ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪುರಸ್ಕಾರ: ಪ್ರಶಸ್ತಿ ಮರಳಿಸಿದ ಬೆಂಗಾಲಿ ಸಾಹಿತಿ

ಜಾನಪದ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ತಮಗೆ ನೀಡಿದ್ದ ‘ಆನಂದ ಶಂಕರ್ ಸ್ಮಾರಕ್ ಪುರಸ್ಕಾರ’ವನ್ನು ಮರಳಿಸಲು ನಿರ್ಧರಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ಸಾಹಿತ್ಯ ಪುರಸ್ಕಾರ: ಪ್ರಶಸ್ತಿ ಮರಳಿಸಿದ ಬೆಂಗಾಲಿ ಸಾಹಿತಿ
ಬೆಂಗಾಲಿ ಸಾಹಿತಿ ರತ್ನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 11, 2022 | 10:58 AM

ಕೊಲ್ಕತ್ತಾ: ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ (Mamata Banergee) ಪಶ್ಚಿಮಬಂಗ ಬಾಂಗ್ಲಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಕಾಡೆಮಿಯ ಈ ನಿರ್ಧಾರ ವಿರೋಧಿಸಿ, ಬೆಂಗಾಲಿ ಲೇಖಕಿ ಮತ್ತು ಜಾನಪದ ಸಂಶೋಧಕಿ ರತ್ನಾ ರಶೀದ್ ಬ್ಯಾನರ್ಜಿ ತಮಗೆ ನೀಡಿದ್ದ ‘ಆನಂದ ಶಂಕರ್ ಸ್ಮಾರಕ್ ಪುರಸ್ಕಾರ’ವನ್ನು ಮರಳಿಸಲು ನಿರ್ಧರಿಸಿದ್ದಾರೆ. ಅಕಾಡೆಮಿಯು ಈ ಪುರಸ್ಕಾರವನ್ನು 2019ರಲ್ಲಿ ರತ್ನಾ ಅವರಿಗೆ ನೀಡಿತ್ತು. ಅಕಾಡೆಮಿ ಅಧ್ಯಕ್ಷ ಬೃತ್ಯ ಬಸು ಅವರಿಗೆ ಪತ್ರ ಬರೆದಿರುವ ರತ್ನಾ, ‘ಮಮತಾ ಬ್ಯಾನರ್ಜಿಗೆ ಪ್ರಶಸ್ತಿ ಘೋಷಣೆಯಾದ ನಂತರ ನನಗೆ ಸಿಕ್ಕಿರುವ ಪುರಸ್ಕಾರವು ಮುಳ್ಳಿನ ಕಿರೀಟದಂತೆ ಭಾಸವಾಗುತ್ತಿದೆ’ ಎಂದು ಹೇಳಿದ್ದಾರೆ. ಬಾಂಗ್ಲಾ ಅಕಾಡೆಮಿಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರವೀಂದ್ರನಾಥ್ ಟ್ಯಾಗೋರ್ ಜನ್ಮಶತಮಾನೋತ್ಸವದಂದು ಈ ಪುರಸ್ಕಾರ ನೀಡುವ ಘೋಷಣೆ ಮಾಡಿತ್ತು.

‘ಮುಖ್ಯಮಂತ್ರಿಗೆ ಅವರ ಸಾಹಿತ್ಯ ಸಾಧನೆಗಾಗಿ ಅಕಾಡೆಮಿಯ ಪುರಸ್ಕಾರ ಘೋಷಿಸಿರುವುದರಿಂದ ನನಗೆ ಅವಮಾನವಾಗಿದೆ. ಇದು ಅತ್ಯಂತ ಕೆಟ್ಟ ಮೇಲ್ಪಂಕ್ತಿ ಆಗುತ್ತದೆ. ಮಮತಾ ಬ್ಯಾನರ್ಜಿ ಅವರಿಗೆ ಪುರಸ್ಕಾರ ಘೋಷಿಸಿರುವ ಪತ್ರದಲ್ಲಿ ಸಾಹಿತ್ಯ ಅಕಾಡೆಮಿಯು ಅವರ ಸಾಹಿತ್ಯ ಸಾಧನೆಯನ್ನು ಹೊಗಳಿದೆ. ಈ ಪತ್ರದ ಬಹುತೇಕ ಸಾಲುಗಳು ಅಸತ್ಯ’ ಎಂದು ರತ್ನಾ ಟೀಕಿಸಿದ್ದಾರೆ.

