ಬಾಂಗ್ಲಾದೇಶದ ಗಡಿ ದುರ್ಬಲವಲ್ಲ; ಭಾರತದಿಂದ ರಫೇಲ್, ಬ್ರಹ್ಮೋಸ್, ಎಸ್-400 ನಿಯೋಜನೆ

ಬಾಂಗ್ಲಾದೇಶ ಮತ್ತು ನೇಪಾಳದ ನಡುವೆ ಈಶಾನ್ಯ ಭಾರತವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಭಾಗವನ್ನು ಸಿಲಿಗುರಿ ಕಾರಿಡಾರ್ ಅಥವಾ ಚಿಕನ್ ನೆಕ್ ಎಂದು ಕರೆಯಲಾಗುತ್ತದೆ. ಕಾರ್ಯತಂತ್ರ ಮತ್ತು ಭದ್ರತಾ ದೃಷ್ಟಿಕೋನದಿಂದ ಈ ಪ್ರದೇಶವು ಭಾರತದ ದುರ್ಬಲ ಕೊಂಡಿ ಎಂದು ಹೇಳಲಾಗುತ್ತದೆ. ಆದರೆ ಈಗ ರಫೇಲ್, ಬ್ರಹ್ಮೋಸ್ ಮತ್ತು ಎಸ್-400 ಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದ ಗಡಿ ದುರ್ಬಲವಲ್ಲ; ಭಾರತದಿಂದ ರಫೇಲ್, ಬ್ರಹ್ಮೋಸ್, ಎಸ್-400 ನಿಯೋಜನೆ
Yunus Pm Modi

Updated on: May 20, 2025 | 10:08 PM

ನವದೆಹಲಿ, ಮೇ 20: ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೇ ಇತ್ತ ಇನ್ನೊಂದು ಗಡಿ ದೇಶವಾದ ಬಾಂಗ್ಲಾದೇಶ ಕೂಡ ಭಾರತದೊಂದಿಗೆ ಕಿರಿಕ್ ಶುರು ಮಾಡಿತ್ತು. ರಕ್ಷಣಾ ತಜ್ಞರು ಬಾಂಗ್ಲಾದೇಶ-ನೇಪಾಳ-ಭಾರತವನ್ನು ಸಂಪರ್ಕಿಸುವ ಭಾಗವಾದ ಚಿಕನ್ ನೆಕ್ (Chicken Neck) ಅಥವಾ ಸಿಲಿಗುರಿ ಕಾರಿಡಾರ್ (Siliguri Corridor) ಅನ್ನು ದುರ್ಬಲ ಕೊಂಡಿ ಎಂದೇ ಕರೆಯುತ್ತಾರೆ. ಕಿರಿದಾದ ಪ್ರದೇಶವಾದ್ದರಿಂದ ಇದನ್ನು ಚಿಕನ್ ನೆಕ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ಕಾರ್ಯತಂತ್ರದ ದೃಷ್ಟಿಕೋನದಿಂದ ಇದು ಭಾರತಕ್ಕೆ ಬಹಳ ಮುಖ್ಯವಾದ ಕೇಂದ್ರವಾಗಿದೆ. ಭಾರತವು ಸುದರ್ಶನ ಚಕ್ರ ಎಂದು ಕರೆಯಲ್ಪಡುವ ತನ್ನ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಇಲ್ಲಿ ನಿಯೋಜಿಸಿದೆ. ಇದರೊಂದಿಗೆ, ಪರಮಾಣು ದಾಳಿ ಸಾಮರ್ಥ್ಯವಿರುವ ರಫೇಲ್ ಯುದ್ಧ ವಿಮಾನ ಮತ್ತು ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಅನ್ನು ಸಹ ಇಲ್ಲಿ ನಿಯೋಜಿಸಲಾಗಿದೆ. ಪಾಕಿಸ್ತಾನ ಮತ್ತು ಚೀನಾದ ಬೆಂಬಲದೊಂದಿಗೆ ಬಾಂಗ್ಲಾದೇಶವು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾದ ಜಮಾತ್-ಇ-ಇಸ್ಲಾಮಿಯ ನಿಯಂತ್ರಣದಲ್ಲಿರುವ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ಸೇನೆ ಈ ನಿಯೋಜನೆಯನ್ನು ಮಾಡಿದೆ.

