Ashwini Vaishnaw: ರೈಲ್ವೆ ನಮ್ಮ ಆದ್ಯತೆಯೇ ಹೊರತು ರೀಲ್ಸ್ ಅಲ್ಲ; ವಿಪಕ್ಷಗಳ ವಿರುದ್ಧ ಸಿಡಿದೆದ್ದ ಸಚಿವ ಅಶ್ವಿನಿ ವೈಷ್ಣವ್

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರತಿಪಕ್ಷಗಳು 'ರೀಲ್ ಮಿನಿಸ್ಟರ್' ಎಂದು ಟೀಕಿಸಿದ್ದವು. ಈ ಹಿನ್ನೆಲೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಅಶ್ವಿನಿ ವೈಷ್ಣವ್, ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆಯೇ ಹೊರತು ರೀಲ್ಸ್ ಮಾಡುತ್ತಾ ಕೂರುವುದಿಲ್ಲ ಎಂದು ಟೀಕಿಸಿದ್ದಾರೆ.

Ashwini Vaishnaw: ರೈಲ್ವೆ ನಮ್ಮ ಆದ್ಯತೆಯೇ ಹೊರತು ರೀಲ್ಸ್ ಅಲ್ಲ; ವಿಪಕ್ಷಗಳ ವಿರುದ್ಧ ಸಿಡಿದೆದ್ದ ಸಚಿವ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್Image Credit source: PTI
Follow us
ಸುಷ್ಮಾ ಚಕ್ರೆ
|

Updated on:Aug 01, 2024 | 6:55 PM

ನವದೆಹಲಿ: ಲೋಕಸಭೆಯಲ್ಲಿ ಇಂದು ಮಾತನಾಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಬಿಜೆಪಿ ಸರ್ಕಾರದ ಸುರಕ್ಷತಾ ದಾಖಲೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಇತ್ತೀಚಿನ ರೈಲು ಹಳಿತಪ್ಪುವಿಕೆಯನ್ನು ಪ್ರತಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷಗಳು ತಮ್ಮನ್ನು ‘ರೀಲ್ ಮಿನಿಸ್ಟರ್’ ಎಂದು ಕರೆದಿದ್ದಕ್ಕಾಗಿ ಕೋಪಗೊಂಡ ಸಚಿವ ಅಶ್ವಿನಿ ವೈಷ್ಣವ್, ಕಾಂಗ್ರೆಸ್​ ಆಡಳಿತದಲ್ಲಿ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಲಾಗಿದೆ. ಪ್ರತಿಪಕ್ಷಗಳು ಯಾವಾಗಲೂ ಈ ವಿಷಯವನ್ನು ರಾಜಕೀಯಗೊಳಿಸಲು ಬಯಸುತ್ತವೆ ಎಂದು ವಾದಿಸಿದ್ದಾರೆ.

ಕಾಂಗ್ರೆಸ್ ತನ್ನ 58 ವರ್ಷಗಳ ಅಧಿಕಾರದಲ್ಲಿ 1 ಕಿ.ಮೀ.ವರೆಗೆ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ಅನ್ನು ಏಕೆ ಅಳವಡಿಸಲು ಸಾಧ್ಯವಾಗಲಿಲ್ಲ ಎಂದು ಇಲ್ಲಿ ಘೋಷಣೆ ಕೂಗುತ್ತಿರುವವರಿಗೆ ನಾನು ಕೇಳಬಯಸುತ್ತೇನೆ. ತಮ್ಮ ಆಡಳಿತವಿದ್ದಾಗ ಏನೂ ಮಾಡದವರು ಇಂದು ನಮ್ಮ ಸರ್ಕಾರದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಧೈರ್ಯ ತೋರುತ್ತಿದ್ದಾರೆ ಎಂದು ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ.

ಸಚಿವರ ಭಾಷಣದ ವೇಳೆ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಂತ ಬೇನಿವಾಲ್, ‘ನೀವು ರೀಲ್ ಮಂತ್ರಿ, ಹಳಿ ತಪ್ಪಿದ ಮಂತ್ರಿ’ ಎಂದು ಹೇಳಿದರು. ಅದಕ್ಕೆ ಕೋಪಗೊಂಡ ಅಶ್ವಿನಿ ವೈಷ್ಣವ್ ಹಿಂತಿರುಗಿ ಕೋಪದಿಂದ “ನೀವು ದಯವಿಟ್ಟು ಬಾಯಿ ಮುಚ್ಚಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಮಾಡಿದ ಭಾಷಣದಲ್ಲಿರುವ ತಪ್ಪುಗಳನ್ನು ಉಲ್ಲೇಖಿಸಿ ಸ್ಪೀಕರ್​​ಗೆ ಪತ್ರ ಬರೆದ ಕಾಂಗ್ರೆಸ್

