AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್​ ಗಾಂಧಿ ಗಡ್ಡ ಬಿಡುವಾಗ, ಶೇವ್​ ಮಾಡುವಾಗ ನನ್ನ ಮಾತೇ ಕೇಳೋದು: ಹಿಮಂತ ಬಿಸ್ವಾ ಶರ್ಮಾ

ರಾಹುಲ್​ ಗಾಂಧಿ ಗಡ್ಡ ಬಿಡುವಾಗ ಹಾಗೂ ಕತ್ತರಿಸುವಾಗ ನನ್ನ ಮಾತೇ ಕೇಳುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ರಾಹುಲ್​ ಗಾಂಧಿ ಗಡ್ಡ ಬಿಡುವಾಗ, ಶೇವ್​ ಮಾಡುವಾಗ ನನ್ನ ಮಾತೇ ಕೇಳೋದು: ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
ನಯನಾ ರಾಜೀವ್
|

Updated on: Jun 03, 2024 | 11:39 AM

Share

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ(Rahul Gandhi) ಗಡ್ಡ ಬಿಡುವಾಗಲೂ ಮತ್ತದನ್ನು ಶೇವ್ ಮಾಡುವಾಗಲೂ ನನ್ನ ಮಾತನ್ನೇ ಕೇಳುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2022ರಲ್ಲಿ ಭಾರತ್​ ಜೋಡೋ ಯಾತ್ರೆ ಸಂದರ್ಭದಲ್ಲಿ ನಾನು ರಾಹುಲ್​ ಗಾಂಧಿಯ ಉದ್ದನೆಯ ಗಡ್ಡದ ಬಗ್ಗೆ ಕಮೆಂಟ್​ ಮಾಡಿ ಅವರು ಇರಾಕ್​ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್​ರಂತೆ ಕಾಣುತ್ತಾರೆ ಎಂದು ಹೇಳಿದ ಬಳಿಕ ಅವರು ಕ್ಲೀನ್​ ಶೇವ್ ಮಾಡಿದ್ದರು.

ರಾಹುಲ್ ಗಾಂಧಿ ಕ್ಲೀನ್​ ಶೇವ್​ ಮಾಡಿದ ಬಳಿಕ ಅಮುಲ್​ ಬೇಬಿಯಂತೆ ಕಾಣುತ್ತಿದ್ದರು ಎಂದು ನಾನು ಹೇಳಿದಾಗ ಅವರು ಗಡ್ಡ ಬೆಳಸಿದ್ದಾರೆ.

ಟೀ ಶರ್ಟ್ ಧರಿಸುವುದು ದೊಡ್ಡ ವಿಷಯ ಎಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ವಯನಾಡ್ ಸಂಸದರು ತಮ್ಮ ಸಾರ್ವಜನಿಕ ರ್ಯಾಲಿಗಳಲ್ಲಿ ಪ್ರದರ್ಶಿಸುತ್ತಿರುವ ಸಂವಿಧಾನದ ಪುಸ್ತಕವು ಭಾರತೀಯ ಸಂವಿಧಾನವಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು.

ಮತ್ತಷ್ಟು ಓದಿ:Rahul Gandhi Horoscope: ಅಧಿಕಾರವಿರಲಿ ಇರುವುದನ್ನು ಉಳಿಸಿಕೊಂಡರೆ ರಾಹುಲ್ ಗಾಂಧಿ ಗೆದ್ದಂತೆಯೇ ಸರಿ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ದೇವಸ್ಥಾನ ಮತ್ತು ವಾರಾಣಸಿಯ ಜ್ಞಾನವಾಪಿ ಮಸೀದಿಯ ಜಾಗದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನವನ್ನು ನಿರ್ಮಿಸುವಂತಹ ಹಲವಾರು ಕಾರ್ಯಗಳನ್ನು ಕೈಗೊಳ್ಳಲಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಸ್ಥಾನಗಳನ್ನು ಗೆದ್ದರೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತದೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಮತ ಎಣಿಕೆಯ ನಂತರ ಜೂನ್​ 4ರಂದು ಪ್ರಕಟಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