AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ

ಇನ್ನುಮುಂದೆ ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಸುವಂತಿಲ್ಲ ಎಂದು ಶ್ರೀ ರಾಮ ಮಂದಿರ ಟ್ರಸ್ಟ್​ ಹೇಳಿದೆ. ರಾಮಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್‌ ಜೊತೆಗಿನ ಸಭೆಯಲ್ಲಿ ಮೊಬೈಲ್‌ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ
ರಾಮ ಮಂದಿರ
ನಯನಾ ರಾಜೀವ್
|

Updated on: May 26, 2024 | 12:52 PM

Share

ಅಯೋಧ್ಯೆ(Ayodhya)ಯ ರಾಮಮಂದಿರ(Ram Mandir)ದ ಆವರಣದಲ್ಲಿ ಮೊಬೈಲ್ ಫೋನ್​ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಶನಿವಾರ ನಡೆದ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿ ಸಾರ್ವಜನಿಕರು ಮೊಬೈಲ್ ಕೊಂಡೊಯ್ಯುವುದನ್ನು ಈಗಾಗಲೇ ನಿಷೇಧಿಸಲಾಗಿತ್ತು ಆದರೆ ಈಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಫೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ರಾಮಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್‌ ಜೊತೆಗಿನ ಸಭೆಯಲ್ಲಿ ಮೊಬೈಲ್‌ ಫೋನ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟ್ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ. ಎಲ್ಲಾ ಸಂದರ್ಶಕರು ಈ ವ್ಯವಸ್ಥೆಯನ್ನು ಅನುಸರಿಸಲು ಮತ್ತು ಯಾರಿಗೂ ಯಾವುದೇ ಅನಾನುಕೂಲತೆ ಉಂಟಾಗದಂತೆ ಸಹಕರಿಸಲು ವಿನಂತಿಸಲಾಗಿದೆ.

ರಾಮ ಮಂದಿರಕ್ಕೆ ಬರುವ ಭಕ್ತರ ಮೊಬೈಲ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇದೆ ಎಂದು ಮಿಶ್ರಾ ಹೇಳಿದರು. ಜನರು ತಮ್ಮ ಮೊಬೈಲ್ ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಆವರಣದಲ್ಲಿ ಸುವ್ಯವಸ್ಥೆ ಕಾಪಾಡಲು ಟ್ರಸ್ಟ್‌ಗೆ ಸಹಕರಿಸಬೇಕು. ಭಕ್ತರು ಲಾಕರ್ ಸೌಲಭ್ಯ ಪಡೆದು ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿಟ್ಟು ದರ್ಶನ ಪಡೆಯಬಹುದಾಗಿದೆ.

ಮತ್ತಷ್ಟು ಓದಿ: ಕನ್ನಡಿಗರಿಗೆ ಮತ್ತೊಂದು ಗರಿ; ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುಪಾಲು ಜವಾಬ್ದಾರಿ ಕರ್ನಾಟಕದವರದ್ದು

ಕನಿಷ್ಠ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಮನವಿ ಭಕ್ತರು ತಮ್ಮೊಂದಿಗೆ ಕನಿಷ್ಠ ಸಾಮಾನುಗಳನ್ನು ಕೊಂಡೊಯ್ಯುವಂತೆ ಟ್ರಸ್ಟ್ ಮನವಿ ಮಾಡಿದೆ. ನೀವು ಹೆಚ್ಚು ಲಗೇಜ್ ಕೊಂಡೊಯ್ದರೆ ತಪಾಸಣೆ ಮತ್ತು ಸ್ಕ್ಯಾನಿಂಗ್ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇತರರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರೆ, ದೇವಾಲಯವನ್ನು ತಲುಪುವ ಮೊದಲು ನಿಮ್ಮ ಹೆಚ್ಚಿನ ವಸ್ತುಗಳನ್ನು ಅಲ್ಲಿಯೇ ಬಿಡಲು ಪ್ರಯತ್ನಿಸಿ ಎಂದು ಹೇಳಿದ್ದಾರೆ.

ದೇವಾಲಯದ ಶಂಕುಸ್ಥಾಪನೆ ಜನವರಿ 22 ರಂದು ನಡೆಯಿತು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯನ್ನು ಈ ವರ್ಷದ ಜನವರಿ 22 ರಂದು ಪ್ರಧಾನಿ ಮೋದಿಯವರು ನೆರವೇರಿಸಿದರು. ಪ್ರಾಣ ಪ್ರತಿಷ್ಠೆಯಿಂದ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ದೇವಸ್ಥಾನ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