ತಿಹಾರ್ ಜೈಲಿನಲ್ಲಿ ಕೈದಿಗಳಿಂದ ಹಲ್ಲೆ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ; ಬಂಧಿತ ಐಎಸ್ ಸದಸ್ಯನಿಂದ ದೆಹಲಿ ಕೋರ್ಟ್​ಗೆ ಮೊರೆ

Tihar Jail: ತಿಹಾರ್ ಜೈಲಿನಲ್ಲಿ ರಶೀದ್ ಜಾಫರ್ ಮೇಲೆ ಹಲ್ಲೆ ನಡೆದಿದೆ ಮತ್ತು ಕೈದಿಗಳು" ಜೈ ಶ್ರೀ ರಾಮ್ "ನಂತಹ ಧಾರ್ಮಿಕ ಘೋಷಣೆಗಳನ್ನು ಕೂಗಲು ಒತ್ತಾಯಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಿಹಾರ್ ಜೈಲಿನಲ್ಲಿ ಕೈದಿಗಳಿಂದ ಹಲ್ಲೆ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ; ಬಂಧಿತ ಐಎಸ್ ಸದಸ್ಯನಿಂದ ದೆಹಲಿ ಕೋರ್ಟ್​ಗೆ ಮೊರೆ
ತಿಹಾರ್ ಜೈಲು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2021 | 3:03 PM

ದೆಹಲಿ: ದೇಶಾದ್ಯಂತ ಆತ್ಮಹತ್ಯಾ ದಾಳಿ ಮತ್ತು ಸರಣಿ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿರುವ ಇಸ್ಲಾಮಿಕ್ ಸ್ಟೇಟ್ ಸದಸ್ಯನೊಬ್ಬ ತಿಹಾರ್ ಜೈಲಿನಲ್ಲಿ ಇತರ ಕೈದಿಗಳು ಹಲ್ಲೆ ಮಾಡಿದ್ದಾರೆ, ಜೈ ಶ್ರೀ ರಾಮ್ ಎಂದು ಕೂಗಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆತ್ಮಹತ್ಯಾ ದಾಳಿ ಮತ್ತು ಸರಣಿ ಸ್ಫೋಟಗಳನ್ನು ಯೋಜಿಸುತ್ತಿದ್ದ ಆರೋಪದ ಮೇಲೆ ಐಎಸ್ ಪ್ರೇರಿತ ಗುಂಪಿನ ಸದಸ್ಯನಾಗಿದ್ದ ರಶೀದ್ ಜಾಫರ್ ಎಂಬಾತನನ್ನು 2018 ರಲ್ಲಿ ಬಂಧಿಸಲಾಗಿತ್ತು. ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಜಾಫರ್ ಸಂಚು ಹೂಡಿದ್ದನು ಎಂಬ ಆರೋಪವಿದೆ.

ಈ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ವಕೀಲ ಎಂ.ಎಸ್. ಖಾನ್ ಹೇಳಿದ್ದಾರೆ . ಈ ಘಟನೆಯನ್ನು ತಿಹಾರ್ ಜೈಲಿನಿಂದ ದೂರವಾಣಿ ಮೂಲಕ ಆರೋಪಿ ತನ್ನ ತಂದೆಗೆ ವಿವರಿಸಿದ್ದಾನೆ. “ಆರೋಪಿ ಮೇಲೆ ಹಲ್ಲೆ ನಡೆದಿದೆ ಮತ್ತು ಕೈದಿಗಳು” ಜೈ ಶ್ರೀ ರಾಮ್ “ನಂತಹ ಧಾರ್ಮಿಕ ಘೋಷಣೆಗಳನ್ನು ಕೂಗಲು ಒತ್ತಾಯಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.  “ಈ ವಿಷಯವನ್ನು ಪರಿಶೀಲಿಸಲು ಜೈಲು ಅಧೀಕ್ಷಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬಹುದು” ಎಂದು ಮನವಿಯಲ್ಲಿ  ವಿನಂತಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯುದೆಹಲಿ ಪೊಲೀಸರ ವಿಶೇಷ ಘಟಕ,ಉತ್ತರ ಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳದ ಸಹಯೋಗದೊಂದಿಗೆ ಜಾಫ್ರಾಬಾದ್ ನ ಆರು ಪ್ರದೇಶಗಳಲ್ಲಿ ದೆಹಲಿಯ ಸೀಲಂಪುರ್ , ಉತ್ತರ ಪ್ರದೇಶದ 11 ಸ್ಥಳ, ಅಮ್ರೋಹಾದ 6,ಲಕ್ನೊದ ಎರಡು ಮತ್ತು ಮೀರತ್​ನ ಎರಡು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ2018 ಡಿಸೆಂಬರ್ ತಿಂಗಳಲ್ಲಿ ಜಾಫರ್ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದರು.

ಗಣರಾಜ್ಯೋತ್ಸವ ಆಚರಣೆಗೆ ಒಂದು ತಿಂಗಳ ಮೊದಲು ಈ ಶೋಧ ಮತ್ತು ಬಂಧನ ಕಾರ್ಯಾಚರಣೆ ನಡೆದಿತ್ತು. ಸ್ಥಳೀಯವಾಗಿ ನಿರ್ಮಿಸಲಾದ ರಾಕೆಟ್ ಲಾಂಚರ್, ಆತ್ಮಾಹುತಿ ದಾಳಿಯ ಉಡುಗೆ ಮತ್ತು 112 ಟೈಮರ್‌ಗಳಾಗಿ ಬಳಸಬೇಕಾದ ಅಲಾರಾಂ ಗಡಿಯಾರಗಳನ್ನು ಶೋಧ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್ಐಎ ತಿಳಿಸಿದೆ.

ಇದನ್ನೂ ಓದಿ: ಅಂಬೇಡ್ಕರ್ ಪೋಸ್ಟರ್ ವಿಚಾರದಲ್ಲಿ ಜಗಳ, ರಾಜಸ್ಥಾನದಲ್ಲಿ ದಲಿತ ಯುವಕನ ಹತ್ಯೆ

ಇದನ್ನೂ ಓದಿ:  ಟಿವಿ ಚರ್ಚೆ ವೇಳೆ ಇಮ್ರಾನ್ ಖಾನ್ ಆಪ್ತ ನಾಯಕಿ ಫಿರ್ದೋಸ್​ನಿಂದ ವಿರೋಧ ಪಕ್ಷದ ಸಂಸದರಿಗೆ ಕಪಾಳಮೋಕ್ಷ; ವಿಡಿಯೋ ವೈರಲ್

Published On - 2:24 pm, Thu, 10 June 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್