AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದ ಹಡಗಿನಲ್ಲಿ ಮತ್ತೋರ್ವ ರಷ್ಯನ್ ಪ್ರಜೆ ನಿಗೂಢ ಸಾವು; 15 ದಿನದಲ್ಲಿ 3ನೇ ಪ್ರಕರಣ

ಮೃತರಾದ ವ್ಯಕ್ತಿಯನ್ನು ಸೆರ್ಗಿ ಮಿಲ್ಯಕೋವ್ (51) ಎಂದು ಪೊಲೀಸರು ಗುರುತಿಸಿದ್ದಾರೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಒಡಿಶಾದ ಹಡಗಿನಲ್ಲಿ ಮತ್ತೋರ್ವ ರಷ್ಯನ್ ಪ್ರಜೆ ನಿಗೂಢ ಸಾವು; 15 ದಿನದಲ್ಲಿ 3ನೇ ಪ್ರಕರಣ
ಒಡಿಶಾದ ಹಡಗಿನಲ್ಲಿ ಮೃತಪಟ್ಟ ರಷ್ಯನ್ ಪ್ರಜೆ
TV9 Web
| Edited By: |

Updated on: Jan 03, 2023 | 12:51 PM

Share

ಒಡಿಶಾ: ಒಡಿಶಾದಲ್ಲಿ (Odisha) ಇಬ್ಬರು ರಷ್ಯನ್ ಪ್ರಜೆಗಳು ಶವವಾಗಿ ಪತ್ತೆಯಾದ ಕೆಲವೇ ದಿನಗಳ ಬಳಿಕ ಇಂದು ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದಿಪ್ ಬಂದರಿನಲ್ಲಿ ಸರಕು ಹಡಗಿನಲ್ಲಿ ರಷ್ಯಾದ (Russian Man) ಇನ್ನೊಬ್ಬ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ 15 ದಿನಗಳೊಳಗೆ ಈ ಘಟನೆಗಳು ನಡೆದಿರುವುದರಿಂದ ಈ ಸಾವುಗಳು ಸಾಕಷ್ಟು ಸಂಚಲನ ಮೂಡಿಸಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ಟೀಕಿಸಿದ ಇತರ ಇಬ್ಬರು ರಷ್ಯಾದ ಪ್ರಜೆಗಳು 15 ದಿನಗಳ ಹಿಂದೆ ಒಡಿಶಾದ ರಾಯಗಢ ಹೋಟೆಲ್‌ನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು ಎಂಬುದು ಗಮನಿಸಬೇಕಾದ ವಿಷಯ.

ಇದೀಗ ಮೃತರಾದ ವ್ಯಕ್ತಿಯನ್ನು ಸೆರ್ಗಿ ಮಿಲ್ಯಕೋವ್ (51) ಎಂದು ಪೊಲೀಸರು ಗುರುತಿಸಿದ್ದಾರೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆತ ಸರಕು ಸಾಗಣೆ ಹಡಗಿನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಅವರ ಸಾವಿಗೆ ಕಾರಣ ತಿಳಿಯಲಿದೆ.

ಇದನ್ನೂ ಓದಿ: shocking ಹೊಸ ವರ್ಷಾಚರಣೆ ವೇಳೆ ಭೀಕರ ಅಪಘಾತ, ಯುವತಿಯನ್ನು ಎಳೆದೊಯ್ದಿ ಕಾರು: 4ಕಿ.ಮೀ ದೂರದಲ್ಲಿ ಶವ ಪತ್ತೆ

ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಆ ವ್ಯಕ್ತಿ ಹಡಗಿನಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಜಗತ್‌ಸಿಂಗ್‌ಪುರದ ಎಸ್‌ಪಿ ಅಖಿಲೇಶ್ವರ್ ಸಿಂಗ್ ತಿಳಿಸಿದ್ದಾರೆ.

ರಷ್ಯಾದ ಶಾಸಕ ಮತ್ತು ಮಿಲಿಯನೇರ್ ಪಾವೆಲ್ ಆಂಟೋವ್ ಡಿಸೆಂಬರ್ 25ರಂದು ಒಡಿಸ್ಸಾದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಮಿಲಿಯನೇರ್ ತಮ್ಮ 65ನೇ ಹುಟ್ಟುಹಬ್ಬದ ಆಚರಣೆಗಾಗಿ ಒಡಿಶಾದ ರಾಯಗಢ ಪ್ರದೇಶದಲ್ಲಿ ವಿಹಾರಕ್ಕೆ ತೆರಳಿದ್ದರು. ಪೊಲೀಸರ ಪ್ರಕಾರ, ಆಂಟೋವ್ ತನ್ನ ಹೋಟೆಲ್ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Crime News: ಬಿಜೆಪಿ ಮಾಜಿ ಶಾಸಕರ ಮನೆ ಹಿಂದೆ ಮಹಿಳೆಯ ಕೊಳೆತ ಶವ ಪತ್ತೆ

ಇದೇ ಹೋಟೆಲ್‌ನಲ್ಲಿ ಒಂದು ವಾರದ ಅವಧಿಯಲ್ಲಿ ರಷ್ಯಾದ ಶಾಸಕರ ಎರಡನೇ ಸಾವು ಇದಾಗಿದೆ. ಆಂಟೊವ್ ಅವರ ಸಾವು ಅವರ ಪಕ್ಷದ ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ (61) ಅವರ ನಿಗೂಢ ಸಾವು ಸಂಭವಿಸಿ 2 ದಿನಗಳ ನಂತರ ನಡೆದಿತ್ತು. ಅವರು ಒಡಿಶಾದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