ಈ ಬಗ್ಗೆ ಮನಿ9 ವರದಿ ಮಾಡಿದ್ದು, ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಶೇಖ್ ಹಸೀನಾ ಸರ್ಕಾರವನ್ನು ಕಳೆದ ವರ್ಷ ವಿದ್ಯಾರ್ಥಿ ಚಳವಳಿಯ ನೆಪದಲ್ಲಿ ಪತನಗೊಳಿಸಲಾಯಿತು. ಬಳಿಕ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದರು. ಇದರ ನಂತರ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯೂನಸ್ ಮತ್ತು ಅವರ ಎಲ್ಲಾ ಅಧೀನ ಅಧಿಕಾರಿಗಳು ನಿರಂತರವಾಗಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸ್ನೇಹ ಸಂಬಂಧಗಳಿಗೆ ಹಿನ್ನಡೆಯನ್ನುಂಟುಮಾಡಿದೆ. ಈಗ ಭಾರತವು ಬಾಂಗ್ಲಾದೇಶದ ಮತ್ತಷ್ಟು ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದೆ. ವಿಶೇಷವಾಗಿ ಮೊಹಮ್ಮದ್ ಯೂನಸ್ ಚೀನಾಗೆ ಭೇಟಿ ನೀಡಿದ ನಂತರ ಭಾರತದೊಂದಿಗಿನ ಬಾಂಗ್ಲಾದೇಶದ ಸಂಬಂಧ ಮತ್ತಷ್ಟು ಹಳಸಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಗೋಲ್ಡನ್ ಟೆಂಪಲ್​ನಲ್ಲಿ ಬಂದೂಕು ಇಟ್ಟಿರಲಿಲ್ಲ; ಭಾರತೀಯ ಸೇನೆ ಸ್ಪಷ್ಟನೆ

ಇದನ್ನೂ ಓದಿ
ಸರ್ವಪಕ್ಷ ಸಂಸದರ ನಿಯೋಗಕ್ಕೆ ಅಭಿಷೇಕ್ ಬ್ಯಾನರ್ಜಿಯನ್ನು ಕಳಿಸ್ತೀನಿ: ಮಮತಾ
ಕದನ ವಿರಾಮದಲ್ಲಿ ಅಮೆರಿಕ ಪಾತ್ರವಿಲ್ಲ;ಸಂಸದರಿಗೆ ವಿಕ್ರಮ್ ಮಿಶ್ರಿ ಸ್ಪಷ್ಟನೆ
ಜೈಶಂಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಪಾಕ್​ನಲ್ಲಿ ಅದೇ ಹೆಡ್​ಲೈನ್!
ಸೋಫಿಯಾ ಕುರಿತ ಹೇಳಿಕೆಗೆ ವಿಜಯ್ ಶಾ ವಿರುದ್ಧ ತನಿಖೆಗೆ ಸುಪ್ರೀಂ ಆದೇಶ

