕರೊಂದಿಗೆ ಸಭೆ ಏರ್ಪಡಿಸಲಾಗಿದೆ.

ಡಿಸೆಂಬರ್ 2020 ಮತ್ತು ಫೆಬ್ರವರಿ, 2021 ರ ನಡುವೆ ವಿವಿಧ ಬಾರ್ ಮಾಲೀಕರಿಂದ ಸುಮಾರು ₹4.70 ಕೋಟಿ ಹಣವನ್ನು ಸಂಗ್ರಹಿಸಿದ್ದೇನೆ ಎಂದು ವಾಜೆ ಹೇಳಿದ್ದಾರೆ. ಅದನ್ನು ಅವರು ಎರಡು ಕಂತುಗಳಲ್ಲಿ ಕುಂದನ್ ಶಿಂಧೆಗೆ ಹಸ್ತಾಂತರಿಸಿದರು ಎಂದು ಇಡಿ ಹೇಳಿದೆ.

ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾದ ಸ್ಫೋಟಕಗಳಿಂದ ತುಂಬಿದ ಎಸ್‌ಯುವಿ ಮತ್ತು ಎನ್‌ಐಎ ತನಿಖೆ ನಡೆಸಿದ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರಾನ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಾಜೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅನಿಲ್ ದೇಶ್ಮುಖ್ ಅವರ ಕುಟುಂಬ ನಡೆಸುತ್ತಿರುವ ನಾಗ್ಪುರ ಮೂಲದ ಶ್ರೀ ಸಾಯಿ ಶಿಕ್ಷಣ್ ಸಂಸ್ಥೆಯು ಚಾರಿಟಬಲ್ ಟ್ರಸ್ಟ್ ನ್ನು ಕೂಡಾ ಇಡಿ ಪರಿಶೀಲಿಸಿದೆ. ಅನಿಲ್ ದೇಶ್​ಮುಖ್ ಈ ಟ್ರಸ್ಟ್‌ನ ಅಧ್ಯಕ್ಷರು ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಗಳು ಮತ್ತು ಸದಸ್ಯರಾಗಿದ್ದಾರೆ.

ಟ್ರಸ್ಟ್ ನಾಗ್ಪುರದಲ್ಲಿ ಎಂಜಿನಿಯರಿಂಗ್, ಎಂಬಿಎ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ನಡೆಸುತ್ತಿದೆ. ಆದಾಗ್ಯೂ, ಟ್ರಸ್ಟ್‌ನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಪರಿಶೀಲನೆಯು ಇತ್ತೀಚಿನ ದಿನಗಳಲ್ಲಿ ಸುಮಾರು ₹ 4.18 ಕೋಟಿ ಮೊತ್ತದ ಚೆಕ್‌ಗಳ ನಮೂದುಗಳನ್ನು ಹೊಂದಿದೆ ಎಂದು ಇಡಿ ತಿಳಿಸಿದೆ

ಈ ಮೊತ್ತವನ್ನು ದೆಹಲಿ ಮೂಲದ ವಿವಿಧ ಕಂಪನಿಗಳಿಂದ ಟ್ರಸ್ಟ್ ಸ್ವೀಕರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಇಡಿ ತನಿಖೆಯ ಪ್ರಕಾರ ಈ ಕಂಪನಿಗಳು ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿವೆ ಮತ್ತು “ವರ್ಗಾವಣೆ ನಮೂದುಗಳನ್ನು” ಒದಗಿಸಲು ಕೆಲಸ ಮಾಡುತ್ತವೆ.ದೆಹಲಿಯ ನಾಲ್ಕು ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ, ಈ ಕಂಪನಿಗಳು ಸುರೇಂದ್ರ ಕುಮಾರ್ ಜೈನ್ ಮತ್ತು ಅವರ ಸಹೋದರ ವೀರೇಂದ್ರ ಜೈನ್ ಅವರ ಒಡೆತನದಲ್ಲಿದೆ ಎಂದು ಇಡಿ ತಿಳಿಸಿದೆ.

