Rahul Gandhi: ನಮ್ಮ ತಂದೆ ತೀರಿಕೊಂಡಾಗ ಆದ ನೋವಾಗುತ್ತಿದೆ; ವಯನಾಡ್ ಸಂತ್ರಸ್ತರ ಭೇಟಿ ಬಳಿಕ ಭಾವುಕರಾದ ರಾಹುಲ್ ಗಾಂಧಿ
ಇಡೀ ದೇಶವೇ ವಯನಾಡಿನ ಜನತೆಯ ಜೊತೆಗಿದೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿ ಬಹಳ ದುಃಖವಾಗುತ್ತಿದೆ. ನಮ್ಮ ತಂದೆ ತೀರಿಕೊಂಡಾಗ ಆಗಿದ್ದ ನೋವು ಇದೀಗ ಮತ್ತೆ ಆಗುತ್ತಿದೆ ಎಂದು ವಯನಾಡಿನಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೂಕುಸಿತದ ದುರಂತದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
ವಯನಾಡು: ಭೂಕುಸಿತ ಮತ್ತು ಪ್ರವಾಹಕ್ಕೆ ಒಳಗಾಗಿರುವ ವಯನಾಡಿಗೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ವಯನಾಡಿನ ಪ್ರವಾಹಪೀಡಿತ ಸಂತ್ರಸ್ತರನ್ನು ಭೇಟಿಯಾದ ರಾಹುಲ್ ಗಾಂಧಿ, ನಮ್ಮ ತಂದೆ ತೀರಿಕೊಂಡಾದ ಆದ ನೋವು ಆಗುತ್ತಿದೆ ಎಂದಿದ್ದಾರೆ. ಈ ವೇಳೆ ಅವರೊಂದಿಗೆ ಕಾಂಗ್ರೆಸ್ ನಾಯಕಿ ಹಾಗೂ ವಯನಾಡು ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಕೂಡ ಜೊತೆಗಿದ್ದರು.
ಇದು ವಯನಾಡಿಗೆ, ಕೇರಳಕ್ಕೆ ಮತ್ತು ರಾಷ್ಟ್ರಕ್ಕೆ ಭೀಕರ ದುರಂತವಾಗಿದೆ. ನಾವು ಪರಿಸ್ಥಿತಿಯನ್ನು ಅವಲೋಕಿಸುವುದಕ್ಕೆ ಇಲ್ಲಿಗೆ ಬಂದಿದ್ದೇವೆ. ಎಷ್ಟೋ ಜನರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಜನರು ತಮ್ಮ ತಮ್ಮ ಮನೆಗಳನ್ನ ಕಳೆದುಕೊಂಡಿದ್ದಾರೆ. ಅವರಿಗೆ ನಾವು ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ನನ್ನ ಮಟ್ಟಿಗೆ ಇದು ರಾಷ್ಟ್ರೀಯ ದುರಂತವೇ ಸರಿ. ಇದಕ್ಕೆ ಸರ್ಕಾರ ಏನು ಹೇಳುತ್ತದೆ ನೋಡೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
#WATCH | On deaths due to Wayanad landslides, Congress MP & LoP Lok Sabha, Rahul Gandhi says, “Today, I feel how I felt when my father died. Here people have not just lost a father but an entire family. We all owe these people respect and affection. The whole nation’s attention… pic.twitter.com/9dSPI6kQdx
— ANI (@ANI) August 1, 2024
ಇದನ್ನೂ ಓದಿ: Wayanad Landslide: ವಯನಾಡಿನಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ದೆಹಲಿಯಿಂದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಬಳಿಕ ರಸ್ತೆ ಮಾರ್ಗವಾಗಿ ಸುಲ್ತಾನ್ ಬತ್ತೇರಿಗೆ ಪ್ರಯಾಣ ಬೆಳೆಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಜೊತೆಗಿದ್ದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಚೂರಲ್ಮಲಾಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಮಧ್ಯಾಹ್ನ ಮೆಪ್ಪಾಡಿಯ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತಲುಪಿದರು.
VIDEO | Congress leaders Rahul Gandhi (@RahulGandhi) , and Priyanka Gandhi Vadra (@priyankagandhi) visit the ground zero at landslide-hit Wayanad, Kerala.
(Full video available on PTI Videos – https://t.co/n147TvqRQz) pic.twitter.com/WbbFvfSqAX
— Press Trust of India (@PTI_News) August 1, 2024
floo ಇದನ್ನೂ ಓದಿ: ರಾಹುಲ್ ಗಾಂಧಿ ಬಗ್ಗೆ ‘ಜಾತಿ’ ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ; ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ
“ಈ ಕಷ್ಟದ ಸಮಯದಲ್ಲಿ ಪ್ರಿಯಾಂಕಾ ಮತ್ತು ನಾನು ವಯನಾಡ್ ಜನರೊಂದಿಗೆ ನಿಂತಿದ್ದೇವೆ. ನಾವು ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಪ್ರಯತ್ನಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ, ಅಗತ್ಯವಿರುವ ಎಲ್ಲಾ ನೆರವು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಯುಡಿಎಫ್ ಬದ್ಧವಾಗಿದೆ. ಪುನರಾವರ್ತಿತ ಘಟನೆಗಳು ಭೂಕುಸಿತಗಳು ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಸಮಗ್ರ ಕ್ರಿಯಾ ಯೋಜನೆ ತುರ್ತಾಗಿ ಅಗತ್ಯವಿದೆ ಎಂದು ಎಕ್ಸ್ನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