ತನ್ನನ್ನು ಕಡೆಗಣಿಸಿ ಕೇವಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಲೆಫ್ಟಿನೆಂಟ್ ಗವರ್ನರ್ ಬಗ್ಗೆ ದೆಹಲಿ ಸರ್ಕಾರಕ್ಕೆ ತೀವ್ರ ಅಸಮಾಧಾನ

ಆಡಳಿತ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಕೇಜ್ರಿವಾಲ ಅವರು ಜಿಎನ್ಸಿಟಿಡಿ ಕಾಯ್ದೆ ದೆಹಲಿ ಜನತೆಗೆ ಕೇಂದ್ರ ಮಾಡಿರುವ ಅಪಮಾನ ಎಂದು ಹೇಳಿದ್ದಾರೆ.

ತನ್ನನ್ನು ಕಡೆಗಣಿಸಿ ಕೇವಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಲೆಫ್ಟಿನೆಂಟ್ ಗವರ್ನರ್ ಬಗ್ಗೆ ದೆಹಲಿ ಸರ್ಕಾರಕ್ಕೆ ತೀವ್ರ ಅಸಮಾಧಾನ
ಅರವಿಂದ ಕೇಜ್ರಿವಾಲ ಮತ್ತು ಅನಿಲ್ ಬೈಜಲ್
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2021 | 1:21 AM

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಅವರು ಕೋವಿಡ್-19 ಸಿದ್ಧತೆ ಕುರಿತು ಒಂದು ಚುನಾಯಿತ ಸರ್ಕಾರವನ್ನು ಕಡೆಗಣಿಸಿ ನೇರವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದನ್ನು ದೆಹಲಿ ಸರ್ಕಾರ ಬಲವಾಗಿ ಖಂಡಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ಮಾಡಿರುವ ಟ್ವೀಟ್ ಆಮ್ ಆದ್ಮಿ ಪಕ್ಷ ಮತ್ತು ಲಿಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ.

‘ಒಂದು ಚುನಾಯಿತ ಸರ್ಕಾರದ ಬೆನ್ನಹಿಂದೆ ಹೀಗೆ ಸಭೆ ನಡೆಸುವುದು ಸಂವಿಧಾನದ ಆಶಯ ಮತ್ತು ಸುಪ್ರೀಮ್ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದೇವೆ, ಜನ ಸಚಿವ ಸಂಫುಟವನ್ನು ಆಯ್ಕೆ ಮಾಡಿದ್ದಾರೆ, ನಿಮಗೇನಾದರೂ ಪ್ರಶ್ನೆ ಕೇಳುವುದಿದ್ದರೆ ಸಚಿವರನ್ನು ಕೇಳಿ. ಸಭೆಗಳನ್ನು ನೇರವಾಗಿ ಅಧಿಕಾರಿಗಳೊಂದಿಗೆ ನಡೆಸುವುದನ್ನು ನಿಲ್ಲಿಸಿರಿ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸೋಣ, ಸರ್,’ ಎಂದು ಬೈಜಲ್ ಅವರು ಟ್ವೀಟ್ಗೆ ಕೇಜ್ರಿವಾಲ್ ಉತ್ತರಿಸಿದ್ದಾರೆ.

ದೇಶದ ರಾಜಧಾನಿಯಲ್ಲಿ ಆಡಳಿಯ ನಡೆಸುವ ಬಗ್ಗೆ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಮಾರ್ಚ್ನಲ್ಲಿ ಪಾಸು ಮಾಡಿರುವುದು ಕೇಜ್ರಿವಾಲ ಸರ್ಕಾರದಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟಿಸಿದೆ. ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಅಥವಾ ಜಿಎನ್ಸಿಟಿಡಿ ಕಾಯ್ದೆಯು ದೆಹಲಿಯ ಚುನಾಯಿತ ಸರ್ಕಾರಕ್ಕಿಂತ ಕೇಂದ್ರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ ಎಂದು ಕೇಜ್ರಿವಾಲ ಸರ್ಕಾರ ವಾದಿಸುತ್ತಿದೆ.

ಆದರೆ, ಕೇಂದ್ರವು, ಕಾಯ್ದೆಗೆ ತಿದ್ದುಪಡಿ ತಂದಿರುವುದು ದೆಹಲಿ ಸರ್ಕಾರದ ಹೊಣೆಗಾರಿಕೆಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಾಗೆ ಮತ್ತು ಸುಪ್ರೀಮ್ ಕೋರ್ಟ್ ಗ್ರಹಿಕೆ ಕುರಿತು ಮತ್ತಷ್ಟು ವಿವರಣೆ ನೀಡುತ್ತದೆ ಎಂದು ಹೇಳುತ್ತಿದೆ. 2013ರಲ್ಲಿ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ಚುಕ್ಕಾಣಿ ಹಿಡಿದ ನಂತರದಿಂದ

ಆಡಳಿತ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಕೇಜ್ರಿವಾಲ ಅವರು ಜಿಎನ್ಸಿಟಿಡಿ ಕಾಯ್ದೆ ದೆಹಲಿ ಜನತೆಗೆ ಕೇಂದ್ರ ಮಾಡಿರುವ ಅಪಮಾನ ಎಂದು ಹೇಳಿದ್ದಾರೆ.

ಬುಧವಾರದ ತಮ್ಮ ಟ್ವೀಟ್ನಲ್ಲಿ ಲೆಫ್ಟಿನೆಂಟ್ ಜನರಲ್ ಅವರು, ‘ದೆಹಲಿಯಲ್ಲಿ ಕೋವಿಡ್ ಸ್ಥಿತಿ ಮತ್ತು ಮುಂದಿನ ಸಿದ್ಧತೆ ಕುರಿತು ಮುಖ್ಯ ಕಾರ್ಯದರ್ಶಿ, ಎಸಿಎಸ್ (ಗೃಹ ಮತ್ತು ಆರೋಗ್ಯ), ವಿಭಾಗೀಯ ಆಯುಕ್ತರು, ಕಾರ್ಯದರ್ಶಿ (ಆರೋಗ್ಯ), ಎಮ್ಡಿ-ಡಿಎಮ್ಆರ್ಸಿ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು,’ ಅಂತ ಹೇಳಿದ್ದಾರೆ.

ಕನಿಷ್ಟ ಈ ತಿಂಗಳ ಅಂತ್ಯದವರೆಗೆ ದ್ರವ ಆಕ್ಸಿಜನ್ ಪ್ಲ್ಯಾಂಟ್ ಮತ್ತು ಮಿಡಿಯಾ ಆಮ್ಲಜನಕ ಸ್ಟೋರೇಜ್ ಟ್ಯಾಂಕ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಬೈಜಲ್ ಅವರು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ‘ದಲಿತ ಬಾಲಕಿಯೂ ದೇಶದ ಮಗಳು’: ದೆಹಲಿಯಲ್ಲಿ 9ರ ಹರೆಯದ ಬಾಲಕಿಯ ಅತ್ಯಾಚಾರ ಪ್ರಕರಣ ಬಗ್ಗೆ ಜನಾಕ್ರೋಶ