ನಾಗ್ಪುರದ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ ಟ್ರಸ್ಟ್‌ಗೆ ದೇಣಿಗೆ ನೀಡಲು ವರ್ಗಾವಣೆ / ಹೊಂದಾಣಿಕೆ ನಮೂದುಗಳನ್ನು ಕೇಳಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ತಿಳಿದುಬಂದಿದೆ. ಅದರಂತೆ, ದೇಶಮುಖ್ ಕುಟುಂಬದ ಸೂಚನೆಯ ಮೇರೆಗೆ ಆ ವ್ಯಕ್ತಿಯಿಂದ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸಲಾಯಿತು.ಇಡಿ ಪ್ರಕಾರ ಟ್ರಸ್ಟ್ ದೇಣಿಗೆಗೆ ಕಂಪೆನಿಗಳ ವೆಬ್ ಮೂಲಕ ವ್ಯವಹರಿಸಲಾಯಿತು.  ಸರಿಸುಮಾರು ₹4.18 ಕೋಟಿಯನ್ನು ಸಾಲ / ದೇಣಿಗೆಗಳ ಹೆಸರಲ್ಲಿ ಟ್ರಸ್ಟ್ ಗೆ ವರ್ಗಾಯಿಸಲಾಗಿದೆ ಎಂದು ಇಡಿ ತಿಳಿಸಿದೆ.

“ಅಂತೆಯೇ ದೇಶ್​ಮುಖ್ ಅವರು ರಾಜ್ಯ ಗೃಹ ಸಚಿವರಾಗಿದ್ದಾಗ ಆರ್ಕೆಸ್ಟ್ರಾ ಬಾರ್ ಮಾಲೀಕರಿಂದ ಅಂದಾಜು ₹4.70 ಕೋಟಿ ಮೊತ್ತವನ್ನು ಪಡೆದಿರುವುದು ಸ್ಪಷ್ಟವಾಗಿದೆ ಮತ್ತು ಈ ಮೊತ್ತವನ್ನು ಅವರ ಮಗ ಹೃಷಿಕೇಶ್ ಮೂಲಕ ದೆಹಲಿ ಮೂಲದ (ಆನ್) ಪೇಪರ್ ಕಂಪನಿಗಳಿಗೆ ಹಣವನ್ನು ಒದಗಿಸಲು ಬಳಸಿದ್ದಾರೆ. ಲೇಯರಿಂಗ್ ನಂತರ ಅದೇ (ಹಣವನ್ನು) ಶ್ರೀ ಸಾಯಿ ಶಿಕ್ಷಣ ಸಂಸ್ಥ ಟ್ರಸ್ಟ್‌ಗೆ ದೇಣಿಗೆ ರೂಪದಲ್ಲಿ ರವಾನಿಸಲಾಗಿದೆ ಎಂದು ಇಡಿ ತಿಳಿಸಿದೆ.

ಇಡಿ ನಡೆಸಿದ ತನಿಖೆಯಲ್ಲಿ 11 ಕಂಪೆನಿಗಳಿವೆ ಎಂದು ತಿಳಿದುಬಂದಿದೆ, ಇವುಗಳನ್ನು ಕುಟುಂಬ ಸದಸ್ಯರು ಅನಿಲ್ ದೇಶ್​ಮುಖ್ ನೇರವಾಗಿ ನಿಯಂತ್ರಿಸುತ್ತಾರೆ. ಇದಲ್ಲದೆ, 13 ಕಂಪನಿಗಳ ಮತ್ತೊಂದು ಸೆಟ್ ದೇಶಮುಖ್ ಕುಟುಂಬದ ಆಪ್ತರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

ಈ ಕಂಪನಿಗಳ ಖಾತೆಗಳ ವಿಶ್ಲೇಷಣೆಯಿಂದ ವರ್ಗಾವಣೆಗೆ ಯಾವುದೇ ತಾರ್ಕಿಕತೆಯಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ರೀತಿಯ ವಹಿವಾಟುಗಳು ಬ್ಯಾಲೆನ್ಸ್ ಶೀಟ್‌ಗಳನ್ನು ಹೆಚ್ಚಿಸಲು ಮತ್ತು ಒಂದು ಕಂಪನಿಯಿಂದ ಇನ್ನೊಂದಕ್ಕೆ ಹಣವನ್ನು ಲೇಯರ್ ಮಾಡಲು ಉದ್ದೇಶಿಸಿವೆ ಎಂದು ಹೇಳಬಹುದು ಎಂದು ಇಡಿ ಹೇಳಿದೆ.

