Beating Retreat: ಆಕಾಶದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್​​ಗಳು; ಗಣರಾಜ್ಯೋತ್ಸವಕ್ಕೆ ಸಂಭ್ರಮದ ತೆರೆ

| Updated By: ಸುಷ್ಮಾ ಚಕ್ರೆ

Updated on: Jan 29, 2022 | 8:31 PM

ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆದಿದ್ದು, ಇದೇ ಮೊದಲ ಬಾರಿಗೆ ಡ್ರೋನ್​ಗಳಿಂದ ಲೈಟಿಂಗ್​ ಶೋ ಆಯೋಜಿಸಲಾಗಿತ್ತು. ಆಗಸದಲ್ಲಿ ಒಂದು ಸಾವಿರ ಡ್ರೋನ್ ಮೂಲಕ ಬೆಳಕಿನ ಚಿತ್ತಾರ ಮೂಡಿಸಲಾಯಿತು.

Beating Retreat: ಆಕಾಶದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್​​ಗಳು; ಗಣರಾಜ್ಯೋತ್ಸವಕ್ಕೆ ಸಂಭ್ರಮದ ತೆರೆ
ಬೀಟಿಂಗ್ ರೀಟ್ರೀಟ್ ಸಮಾರಂಭದಲ್ಲಿ ನರೇಂದ್ರ ಮೋದಿ
Follow us on

ನವದೆಹಲಿ: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ ನಡೆಯುತ್ತಿದ್ದು, ವಿಜಯ್​ ಚೌಕ್‌ನಲ್ಲಿ ಬೀಟಿಂಗ್ ರಿಟ್ರೀಟ್ (Beating Retreat) ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​ (Ramanth Kovind), ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು, ಸಂಸದರು, ಗಣ್ಯರು ಸಾಕ್ಷಿಯಾಗಿದ್ದಾರೆ. ಸೇನೆಯ 3 ವಿಭಾಗಗಳ ಮುಖ್ಯಸ್ಥರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಳೆದ 70 ವರ್ಷಗಳಿಂದ ರೂಢಿಯಲ್ಲಿರುವ ಬೀಟಿಂಗ್ ರಿಟ್ರೀಟ್​ನಲ್ಲಿ ಭೂಸೇನೆ, ವಾಯುಸೇನೆ, ನೌಕಾಪಡೆ, CRPF​ ಬ್ಯಾಂಡ್​ ಭಾಗಿಯಾಗಿತ್ತು. ಮೊದಲಿಗೆ ವೀರ್ ಸೈನಿಕ್​ ಟ್ಯೂನ್​ ನುಡಿಸಿದ ಯೋಧರು ನಂತರ ಪೈಪ್ಸ್ ಮತ್ತು ಡ್ರಮ್ಸ್​ ಬ್ಯಾಂಡ್, ಸಿಆರ್​ಪಿಎಫ್​ ಬ್ಯಾಂಡ್​, ಏರ್​ಫೋರ್ಸ್ ಬ್ಯಾಂಡ್, ನೇವಿ ಬ್ಯಾಂಡ್, ಆರ್ಮಿ ಬ್ಯಾಂಡ್​, ಮಾಸ್ಡ್ ಬ್ಯಾಂಡ್​ ಪ್ರದರ್ಶನ ಸೇರಿದಂತೆ ಪ್ರದರ್ಶನ ನಡೆಸಲಾಯಿತು. ಈ ಬಾರಿಯ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ 1,000 ಡ್ರೋನ್ ಹಾರಾಟ ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆದಿದ್ದು, ಇದೇ ಮೊದಲ ಬಾರಿಗೆ ಡ್ರೋನ್​ಗಳಿಂದ ಲೈಟಿಂಗ್​ ಶೋ ಆಯೋಜಿಸಲಾಗಿತ್ತು. ಆಗಸದಲ್ಲಿ ಒಂದು ಸಾವಿರ ಡ್ರೋನ್ ಮೂಲಕ ಬೆಳಕಿನ ಚಿತ್ತಾರ ಮೂಡಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಡ್ರೋನ್ ಹಾರಾಟ ನಡೆಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದ ಹಿನ್ನೆಲೆ ಲೈಟ್‌ಶೋ ಆಯೋಜಿಸಲಾಗಿತ್ತು. ಬೀಟಿಂಗ್ ರಿಟ್ರೀಟ್‌ನಲ್ಲಿ 1,000 ಡ್ರೋನ್ ಸಾಹಸ ಪ್ರದರ್ಶನ ನಡೆಸುತ್ತಿರುವುದು ಇದೇ ಮೊದಲು. ಇಷ್ಟೇ ಅಲ್ಲ 1,000 ಡ್ರೋನ್ ಹಾರಾಟ ನಡೆಸುತ್ತಿರುವ ವಿಶ್ವದ ನಾಲ್ಕನೇ ದೇಶ ಭಾರತವಾಗಿದೆ. ಚೀನಾ, ಅಮೆರಿಕ ಹಾಗೂ ರಷ್ಯಾ 1,000 ಡ್ರೋನ್ ಹಾರಾಟ ನಡೆಸಿ ಶಕ್ತಿಪ್ರದರ್ಶನ ನಡೆಸಿವೆ.

ಬೀಟಿಂಗ್ ರಿಟ್ರೀಟ್‌ನಲ್ಲಿನ 10 ನಿಮಿಷಗಳ ಕಾಲ ಡ್ರೋನ್ ಹಾರಾಟ ನಡೆಸಲಾಯಿತು. ಈ ವೇಳೆ ಸರ್ಕಾರದ 75 ಸಾಧನೆಯನ್ನು ಡ್ರೋನ್ ಮೂಲಕ ಆಗಸದಲ್ಲಿ ಪ್ರಸ್ತುತಪಡಿಸಲಾಯಿತು. ಕತ್ತಲ ಆಕಾಶದಲ್ಲಿ ಲೇಸರ್ ಹಾಗೂ ಲೈಟ್ ಮೂಲಕ ಸಾಧನೆಯನ್ನು ಆಗಸದಲ್ಲಿ ಪ್ರದರ್ಶಿಸಲಾಯಿತು.

ದೇಶದ 73ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್‌ನಲ್ಲಿ ನಡೆದ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಮೆಗಾ ಡ್ರೋನ್ ಶೋ ಇಂದು ಆಕಾಶವನ್ನು ಬೆರಗುಗೊಳಿಸಿತು.

ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPFs) ಬ್ಯಾಂಡ್‌ಗಳ ಸಿಂಕ್ರೊನೈಸ್ ಪ್ರದರ್ಶನಗಳೊಂದಿಗೆ ಸಮಾರಂಭದಲ್ಲಿ ಭಾರತೀಯ ಉತ್ಸಾಹದೊಂದಿಗೆ ಸಮರ ಸಂಗೀತದ ರಾಗಗಳು ರೈಸಿನಾ ಹಿಲ್‌ನಲ್ಲಿ ಹರಿಯಿತು.

ಇದನ್ನೂ ಓದಿ: Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?

Beating Retreat ceremony ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್; ವಿಡಿಯೊ ನೋಡಿ