ಮಮತಾ ಬ್ಯಾನರ್ಜಿ ಬರೆದಿರುವ 900ಕ್ಕೂ ಹೆಚ್ಚು ಕವನಗಳ ಸಂಗ್ರಹ ‘ಕಬಿತಾ ಬಿತನ್’ಗೆ ಅಕಾಡೆಮಿ ಬಹುಮಾನ ಘೋಷಿಸಿದೆ. ರಾಜ್ಯ ಸರ್ಕಾರವೇ ಆಯೋಜಿಸಿದ್ದ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಕಾಡೆಮಿಯು ಈ ಪುರಸ್ಕಾರವನ್ನು ಘೋಷಿಸಿತು. ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಅಕಾಡೆಮಿಯು ಮುಖ್ಯಮಂತ್ರಿಯ ಪರವಾಗಿ ಬೃತ್ಯ ಬಸು ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿತು.

‘ಒಬ್ಬ ರಾಜಕಾರಿಣಿಯಾಗಿ ಮುಖ್ಯಮಂತ್ರಿಯನ್ನು ನಾನು ಗೌರವಿಸುತ್ತೇನೆ. ವ್ಯಾಪಕ ಜನಬೆಂಬಲ ಪಡೆದಿರುವ ಅವರು ಸತತ ಮೂರನೇ ಅವಧಿಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಿರ್ವಹಿಸುತ್ತಿದ್ದಾರೆ. ನಾನು ಕೂಡ ಅವರಿಗೇ ಮತ ಹಾಕಿದ್ದೆ. ರಾಜಕೀಯಕ್ಕೆ ಅವರ ಕೊಡುಗೆಗಳು ಮೌಲಿಕವಾದುದು. ಆದರೆ ಅದನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮೀಕರಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ರತ್ನಾ ರಶೀದ್ ಬ್ಯಾನರ್ಜಿ ಹೇಳಿದ್ದಾರೆ.

ಅಕಾಡೆಮಿಯು ಪ್ರಶಸ್ತಿ ಘೋಷಿಸಿದ್ದರೂ ಮುಖ್ಯಮಂತ್ರಿ ಅದನ್ನು ತಿರಸ್ಕರಿಸುವ ಪ್ರೌಢತೆ ತೋರಿಸಬೇಕಿತ್ತು. ಹೀಗೆ ಮಾಡಿದ್ದರೆ ಅವರ ಬಗೆಗಿನ ಗೌರವ ಇಮ್ಮಡಿಸುತ್ತಿತ್ತು ಎಂದು ರತ್ನಾ ಹೇಳಿದ್ದಾರೆ. ರತ್ನಾ ಅವರು ಜಾನಪದ ಸಂಸ್ಕೃತಿ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಿ ಸಾಕಷ್ಟು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಮಮತಾ ಬ್ಯಾನರ್ಜಿ ಅವರು ಕವನ ಸಂಕಲನ ‘ಕಬಿತಾ ಬಿತನ್’ 2020ರಲ್ಲಿ ಕೊಲ್ಕತ್ತಾದಲ್ಲಿ ನಡೆದಿದ್ದ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಿತ್ತು.

ಇದನ್ನೂ ಓದಿ: ಅಮಿತ್ ಶಾ ಮನೆಗೆ ಬಂದಾಗ ಸಿಹಿ ಮೊಸರು ತಿನ್ನಿಸಿ ಅಂತ ಸೌರವ್ ಗಂಗೂಲಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