ದೇಶ್​ಮುಖ್ ಪರವಾಗಿ ಕುಂದನ್ ಶಿಂಧೆ, ವಾಜೆ ಅವರಿಂದ ಹಣವನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅಕ್ರಮ ಹಣವರ್ಗಾವಣೆ ಮಾಡಲು ಸಹಕರಿಸಿದ್ದಾರೆ ಎಂದು ಇಡಿ ಹೇಳಿದೆ.
ಇದಲ್ಲದೆ, ಆರ್ಕೆಸ್ಟ್ರಾ ಬಾರ್‌ಗಳಿಂದ (ಪೊಲೀಸ್ ಅಧಿಕಾರಿಗಳಿಗೆ) ವರ್ಗಾವಣೆ, ಪೋಸ್ಟಿಂಗ್ ಮತ್ತು ಹಣವನ್ನು ಸಂಗ್ರಹಿಸುವ ವಿಷಯದಲ್ಲಿ ದೇಶಮುಖ್ ಅವರ ಸೂಚನೆಗಳನ್ನು ರವಾನಿಸುವಲ್ಲಿ ಪಾಲಂಡೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಇಡಿ ಪ್ರಕಾರ ಪಲಾಂಡೆ ಅವರು ಪೊಲೀಸ್ ಅಧಿಕಾರಿಗಳ ಮೂಲಕ ಕಳಂಕಿತ ಹಣವನ್ನು ಸಂಗ್ರಹಿಸುವ ಕೆಲಸವನ್ನು ವಿಶ್ಲೇಷಿಸುವ ಮತ್ತು ನಿರ್ಣಯಿಸುವಲ್ಲಿ ಪಾತ್ರವಹಿಸಿದ್ದಾರೆ.

ಶಿಂಧೆ ಮತ್ತು ಪಲಾಂಡೆ ಅವರು ಹಣವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ. ಅದನ್ನು ಮತ್ತಷ್ಟು ತನಿಖೆ ಮಾಡಬೇಕಾಗಿದೆ ಎಂದು ಇಡಿ ಹೇಳಿದೆ. ಶಿಂಧೆ ಮತ್ತು ಪಲಾಂಡೆ ನೇರವಾಗಿ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿದ್ದಾರೆ.

ಅವರ ಕಸ್ಟೋಡಿಯಲ್ ವಿಚಾರಣೆ ಈ ಹೊತ್ತಿನ ತುರ್ತಾಗಿದೆ. ಈ ಪ್ರಕರಣದಲ್ಲಿ ಸುಮಾರು ₹ 100 ಕೋಟಿ ಸಂಗ್ರಹವಾಗಿದೆ ಎಂಬ ಆರೋಪವಿದೆ. ಇದೆಲ್ಲವನ್ನೂ ಸಾಬೀತುಪಡಿಸಬೇಕಿದೆ. ಈ ಹಂತದಲ್ಲಿ ವಿದೇಶಿ ಕೈವಾಡವನ್ನೂ ತಳ್ಳಿಹಾಕಲಾಗುವುದಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಶಿಂಧೆ ಮತ್ತು ಪಲಾಂಡೆ ಅವರು ಇಲ್ಲ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ತಾರ್ಕಿಕ ತೀರ್ಮಾನವನ್ನು ತೆಗೆದುಕೊಳ್ಳುವ ಸಲುವಾಗಿ ಇಬ್ಬರನ್ನು ವಿಚಾರಣೆ ನಡೆಸುವುದು ತನಿಖೆಗೆ ಕಡ್ಡಾಯವಾಗಿದೆ ಎಂದು ಇಡಿ ಹೇಳಿದೆ.

ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಅವರನ್ನು ತೆಗೆದುಹಾಕಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಆ ಸಮಯದಲ್ಲಿ ರಾಜ್ಯ ಗೃಹ ಸಚಿವರಾಗಿದ್ದ ದೇಶ್ಮುಖ್ ಅವರನ್ನು ವಜಾಗೊಳಿಸಿದ ಪೊಲೀಸ್ ವಾಜ್ ಅವರಿಗೆ ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್​ಗಳಿಂದ ತಿಂಗಳಿಗೆ ₹ 100 ಕೋಟಿ ಸುಲಿಗೆ ಮಾಡುವಂತೆ ನಿರ್ದೇಶನ ನೀಡಿದ್ದರು.

“ಸಾರ್ವಜನಿಕ ಕರ್ತವ್ಯದ ಅನುಚಿತ ಮತ್ತು ಅಪ್ರಾಮಾಣಿಕ ಕಾರ್ಯಕ್ಷಮತೆಗೆ ಅನಗತ್ಯ ಲಾಭವನ್ನು ಪಡೆಯುವ ಪ್ರಯತ್ನಕ್ಕಾಗಿ” ಸಿಬಿಐ ದೇಶ್​ಮುಖ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ (ಐಪಿಸಿ) ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್​ಗೆ ಇ.ಡಿ.ಯಿಂದ ಸಮನ್ಸ್​; ಆಪ್ತರಿಬ್ಬರ ಬಂಧನ