ಮೊಹಮ್ಮದ್ ಯೂನಸ್ ಅವರ ಆಹ್ವಾನದ ಮೇರೆಗೆ, ಭಾರತದ ಗಡಿಯಿಂದ ಕೇವಲ 12-15 ಕಿಲೋಮೀಟರ್ ದೂರದಲ್ಲಿರುವ ಲಾಲ್ಮೋನಿರ್ಹತ್‌ನಲ್ಲಿರುವ ಹಳೆಯ ಎರಡನೇ ಮಹಾಯುದ್ಧದ ವಾಯುನೆಲೆಯನ್ನು ಪುನರುಜ್ಜೀವನಗೊಳಿಸಲು ಚೀನಾ ಬಾಂಗ್ಲಾದೇಶಕ್ಕೆ ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ. ಈ ವಾಯುನೆಲೆಯು ಪ್ರಸ್ತುತ ಬಾಂಗ್ಲಾದೇಶದ ವಾಯುಪಡೆಯಿಂದ ಆಕ್ರಮಿಸಲ್ಪಟ್ಟಿದೆ. ಆದರೆ, ದಶಕಗಳಿಂದ ಇದು ನಿಷ್ಕ್ರಿಯವಾಗಿದೆ. ಇದು ಸಿಲಿಗುರಿ ಕಾರಿಡಾರ್‌ನಿಂದ ಕೇವಲ 135 ಕಿಲೋಮೀಟರ್ ದೂರದಲ್ಲಿದೆ. ಇತ್ತೀಚೆಗೆ ಹಲವಾರು ಚೀನೀ ಮಿಲಿಟರಿ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸ್ಥಳದ ಬಗ್ಗೆ ಚೀನಾದ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ. ಆದರೆ ಚಿಕನ್ ನೆಕ್ ಬಳಿ ಚೀನಾದ ಉಪಸ್ಥಿತಿಯನ್ನು ಭಾರತ ಒಪ್ಪುವುದಿಲ್ಲ. ಭಾರತವು ರಾಜತಾಂತ್ರಿಕ ಮಟ್ಟದಲ್ಲಿ ಬಾಂಗ್ಲಾದೇಶಕ್ಕೆ ಇದನ್ನು ಹಲವಾರು ಬಾರಿ ತಿಳಿಸಿದೆ.

ಇದನ್ನೂ ಓದಿ: ಜನರಿಗೆ ತೊಂದರೆಯಾಗದಂತೆ ಪಾಕಿಸ್ತಾನ ಸೇನೆಯನ್ನು ಮಂಡಿಯೂರುವಂತೆ ಮಾಡಿದೆವು; ರಾಜನಾಥ್ ಸಿಂಗ್

ಭಾರತದ ಪ್ರತಿಕ್ರಿಯೆ ಏನು?:

ಪೂರ್ವ ಭಾಗದಲ್ಲಿ ಉದ್ಭವಿಸುತ್ತಿರುವ ಈ ಕಳವಳಗಳ ಮಧ್ಯೆ ಭಾರತೀಯ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುರಕ್ಷಿತವಾಗಿರಿಸಲು ವ್ಯಾಪಕ ಕ್ರಮಗಳನ್ನು ಕೈಗೊಂಡಿವೆ. ಅನೇಕ ಮುಂದುವರಿದ ಮಿಲಿಟರಿ ಸ್ವತ್ತುಗಳನ್ನು ಇಲ್ಲಿ ನಿಯೋಜಿಸಲಾಗಿದೆ. ವಿಶೇಷವಾಗಿ ಹಶಿಮಾರಾ ವಾಯುನೆಲೆಯಲ್ಲಿ ಮಿಗ್ ಮತ್ತು ರಫೇಲ್ ಯುದ್ಧ ವಿಮಾನಗಳ ಹಲವಾರು ಸ್ಕ್ವಾಡ್ರನ್‌ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಬ್ರಹ್ಮೋಸ್ ಕ್ಷಿಪಣಿಗಳ ರೆಜಿಮೆಂಟ್ ಅನ್ನು ಕೂಡ ನಿಯೋಜಿಸಲಾಗಿದೆ. ಇದರೊಂದಿಗೆ, ಸೇನೆಯ ತ್ರಿಶಕ್ತಿ ದಳದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು MRSAM ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳು ಹಾಗೂ T-90 ಟ್ಯಾಂಕ್‌ಗಳೊಂದಿಗೆ ಲೈವ್-ಫೈರ್ ಅಭ್ಯಾಸವನ್ನು ನಡೆಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