‘ನಾವು ಬರೀ ರೀಲ್ ಮಾಡುವವರಲ್ಲ, ಕಷ್ಟಪಟ್ಟು ದುಡಿಯುವ ಜನ’ ಎಂದು ಪ್ರತಿಪಕ್ಷದ ಸಂಸದರಿಗೆ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿಪಕ್ಷಗಳು ಅಶ್ವಿನಿ ವೈಷ್ಣವ್ ಅವರನ್ನು ‘ರೀಲ್ ಮಿನಿಸ್ಟರ್’ ಎಂದು ಲೇವಡಿ ಮಾಡುತ್ತಿವೆ. ರೈಲ್ವೇ ಮೂಲಸೌಕರ್ಯವನ್ನು ಸುಧಾರಿಸುವ ಕೆಲಸಕ್ಕಿಂತ ಸಾಮಾಜಿಕ ಮಾಧ್ಯಮದ ವಿಡಿಯೋ ಚಿತ್ರಣವನ್ನು ಕೇಂದ್ರೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರದ ಅವಧಿಯಲ್ಲಿ ವಾರ್ಷಿಕ ಸರಾಸರಿ ಅಪಘಾತಗಳ ಸಂಖ್ಯೆ 171 ಆಗಿತ್ತು. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಶೇ. 68ರಷ್ಟು ಕಡಿಮೆಯಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಟ್ರೋಲ್ ಆರ್ಮಿಯ ಸಹಾಯದಿಂದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಪ್ರತಿದಿನ ರೈಲ್ವೆಯಲ್ಲಿ ಪ್ರಯಾಣಿಸುವ 2 ಕೋಟಿ ಜನರ ಹೃದಯದಲ್ಲಿ ಭಯ ಹುಟ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಸಚಿವ ಅಶ್ವಿನಿ ವೈಷ್ಣವ್ ಪ್ರಶ್ನೆ ಮಾಡಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಭಾರತದಲ್ಲಿ ರೈಲು ಹಳಿ ತಪ್ಪಿದ ಹಲವಾರು ಘಟನೆಗಳು ವರದಿಯಾಗಿವೆ. ಇತ್ತೀಚೆಗೆ ಜುಲೈ 30ರಂದು ಜಾರ್ಖಂಡ್‌ನ ಜಮ್ಶೆಡ್‌ಪುರ ಬಳಿ ರೈಲು ಅಪಘಾತ ಉಂಟಾಗಿತ್ತು. ಹೌರಾ-ಮುಂಬೈ ಮೇಲ್‌ನ 18 ಕೋಚ್‌ಗಳು ಹಳಿತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು ಮತ್ತು 22 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ರೈಲ್ವೆ ಸುರಕ್ಷತೆಗೆ ಆದ್ಯತೆ, 10,000 ಇಂಜಿನ್‌ಗಳಲ್ಲಿ ಕವಚ್ ಅಳವಡಿಕೆ: ಅಶ್ವಿನಿ ವೈಷ್ಣವ್

ಲೋಕೊ ಪೈಲಟ್ ನಿಯಮಗಳ ಕುರಿತು ಮಾತನಾಡಿದ ಅವರು, “ಲೋಕೊ ಪೈಲಟ್‌ಗಳಿಗೆ ಸರಾಸರಿ ಕೆಲಸ ಮತ್ತು ವಿಶ್ರಾಂತಿ ಸಮಯವನ್ನು 2005ರಲ್ಲಿ ಸ್ಥಾಪಿಸಲಾಯಿತು. ಎಲ್ಲಾ 558 ರನ್ನಿಂಗ್ ರೂಮ್‌ಗಳು ಮತ್ತು 7,000 ಲೊಕೊ ಕ್ಯಾಬ್‌ಗಳಲ್ಲಿ ಹವಾನಿಯಂತ್ರಣವನ್ನು ಒಳಗೊಂಡಂತೆ ಲೊಕೊ ಪೈಲಟ್‌ಗಳಿಗಾಗಿ ಅನೇಕ ಸುಧಾರಣೆಗಳನ್ನು ತರಲಾಗಿದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ಹರಿಹಾಯ್ದ ಅಶ್ವಿನಿ ವೈಷ್ಣವ್, ಇಲ್ಲಿ ಕೂಗಾಡುತ್ತಿರುವವರು ತಮ್ಮ 58 ವರ್ಷಗಳ ಅಧಿಕಾರದಲ್ಲಿ 1 ಕಿ.ಮೀ ಸ್ವಯಂಚಾಲಿತ ರೈಲು ರಕ್ಷಣೆಯನ್ನು (ಎಟಿಪಿ) ಸ್ಥಾಪಿಸಲು ಏಕೆ ವಿಫಲರಾಗಿದ್ದಾರೆ ಎಂಬುದನ್ನು ವಿವರಿಸಬೇಕು. ಈಗ ಅವರು ನಮ್ಮನ್ನು ಪ್ರಶ್ನಿಸಲು ಧೈರ್ಯ ಮಾಡುತ್ತಾರೆ. ಮಮತಾ ಬ್ಯಾನರ್ಜಿ ಅವರು ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಸುರಕ್ಷತಾ ಪ್ರಗತಿಯನ್ನು ಪ್ರತಿಪಕ್ಷಗಳು ಶ್ಲಾಘಿಸಿದರೆ, ಈಗ ಅಪಘಾತ ದರಗಳ ಹೆಚ್ಚಳಕ್ಕೆ ಪ್ರಸ್ತುತ ಸರ್ಕಾರವನ್ನು ದೂಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Thu, 1 August 24

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