G7 Digital, Tech Ministers Meeting: ಭಾರತವು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ; ಅಶ್ವಿನಿ ವೈಷ್ಣವ್
ಭಾರತವು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಇದು ಸಾಧ್ಯವಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ನವದೆಹಲಿ: ಭಾರತವು ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಇದು ಸಾಧ್ಯವಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದರು. ಏಪ್ರಿಲ್ 29 ಮತ್ತು 30 ರಂದು ಜಪಾನ್‌ನ ಗುನ್ಮಾದ ತಕಾಸಾಕಿಯಲ್ಲಿ ನಡೆದ ಜಿ7 ಡಿಜಿಟಲ್ ಮತ್ತು ತಂತ್ರಜ್ಞಾನ ಸಚಿವರ ಸಭೆಯಲ್ಲಿ (G7 Digital and Tech Ministers meeting) ಭಾಗವಹಿಸಿ ಸ್ವದೇಶಕ್ಕೆ ಮರಳಿದ ನಂತರ ಅವರು ಮಾತನಾಡಿದರು. ಭಾರತ ಖಂಡಿತವಾಗಿಯೂ ತಂತ್ರಜ್ಞಾನದ ಶಕ್ತಿ ಕೇಂದ್ರವಾಗಿ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ದೂರದೃಷ್ಟಿಯ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗುತ್ತಿದೆ. ಇಂದು, ಜಾಗತಿಕ ಮಟ್ಟದಲ್ಲಿ ಜನರು ಭಾರತದ ಯಶಸ್ಸಿನಿಂದ ಪ್ರೇರೇಪಣೆಗೊಂಡು ಕಲಿಯಲು ಆಸಕ್ತಿ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಜನಸಂಖ್ಯೆಯ ಪ್ರಮಾಣ ಹೆಚ್ಚಳಕ್ಕೆ ಪರಿಹಾರಗಳನ್ನು ಒದಗಿಸಲು ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು.
ಆಧುನಿಕ ತಂತ್ರಜ್ಞಾನಗಳು, ಡೇಟಾ ಫ್ಲೋ, ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಡಳಿತದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವೈಷ್ಣವ್ ಅವರು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಆಫ್ ಇಂಡಿಯಾ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಾಮಾನ್ಯ ಇಂಟರ್ನೆಟ್ ಬಳಕೆದಾರರಿಗಿಂತಲೂ ಭಾರತೀಯ ಭಾಷೆಗಳ ಸುದ್ದಿ ಬಳಕೆದಾರಿಗೇ ಹೆಚ್ಚು ಮೌಲ್ಯ; ವರದಿ
ಸಭೆಯಲ್ಲಿ ಆಧಾರ್, ಯುಪಿಐ, ಕೋವಿನ್ ಇತ್ಯಾದಿಗಳ ಬಳಕೆಯ ಬಗ್ಗೆ ವಿವರಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಇತರ ದೇಶಗಳ ಪ್ರತಿನಿಧಿಗಳು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ಭಾರತದ ಪ್ರಗತಿಯನ್ನು ಶ್ಲಾಘಿಸಿದ್ದಾರೆ.
Participated in the G7 Digital and Tech Ministers’ Meeting in Takasaki, Japan. pic.twitter.com/zOAW159XoZ
— Ashwini Vaishnaw (@AshwiniVaishnaw) April 29, 2023
ದೇಶೀಯ 4ಜಿ ಟೆಲಿಕಾಂ ಸ್ಟಾಕ್ ಅನ್ನು ಅಭಿವೃದ್ಧಿಪಡಿಸುವಲ್ಲಿನ ಪ್ರಗತಿ ಮತ್ತು 5ಜಿ ಸೌಲಭ್ಯಕ್ಕೆ ಚಾಲನೆ ನೀಡುವಲ್ಲಿನ ಪ್ರಗತಿಯ ಕುರಿತು ಭಾರತವು ಸಭೆಯಲ್ಲಿ ಮಾಹಿತಿ ನೀಡಿದೆ. ಭಾರತದ ಟೆಲಿಕಾಂ ಸ್ಟಾಕ್ ಅನ್ನು ಜಾಗತಿಕ ಗುಣಮಟ್ಟದಲ್ಲಿ ಪರೀಕ್ಷಿಸಲು ತಮ್ಮ ತಾಂತ್ರಿಕ ತಜ್ಞರನ್ನು ಕಳುಹಿಸುವಂತೆ ಭಾರತವು ಜಿ7 ದೇಶಗಳನ್ನು ಆಹ್ವಾನಿಸಿದೆ. ಭಾರತದ ಟೆಲಿಕಾಂ ಸ್ಟಾಕ್ ಮತ್ತು 5ಜಿ ಸೌಲಭ್ಯಕ್ಕೆ ಚಾಲನೆ ನೀಡುವ ಬಗ್ಗೆ ಜಾಗತಿಕ ಸಮುದಾಯಕ್ಕೆ ತಿಳಿದುಕೊಳ್ಳಲು ಸಾಕಷ್ಟು ಆಸಕ್ತಿ ಇತ್ತು ಎಂಬುದೂ ಸಭೆಯಿಂದ ತಿಳಿದುಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:31 pm, Thu, 4 May 23