‘ಆಧಾರರಹಿತ, ದಾರಿ ತಪ್ಪಿಸುವ ಆರೋಪ’; ರಾಹುಲ್ ಗಾಂಧಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ಚುನಾವಣಾ ಆಯೋಗ
ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ಕೂಡ ಬೆಂಬಲ ನೀಡಿದ್ದರು. ತಮ್ಮ ಆರೋಪಕ್ಕೆ ಶೇ. 100ರಷ್ಟು ಸಾಕ್ಷಿ ಇದೆ ಎಂದು ಕೂಡ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ, ಇದೀಗ ಚುನಾವಣಾ ಆಯೋಗ ಕೂಡ ಸಾಕ್ಷಿ ಸಮೇತ ರಾಹುಲ್ ಗಾಂಧಿಯ ಆರೋಪ ಸುಳ್ಳು ಎಂದು ಖಾತರಿಪಡಿಸಿದೆ. ಆಧಾರರಹಿತವಾದ, ದಾರಿ ತಪ್ಪಿಸುವ ಇಂತಹ ಆರೋಪಗಳನ್ನು ಮಾಡದಿರುವುದು ಒಳ್ಳೆಯದು ಎಂದು ರಾಹುಲ್ ಗಾಂಧಿಗೆ ಬುದ್ಧಿವಾದವನ್ನೂ ಹೇಳಿದೆ.

ನವದೆಹಲಿ, ಜುಲೈ 25: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸೋಲನ್ನು ಅನುಭವಿಸುವುದಕ್ಕೆ ಚುನಾವಣೆಯಲ್ಲಿ ನಡೆದ ವಂಚನೆಯೇ ಕಾರಣ ಎಂದಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಚುನಾವಣಾ ಆಯೋಗ ಕರ್ನಾಟಕದಲ್ಲಿ ಅಕ್ರಮ ಎಸಗಲು ಅವಕಾಶ ನೀಡಿರುವುದಕ್ಕೆ ನಮ್ಮ ಬಳಿ 100% ಸಾಕ್ಷಿ ಇದೆ! ಚುನಾವಣಾ ಆಯೋಗ (Election Commission) ಅನಗತ್ಯವಾಗಿ ಮತದಾರರ ಹೆಸರು ಸೇರಿಸುವುದು, ತೆಗೆಯುವುದು ಮಾಡಿರುವುದನ್ನು ಪತ್ತೆ ಮಾಡಿದ್ದೇವೆ! ನೀವು, ನಿಮ್ಮ ಅಧಿಕಾರಿಗಳು ಇದರಿಂದ ಪಾರಾಗುತ್ತೇವೆ ಎಂದು ಭಾವಿಸಿದ್ದರೆ ಅದು ತಪ್ಪು. ನೀವು ಪಾರಾಗಲು ಸಾಧ್ಯವಿಲ್ಲ. ಏಕೆಂದರೆ, ನಾವು ನಿಮ್ಮ ಹಿಂದೆ ಬಿದ್ದಿದ್ದೇವೆ!’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ ದಾಖಲೆ ಸಮೇತ ರಾಹುಲ್ ಗಾಂಧಿಯ (Rahul Gandhi) ಆರೋಪಕ್ಕೆ ತಕ್ಕ ಉತ್ತರ ನೀಡಿದೆ.
