ಅಸ್ಸಾಂ: ಅಸ್ಸಾಂ (Assam) ಸರ್ಕಾರವು ಇಂದು (ಗುರುವಾರ) ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ಅಡಿಯಲ್ಲಿ ‘ಡಿಸ್ಟರ್ಬ್ಡ್ ಏರಿಯಾ’ ಘೋಷಣೆಯನ್ನು ಹಿಂತೆಗೆದುಕೊಂಡಿದೆ, ಏಕೆಂದರೆ ಅಲ್ಲಿನ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಎಎಫ್‌ಎಸ್‌ಪಿಎ ಎಂಟು ಜಿಲ್ಲೆಗಳಲ್ಲಿ ಮತ್ತು ಒಂದು ಉಪವಿಭಾಗಕ್ಕೆ ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಯಿತು ಎಂದು ಗೃಹ ಮತ್ತು ರಾಜಕೀಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀರಜ್ ವರ್ಮಾ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶವು ಈಗಾಗಲೇ ಅಕ್ಟೋಬರ್ 1, 2022 ರಿಂದ ಜಾರಿಗೆ ಬಂದಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.
Govt of Assam withdraws the declaration of 'Disturbed Area' w.e.f. 01.10.2022 from West Karbi Anglong district
"Earlier AFSPA covered 9 dists & 1 Sub-div in Assam, now it covers 8 dists & one Sub-div," Niraj Verma, Principal Secretary of Home & Political department, tells ANI. pic.twitter.com/FD10maiITD
— ANI (@ANI) October 20, 2022
ಇತ್ತೀಚೆಗೆ ಅಸ್ಸಾಂನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತಾ ಸನ್ನಿವೇಶದ ಪರಿಶೀಲನೆಯು ರಾಜ್ಯದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ ಎಂದು ಹೇಳಲಾಗಿದೆ. ಅಸ್ಸಾಂನ ರಾಜ್ಯಪಾಲರು ‘ಡಿಸ್ಟರ್ಬ್ಡ್ ಏರಿಯಾ’ ಘೋಷಣೆಯನ್ನು ಹಿಂಪಡೆಯಲು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಪಶ್ಚಿಮ ಕರ್ಬಿ ಆಂಗ್ಲಾಂಗ್‌ನಿಂದ 01.10.2022 ರಿಂದ ಜಾರಿಗೆ ಬರುವಂತೆ ಆದೇಶದಲ್ಲಿ ಹೇಳಿದೆ. ತಿನ್ಸುಕಿಯಾ, ದಿಬ್ರುಗಢ್, ಚರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್ ಮತ್ತು ದಿಮಾ ಹಸಾವೊ ಜಿಲ್ಲೆಗಳು ಸಂಘರ್ಷಗಳು ನಡೆಯುತ್ತಿತ್ತು. ಹಾಗೆಯೇ ಬರಾಕ್ ಕಣಿವೆಯ ಲಖಿಪುರದ ಕ್ಯಾಚಾರ್ ಉಪವಿಭಾಗವೂ ಸಂಘರ್ಷಗಳಿಗೆ ಕಾರಣವಾಗಿತ್ತು ಮತ್ತು ಈ ಪ್ರದೇಶ ನಕ್ಸಲ್ ಕಾರ್ಯಚರಣೆಗಳು ಹೆಚ್ಚಾಗಿತ್ತು ಎಂದು ಹೇಳಿತ್ತು ಈ ಕಾರಣಕ್ಕಾಗಿ ಈ ಪ್ರದೇಶದಲ್ಲಿ ಡಿಸ್ಟರ್ಬ್ಡ್ ಏರಿಯಾ ಎಂದು ಕರೆಯಲಾಗಿತ್ತು.
ಇದನ್ನು ಓದಿ: Supreme Court: ಪಟಾಕಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ
ನವೆಂಬರ್ 1990ರಲ್ಲಿ ಅಸ್ಸಾಂನಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಮತ್ತು ಈ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸುತ್ತಿತ್ತು. ನಂತರ ಪ್ರತಿ ಈ ಕಾಯ್ದೆಯನ್ನು ಆರು ತಿಂಗಳಿಗೊಮ್ಮೆ ವಿಸ್ತರಿಸಲಾಗಿದೆ. AFSPA ಅಡಿಯಲ್ಲಿ, ಭದ್ರತಾ ಪಡೆಗಳು ಎಲ್ಲಿ ಬೇಕಾದರೂ ಕಾರ್ಯಾಚರಣೆ ನಡೆಸಬಹುದು ಮತ್ತು ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸಬಹುದು. ನಾಗರಿಕ ಸಮಾಜ ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಸಶಸ್ತ್ರ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಪಾದಿಸಿ ಇಡೀ ಈಶಾನ್ಯದಿಂದ ಕಠಿಣ ಕಾನೂನನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಡಿಸೆಂಬರ್ 4, 2021 ರಂದು ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ದಂಗೆ-ವಿರೋಧಿ ಕಾರ್ಯಾಚರಣೆ ಮತ್ತು ಪ್ರತೀಕಾರದ ಹಿಂಸಾಚಾರದಲ್ಲಿ ಭದ್ರತಾ ಪಡೆಗಳು 14 ನಾಗರಿಕರನ್ನು ಕೊಂದ ನಂತರ ಕಾಯ್ದೆಯನ್ನು ರದ್ದುಗೊಳಿಸುವ ಕರೆ ನೀಡಲಾಯಿತು.