ಕರ್ನಾಟಕದ ಒಂದು ಸ್ಥಾನದಲ್ಲಿ ಮತಗಳನ್ನು ಕದಿಯಲು ಇಸಿಐ ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಬಳಿ 100% ಪುರಾವೆಗಳಿವೆ. ಅಂತಹ ವಿಷಯ ಎಲ್ಲೆಡೆ ನಡೆಯುತ್ತಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಆಯೋಗ ಬಲವಾಗಿ ನಿರಾಕರಿಸಿತು. ತಮ್ಮ ಆರೋಪಕ್ಕೆ ಶೇ. 100ರಷ್ಟು ಪುರಾವೆಯಿದೆ ಎಂದು ಹೇಳಿಕೊಂಡಿದ್ದ ರಾಹುಲ್ ಗಾಂಧಿಯ ಹೇಳಿಕೆಯನ್ನು ಚುನಾವಣಾ ಆಯೋಗವು ಸತ್ಯ ಪರಿಶೀಲನೆ ಮಾಡಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಸೋತ ಅಭ್ಯರ್ಥಿಗಳು ಚುನಾವಣೆಯ ನಂತರ ಒಂದೇ ಒಂದು ಅರ್ಜಿಯನ್ನು ಸಲ್ಲಿಸಲಿಲ್ಲ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನಡೆದ ಮತ ವಂಚನೆಗೆ ಸಂಪೂರ್ಣ ಸಾಕ್ಷಿ ಇದೆ ಎಂದ ರಾಹುಲ್ ಗಾಂಧಿ; ಚುನಾವಣಾ ಆಯೋಗ ತಿರುಗೇಟು
ಕರ್ನಾಟಕದ ಚುನಾವಣಾ ಅಧಿಕಾರಿ ಕೂಡ ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ. ಆ ಪ್ರತಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಹೇಳಿದ್ದಾರೆ.
❌Claim made in this social media post is misleading and baseless
✅ May refer to the link provided below to read in detail the response from CEO Karnataka:https://t.co/TBcX8aUwji
Read detail in image below 👇 https://t.co/fdiDWMDttL pic.twitter.com/un0KDdcDtQ
— Election Commission of India (@ECISVEEP) July 24, 2025
“ಭಾರತೀಯ ಚುನಾವಣಾ ಆಯೋಗದ ವಿರುದ್ಧ ಇಂತಹ ಆಧಾರರಹಿತ ಮತ್ತು ಬೆದರಿಕೆ ಆರೋಪಗಳನ್ನು ಏಕೆ ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಆಶ್ಚರ್ಯವಾಗುತ್ತಿದೆ. ಈಗ ಕೂಡ ಅದೇ ಆರೋಪವನ್ನು ಮಾಡುತ್ತೀರಾ?” ಎಂದು ಚುನಾವಣಾ ಸಮಿತಿ ದಾಖಲೆಗಳನ್ನು ಲಗತ್ತಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಕರ್ನಾಟಕ ಲೋಕಸಭಾ 2024ರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಒಂದೇ ಒಂದು ಮೇಲ್ಮನವಿ ಸಲ್ಲಿಸಿಲ್ಲ ಎಂದು ಇಸಿಐ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಿದೆ ಚುನಾವಣಾ ಆಯೋಗ
“2024ರ ಲೋಕಸಭಾ ಚುನಾವಣೆಯ ನಡವಳಿಕೆಗೆ ಸಂಬಂಧಿಸಿದಂತೆ 10 ಚುನಾವಣಾ ಅರ್ಜಿಗಳಲ್ಲಿ ಸೋತ ಯಾವುದೇ ಕಾಂಗ್ರೆಸ್ ಅಭ್ಯರ್ಥಿ ಒಂದೇ ಒಂದು ಚುನಾವಣಾ ಅರ್ಜಿಯನ್ನು ಕೂಡ ಸಲ್ಲಿಸಿಲ್ಲ” ಎಂದು ಇಸಿಐ ವಕ್ತಾರರು ಹೇಳಿದ್ದಾರೆ.
Electoral rolls are prepared transparently; copies were shared with recognised political parties pic.twitter.com/XIoVx2qEru
— Chief Electoral Officer, Karnataka (@ceo_karnataka) July 24, 2025
ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪ್ರತಿಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮತದಾರರ ಪಟ್ಟಿಗಳ ಕರಡು ಮತ್ತು ಅಂತಿಮ ಪ್ರಕಟಣೆಯ ನಡುವೆ, 917928 ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದು ಅದು ಹೇಳಿದೆ.
ಮತದಾರರ ಪಟ್ಟಿಗಳಲ್ಲಿ ತಪ್ಪಾದ ಸೇರ್ಪಡೆ ಅಥವಾ ಅಳಿಸುವಿಕೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾದರೂ ಅಂತಹ ಯಾವುದೇ ಮೇಲ್ಮನವಿಯನ್ನು ಇದುವರೆಗೂ ಸ್ವೀಕರಿಸಲಾಗಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Fri, 25 July 25




